ಭುಗಿಲೆದ್ದ ಆಸ್ತಿ ವಿವಾದ; ಕುಟುಂಬದ ಐವರನ್ನು ಕೊಚ್ಚಿ ಕೊಂದು, ಸುಟ್ಟ ಮಾಜಿ ಸೈನಿಕ
ಆಸ್ತಿಗಾಗಿ ಅದೆಷ್ಟೋ ಕೊಲೆಗಳೇ ನಡೆದುಹೋಗಿವೆ. ಈ ದುರಾಸೆಯ ಮುಂದೆ ಸಂಬಂಧಗಳಿಗೆ ಅರ್ಥವೇ ಇಲ್ಲದಂತಾಗಿದೆ. ಹರಿಯಾಣದ ಅಂಬಾಲಾದಲ್ಲಿ ಆಸ್ತಿ ವಿವಾದ ಭುಗಿಲೆದ್ದು ತನ್ನ ಕುಟುಂಬದ ಐವರನ್ನು ಮಾಜಿ ಸೈನಿಕ ಕೊಲೆ ಮಾಡಿರುವ ಘಟನೆ ನಡೆದಿದೆ.
ಅಂಬಾಲಾ: ಹರಿಯಾಣದ ಅಂಬಾಲಾದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಮಾಜಿ ಸೈನಿಕನೊಬ್ಬ ತನ್ನ ಕುಟುಂಬದ ಐವರು ಸದಸ್ಯರನ್ನು ಕೊಂದಿದ್ದಾನೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ ಎಂದು ವರದಿಯಾಗಿದೆ. ಅಂಬಾಲಾದ ನಾರೈಂಗರ್ ಬ್ಲಾಕ್‌ನ ರಾಟೌರ್ ಗ್ರಾಮದಲ್ಲಿ ಈ ಕೊಲೆ ನಡೆದಿದೆ. ಮಾಜಿ ಸೈನಿಕ ತನ್ನ ತಾಯಿ, ಸಹೋದರ ಸೇರಿ ಅವನ ಕುಟುಂಬದ ಐವರನ್ನು ಕೊಲೆ ಮಾಡಿದ್ದಾನೆ.
ಮಾಜಿ ಸೈನಿಕ ರಾಟೌರ್ ಗ್ರಾಮದ ಗ್ರಾಮವೊಂದರ ಹೊರವಲಯದಲ್ಲಿರುವ ಡೇರಾದಲ್ಲಿ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಾಜಿ ಸೈನಿಕ ತನ್ನ ತಾಯಿ, ಸಹೋದರ, ಅತ್ತಿಗೆ ಮತ್ತು ಸಹೋದರನ ಇಬ್ಬರು ಮಕ್ಕಳನ್ನು ಆತ ಹತ್ಯೆ ಮಾಡಿದ್ದಾನೆ. ಭಾನುವಾರ ರಾತ್ರಿ 10.30ರ ಸುಮಾರಿಗೆ ಈ ಕೊಲೆ ನಡೆದಿದೆ.
ಹತ್ಯೆಗೀಡಾದವರನ್ನು ಹರೀಶ್ (35), ಸೋನಿಯಾ (32), ಸರೂಪಿ (60) ಯಾಶಿಕಾ (5) ಮತ್ತು 5 ತಿಂಗಳ ಮಗು ಎಂದು ಪೊಲೀಸರು ಗುರುತಿಸಿದ್ದಾರೆ. ಈ ಘಟನೆಯಲ್ಲಿ ಮಾಜಿ ಸೈನಿಕನ ತಂದೆ 65 ವರ್ಷದ ಓಂ ಪ್ರಕಾಶ್ ಹಾಗೂ ಹರೀಶ್ ಎಂಬುವವರ ಪುತ್ರಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: Viral: ಹಣಕ್ಕಾಗಿ ಬ್ಲಾಕ್‌ಮೇಲ್; ಗೆಳತಿಯ ಕಾಟ ತಾಳಲಾರದೆ ಆತ್ಮಹತ್ಯೆಯ ದಾರಿ ಹಿಡಿದ ಉದ್ಯಮಿ
ಆರೋಪಿಯನ್ನು ಭೂಷಣ್ ಎಂದು ಗುರುತಿಸಲಾಗಿದೆ. ಹರೀಶ್ ಎಂಬುವವರ ಮನೆಯ ಪಕ್ಕದಲ್ಲೇ ವಾಸವಾಗಿದ್ದ ಆತ ಪ್ರತ್ಯೇಕ ಮನೆಯಲ್ಲಿ ಅವರು ವಾಸವಾಗಿದ್ದ. ಅವರ ಕುಟುಂಬವು ಅವರ ಪತ್ನಿ ಮತ್ತು 2 ಪುತ್ರರನ್ನು ಒಳಗೊಂಡಿದೆ. ಇದೀಗ ಪೊಲೀಸರು ಆರೋಪಿ ಹಾಗೂ ಆತನ ಸೋದರ ಮಾವಂದಿರನ್ನು ಬಂಧಿಸಿದ್ದಾರೆ. ಆರೋಪಿಯ ತಂದೆ ಓಂ ಪ್ರಕಾಶ್ ಈ ಕೊಲೆಯ ಬಗ್ಗೆ ದೂರು ಸಲ್ಲಿಸಿದ್ದಾರೆ.
ಭೂಷಣ್ ಕೊಡಲಿಯಿಂದ ತನ್ನ ಕುಟುಂಬ ಸದಸ್ಯರನ್ನು ಕೊಚ್ಚಿ ಕೊಂದು, ನಂತರ ಸುಟ್ಟು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹರೀಶ್ ಅವರ ಮಗಳು ಸಹ ಗಾಯಗೊಂಡು ಸುಟ್ಟುಹೋಗಿದ್ದಾಳೆ. ಆದರೆ ಅವಳು ತನ್ನನ್ನು ಉಳಿಸಿಕೊಳ್ಳಲು ಹತ್ತಿರದ ನದಿಗೆ ಹಾರಿದ್ದಳು. ಬಳಿಕ ಆಕೆಯನ್ನು ಪೊಲೀಸರು ರಕ್ಷಿಸಿದ್ದಾರೆ. ಓಂ ಪ್ರಕಾಶ್ ಮತ್ತು 7 ವರ್ಷದ ಬಾಲಕಿಯನ್ನು ಚಂಡೀಗಢದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ.
ಇದನ್ನೂ ಓದಿ: ಅಶ್ಲೀಲ ವೀಡಿಯೊ ನೋಡಿ 8ರ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆಗೈದ ಮೂವರು ಬಾಲಕರು
ಆರೋಪಿಗಳು ರಾತ್ರಿಯಲ್ಲಿ ಎಲ್ಲಾ ದೇಹಗಳನ್ನು ಸುಡಲು ಪ್ರಯತ್ನಿಸುತ್ತಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿತು ಎಂದು ಪ್ರದೇಶದ ಎಸ್ಪಿ ಸುರೇಂದರ್ ಸಿಂಗ್ ಅವರು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ. ಮಧ್ಯರಾತ್ರಿ 1:30ರ ಸುಮಾರಿಗೆ ಈ ಮಾಹಿತಿ ಬಂದಿದ್ದು, ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿವೆ. ಆ ಪ್ರದೇಶವನ್ನು ಪರಿಶೀಲಿಸುವುದರ ಜೊತೆಗೆ, ಅವರು ಕೊಲೆಗಳು ನಡೆದ ಅಪರಾಧದ ಸ್ಥಳವನ್ನೂ ಸಹ ಪರಿಶೀಲಿಸಲಾಗಿದೆ.
ಭೂಷಣ್ ಹೊರತುಪಡಿಸಿ ತನ್ನ ಇಬ್ಬರು ಸೋದರ ಮಾವಂದಿರು ಕೂಡ ಇಡೀ ಘಟನೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಪೊಲೀಸ್ ತಂಡ ಇಡೀ ರಾತ್ರಿ ಮೂವರಿಗಾಗಿ ಹುಡುಕಾಟ ನಡೆಸಿ ಅವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ. ನರೇಂಗರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮೃತರ ಅರ್ಧ ಸುಟ್ಟ ದೇಹಗಳನ್ನು ಅಂಬಾಲಾ ಕಂಟೋನ್ಮೆಂಟ್‌ನ ಸಿವಿಲ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ