ಗುರುಗ್ರಾಮ: ಗಾಜಿಯಾಬಾದ್‌ನ ಕಾಲುವೆಯಲ್ಲಿ ಪ್ರಿನ್ಸ್ ರಾಣಾ ಎಂಬ 33 ವರ್ಷದ ವ್ಯಕ್ತಿಯ ಕೊಳೆತ ಶವ ಪತ್ತೆಯಾಗಿದ್ದು ಗುರುಗ್ರಾಮದ ಆತನ ಕುಟುಂಬ ಇದರಿಂದ ಗಾಬರಿಗೊಂಡಿದೆ. ಆ್ಯಪ್ ಅಗ್ರಿಗೇಟರ್‌ನೊಂದಿಗೆ ಯೋಜನಾ ವ್ಯವಸ್ಥಾಪಕರಾಗಿರುವ ಪ್ರಿನ್ಸ್, ಜನವರಿ 15ರಂದು ಗುರುಗ್ರಾಮದಲ್ಲಿರುವ ತಮ್ಮ ಮನೆಯಿಂದ ಇದ್ದಕ್ಕಿದ್ದಂತೆ ಆಚೆ ಹೊರಟಿದ್ದರು. ಅವರ ಪತ್ನಿ ತನ್ನ ಗಂಡ ಕಾಣೆಯಾಗಿದ್ದಾರೆ ಎಂದು ಮರುದಿನ ದೂರು ದಾಖಲಿಸಿದ್ದಾರೆ.
ಪೊಲೀಸ್ ತನಿಖೆಯಲ್ಲಿ ಪ್ರಿನ್ಸ್ ಮನೆಯಲ್ಲೇ ತನ್ನ ಫೋನ್ ಬಿಟ್ಟು ಹೋಗಿದ್ದಾನೆ ಎಂದು ಪತ್ತೆಯಾಗಿದೆ. ಅವರ ಮೊಬೈಲ್ ಬ್ರೌಸಿಂಗ್ ಹಿಸ್ಟರಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ ಹುಡುಕಾಟ ನಡೆಸಿರುವುದು ಪತ್ತೆಯಾಗಿದೆ. ಗಂಗ್ನಹಾರ್ ಕಾಲುವೆಯ ಬಳಿ ಶವ ಪತ್ತೆಯಾಗಿದೆ ಎಂದು ಗಾಜಿಯಾಬಾದ್ ಪೊಲೀಸರಿಗೆ ತಿಳಿಸಲಾಯಿತು.
ಇದನ್ನೂ ಓದಿ: ಮತ್ತೆ ಒಂದಾಗಿ ಬಾಳೋಣಾ ಎಂದು ಕರೆಯಲು ಹೋಗಿ ಹೆಂಡ್ತಿ ಮನೆಯಲ್ಲೇ ಪತಿ ಆತ್ಮಹತ್ಯೆ!
ಆ ಕೊಳೆತ ದೇಹವನ್ನು ಹುಡುಕಿದಾಗ ಅವರು ಪ್ರಿನ್ಸ್ ಅವರ ಬ್ಯಾಗ್ನಲ್ಲಿ ಅವರ ಆಧಾರ್ ಕಾರ್ಡ್ ಪತ್ತೆಯಾಗಿದೆ. ಅವರ ಕುಟುಂಬ ಅವರ ಗುರುತನ್ನು ದೃಢಪಡಿಸಿತು. ಪೊಲೀಸರು ಆತನ ಸಾವಿಗೆ ಕಾರಣವನ್ನು ನಿರ್ಧರಿಸಲು ಶವವನ್ನು ಶವಪರೀಕ್ಷೆಗೆ ಕಳುಹಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ