ಬೆಂಗಳೂರು: ಮಹಿಳೆಯ ಮೊಬೈಲ್ ಹ್ಯಾಕ್ ಮಾಡಿದ ಹ್ಯಾಕರ್ಗಳು ಆಕೆಯ ಸ್ನೇಹಿತರಿಗೆ ಅಶ್ಲೀಲ ಸಂದೇಶ ಕಳಿಸಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಹ್ಯಾಕರ್ಸ್ ಹಾವಳಿಯಿಂದ ಬೇಸತ್ತ ಸಂತ್ರಸ್ಥ ಮಹಿಳೆ ಠಾಣೆಗೆ ದೂರು ನೀಡಿದ್ದಾಳೆ.
ನಗರದ ಬಸವನಗುಡಿ ನಿವಾಸಿಯಾದ 36 ವರ್ಷದ ವಿವಾಹಿತ ಮಹಿಳೆಯ ನಂಬರ್ ಹ್ಯಾಕ್ ಆಗಿದೆ. ಸಂತ್ರಸ್ಥೆ ಹಾಗೂ ಆಕೆಯ ಸ್ನೇಹಿತರು ಸೇರಿ ಒಂದು WhatsApp ಗ್ರೂಪ್ ಕ್ರಿಯೇಟ್ ಮಾಡಿದ್ರು. ಆ ಗ್ರೂಪ್ನಲ್ಲಿ ಸಂತ್ರಸ್ಥ ಮಹಿಳೆ ಕೂಡ ಅಡ್ಮಿನ್ ಆಗಿದ್ರು.
ಈ ನಡುವೆ ಯಾರೋ ಅಪರಿಚಿತರು ಕರೆ ಮಾಡಿ ನಿಮಗೆ ಲಿಂಕ್ ಒಂದು ಕಳುಹಿಸಿದ್ದೇವೆ. ಅದನ್ನ ಓಪನ್ ಮಾಡಿ ನೋಡಿ ಎಂದು ಕಾಲ್ ಕಟ್ ಮಾಡಿದ್ದಾರೆ. ಅದರಂತೆ ಲಿಂಕ್ ಓಪನ್ ಮಾಡುತ್ತಿದ್ದಂತೆ ಮಹಿಳೆಯ ನಂಬರ್ ಹ್ಯಾಕ್ ಆಗಿದೆ. ಬಳಿಕ ಗ್ರೂಪ್ನಲ್ಲಿರೋ ಎಲ್ಲಾ ಮಹಿಳೆಯರ ನಂಬರ್ಗೆ ಅಶ್ಲೀಲ ಫೋಟೋಗಳನ್ನ ಕಳುಹಿಸಲಾಗಿದೆ.
ಅಷ್ಟೇ ಅಲ್ಲದೇ ಮಹಿಳೆ ನಂಬರ್ನಿಂದ ದುಷ್ಕರ್ಮಿಗಳು ಅಶ್ಲೀಲ ವಿಡಿಯೋಗಳನ್ನೂ ಸಹ ಕಳುಹಿಸಿದ್ದಾರೆ. ಬಳಿಕ ಮಹಿಳೆಯ ನಂಬರ್ನಿಂದ ಸ್ನೇಹಿತರಿಗೆ ಪರ್ಸನಲ್ ಮೆಸೇಜ್ ಕಳಿಸಿ ನಿಮ್ಮ ಹಾಟ್ ಫೋಟೋಗಳಿದ್ದರೆ ಕಳುಹಿಸಿ, ಒಂದೊಂದು ಫೋಟೋಗೆ ಇಂತಿಷ್ಟು ಹಣ ಕೊಡುತ್ತೇನೆ. ನೀವು ಆರಾಮವಾಗಿ ಜೀವನ ನಡೆಸಬಹುದು ಎಂದು ಮೆಸೇಜ್ ಮಾಡಿದ್ದಾರಂತೆ.
ಈ ವಿಚಾರ ತಿಳಿಯುತ್ತಿದ್ದಂತೆ ಶಾಕ್ ಆದ ಮಹಿಳೆಯು ನಗರದ ದಕ್ಷಿಣ ವಿಭಾಗ Cyber Security ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
Published On - 12:40 pm, Thu, 6 August 20