Crime News: ಕೈ ಕಾಲು ಕಟ್ಟಿ ಹಾಕಿ ನೇಣು ಬಿಗಿದು ಆರ್​.ಟಿ.ಓ ಕಛೇರಿ ಮುಂಭಾಗ ವ್ಯಕ್ತಿಯ ಕೊಲೆ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 13, 2022 | 12:53 PM

ಕಾಂಗ್ರೆಸ್‌ ಮುಖಂಡನ ಮನೆಯಲ್ಲಿ 3 ಕೆ.ಜಿ ಚಿನ್ನಾಭರಣ ಕಳವು ಮಾಡಲಾಗಿದೆ. ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ ನಿನ್ನೆ ಘಟನೆ ನಡೆದಿದೆ. ಕಾಂಗ್ರೆಸ್ ಮುಖಂಡ ಚಂದ್ರಶೇಖರ್‌ ಅವರ ಕ್ಲಾಸಿಕ್‌ ಆರ್ಕಿಡ್‌ ಲೇಔಟ್‌ನ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಲಾಗಿದೆ.

Crime News: ಕೈ ಕಾಲು ಕಟ್ಟಿ ಹಾಕಿ ನೇಣು ಬಿಗಿದು ಆರ್​.ಟಿ.ಓ ಕಛೇರಿ ಮುಂಭಾಗ ವ್ಯಕ್ತಿಯ ಕೊಲೆ
ಕೊಲೆಯಾದ ವ್ಯಕ್ತಿ
Follow us on

ಚಿಕ್ಕೋಡಿ: ಕೈ ಕಾಲು ಕಟ್ಟಿ ಹಾಕಿ ನೇಣು ಬಿಗಿದು ವ್ಯಕ್ತಿಯ ಕೊಲೆ (Murder) ಮಾಡಿರುವಂತಹ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹೊರವಲಯದ ಆರ್.ಟಿ.ಓ ಕಛೇರಿ ಮುಂಭಾಗದಲ್ಲಿ ಘಟನೆ ನಡೆದಿದೆ. ಅಥಣಿ ತಾಲೂಕಿನ ದರೂರ ಗ್ರಾಮದ ಸಿದ್ದಾರೂಡ ಶಿರಗುಪ್ಪಿ (25) ಕೊಲೆಯಾದ ವ್ಯಕ್ತಿ. ಸಿದ್ಧಾರೂಢ ಶಿರಗುಪ್ಪಿ ಕಳೆದ 2 ವರ್ಷಗಳಿಂದ ಪರಪ್ಪಾ ಸವದಿ ಅವರ ಕಾರು ಚಾಲನಕನಾಗಿದ್ದ. ಪರಪ್ಪ ಸವದಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ ಸವದಿ ಅವರ ಸಹೋದರ. ಕಳೆದ ರಾತ್ರಿ ಪರಪ್ಪ ಸವದಿ ಜೊತೆ ಉಗಾರ ಗ್ರಾಮಕ್ಕೆ ತೆರಳಿದ್ದ ಸಿದ್ಧಾರೂಢ. ರಾತ್ರಿ 11 ಘಂಟೆಗೆ ಅಥಣಿಗೆ ವಾಪಸ್ ಬಂದು, ರಾತ್ರಿ ಮನೆಗೆ ತೆರಳುತ್ತಿರುವಾಗ ತಡ ರಾತ್ರಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇತರೇ ಸುದ್ದಿಗಳು:

ಬೆಂಗಳೂರು: ಕಾಂಗ್ರೆಸ್‌ ಮುಖಂಡನ ಮನೆಯಲ್ಲಿ 3 ಕೆ.ಜಿ ಚಿನ್ನಾಭರಣ ಕಳವು ಮಾಡಲಾಗಿದೆ. ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ ನಿನ್ನೆ ಘಟನೆ ನಡೆದಿದೆ. ಕಾಂಗ್ರೆಸ್ ಮುಖಂಡ ಚಂದ್ರಶೇಖರ್‌ ಅವರ ಕ್ಲಾಸಿಕ್‌ ಆರ್ಕಿಡ್‌ ಲೇಔಟ್‌ನ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಲಾಗಿದೆ. ಮನೆಯವರು ಧರ್ಮಸ್ಥಳಕ್ಕೆ ತೆರಳಿದ್ದ ವೇಳೆ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಮನೆ ಸೆಕ್ಯೂರಿಟಿಗಾರ್ಡ್‌ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಬೈಕ್​ನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಕಾಡಾನೆ ದಾಳಿ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮದಲ್ಲಿ ಘಟನೆ ನಡೆದಿದ್ದು, ಆನೆ ದಾಳಿಯಿಂದ ಗುರು ಪ್ರಸಾದ್ ಎಂಬಾತನಿಗೆ ಗಂಭೀರ ಗಾಯವಾಗಿದೆ. ಸೊಸೈಟಿಗೆ ಹಾಲು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಘಟನೆ‌ ಸಂಭವಿಸಿದೆ. ದಾಳಿ ನಡೆಸಿ ಯುವಕನನ್ನು ಕಾಡಾನೆ‌ ದೂರ ಎಳೆದೊಯ್ದಿದೆ. ಬಳಿಕ ಸ್ಥಳೀಯರು ಸೇರಿ ಆನೆಯನ್ನು ಓಡಿಸಿ ಯುವಕನ ರಕ್ಷಣೆ ಮಾಡಿದ್ದು, ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಗೊಂಡ ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಬೀದರ್: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೇಲಾಧಿಕಾರಿಗಳ ಕಿರುಕುಳದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಿಂಧುತ್ವ ಪ್ರಮಾಣ ಪತ್ರಕ್ಕಾಗಿ ಅಧಿಕಾರಿಗಳು ಒತ್ತಡ ಹೇರಿದ್ದು, ಸಿಂಧುತ್ವ ಪತ್ರ ಸಿಗದ್ದಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾಲ್ಕಿ ಡಿಪೋದ ಡ್ರೈವರ್​ ಆದ ಓಂಕಾರ ಶೇರಿಕಾರ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಕುಮಾರ್ ಚಿಂಚೊಳ್ಳಿ ಗ್ರಾಮದವರು. ಬೀದರ್ ಜಿಲ್ಲೆಯ ವಿವಿಧ ಡಿಪೋದಲ್ಲಿ ಹತ್ತು ವರ್ಷದಿಂದ ಸೇವೆಸಲ್ಲಿಸುತ್ತಿದ್ದರು. ಬೀದರ್ ಜಿಲ್ಲೆಯ ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:

ಹಾಸನ: ನೀವೇ ಮಾತನಾಡಿ ನಾನು ಎದ್ದು ಹೋಗ್ತೀನಿ; ರೈತರ ಮುಂದೆ ಸಿಟ್ಟಿಗೆದ್ದ ಶೋಭಾ ಕರಂದ್ಲಾಜೆ!