AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮನಗರ: ಗೀಸರ್‌ನಿಂದ ವಿಷಾನಿಲ ಸೋರಿಕೆ, ಉಸಿರುಗಟ್ಟಿ ತಾಯಿ, ಮಗ ಸಾವು

ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದಲ್ಲಿ ಗೀಸರ್‌ನಿಂದ ವಿಷಾನಿಲ ಸೋರಿಕೆಯಾಗಿ ತಾಯಿ ಮತ್ತು ಮಗ ದುರ್ಮರಣ ಹೊಂದಿರುವಂತಹ ಘಟನೆ ನಡೆದಿದೆ. ಉಸಿರುಗಟ್ಟಿ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ. ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ಘಟನೆ ಸಂಭವಿಸಿದೆ. ಮತ್ತೊಂದು ಪ್ರಕರಣದಲ್ಲಿ ಈಜುಕೊಳ ಸ್ವಚ್ಛಗೊಳಿಸುವಾಗ ವಿದ್ಯುತ್ ತಗುಲಿ ಕೋಚ್ ಸಾವನ್ನಪ್ಪಿದ್ದಾರೆ.

ರಾಮನಗರ: ಗೀಸರ್‌ನಿಂದ ವಿಷಾನಿಲ ಸೋರಿಕೆ, ಉಸಿರುಗಟ್ಟಿ ತಾಯಿ, ಮಗ ಸಾವು
ರಾಮನಗರದಲ್ಲಿ ಗೀಸರ್‌ನಿಂದ ವಿಷಾನಿಲ ಸೋರಿಕೆ: ತಾಯಿ, ಮಗ ಸಾವು
Follow us
ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ಗಂಗಾಧರ​ ಬ. ಸಾಬೋಜಿ

Updated on:Jul 22, 2024 | 4:26 PM

ರಾಮನಗರ, ಜುಲೈ 22: ಗೀಸರ್‌ನಿಂದ (geyser) ವಿಷಾನಿಲ ಸೋರಿಕೆಯಾಗಿ ತಾಯಿ ಮತ್ತು ಮಗ ಸಾವನ್ನಪ್ಪಿರುವಂತಹ (death) ಘಟನೆ ಜಿಲ್ಲೆಯ ಮಾಗಡಿ ಪಟ್ಟಣದಲ್ಲಿ ನಡೆದಿದೆ. ಶೋಭಾ (40), ಪುತ್ರ ದಿಲೀಪ್ (16) ಮೃತಪಟ್ಟ ದುರ್ದೈವಿಗಳು. ಗೀಸರ್‌ ಆನ್ ಮಾಡಿ ಮನೆಯ ಸದಸ್ಯರು ಮರೆತು ಹೋಗಿದ್ದಾರೆ. ಬಾಗಿಲು, ಕಿಟಕಿ ಮುಚ್ಚಿದ್ದರಿಂದ ಮನೆಯೊಳಗೆ ವಿಷಾನಿಲ ಆವರಿಸಿಕೊಂಡಿದೆ. ಹೀಗಾಗಿ ಶ್ವಾಸಕೋಶ ವಿಷಹೊಕ್ಕಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ.

ಸ್ಥಳಕ್ಕೆ ಮಾಗಡಿ ಪೊಲೀಸರು ಭೇಟಿ ನೀಡ ಪರಿಶೀಲನೆ ಮಾಡಿದ್ದು, ಮಾಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಯಿ‌ ಮತ್ತು ಮಗನ ಮೃತದೇಹವನ್ನು ಶಿಫ್ಟ್‌ ಮಾಡಲಾಗಿದೆ. ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ಘಟನೆ ಸಂಭವಿಸಿದೆ.

ಈಜುಕೊಳ ಸ್ವಚ್ಛಗೊಳಿಸುವಾಗ ವಿದ್ಯುತ್ ತಗುಲಿ ಕೋಚ್ ಸಾವು

ಹುಬ್ಬಳ್ಳಿ: ಈಜುಕೊಳ ಸ್ವಚ್ಛಗೊಳಿಸುವಾಗ ವಿದ್ಯುತ್ ತಗುಲಿ ವ್ಯಕ್ತಿ ಓರ್ವ ಸಾವನ್ನಪ್ಪಿರುವಂತಹ ಘಟನೆ ನಗರದಲ್ಲಿ ನಡೆದಿದೆ. ನಗರದ ಆಕ್ಸಫರ್ಡ್ ಕಾಲೇಜ ಬಳಿ ಇರುವ ಅಮನ್ ಅಪಾರ್ಟ್​​ಮೆಂಟ್ ನಿವಾಸಿ ಶಿವಪುತ್ರಪ್ಪ ದಾಣಿಗಲ್​ ಮೃತ ವ್ಯಕ್ತಿ. ನವೀನ್ ಪಾರ್ಕ್ ಅಸೋಸಿಯೇಷನ್ ನಿರ್ವಹಣೆಯ ಎಮ್​ಆರ್ ಆಕಾಡೆಮಿಯ ಸ್ವಿಮ್ಮಿಂಗ್ ಫೂಲ್​ನಲ್ಲಿ ಕೋಚ್ ಆಗಿ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ದುಷ್ಕರ್ಮಿಗಳಿಂದ ಚಾಕುವಿನಿಂದ ಇರಿದು ಪೂಜಾರಿಯ ಬರ್ಬರ ಕೊಲೆ

ಕಳೆದ ಎರಡು ದಿನಗಳ ಹಿಂದೆ ಈಜುಕೊಳ ಸ್ವಚ್ಛಗೊಳಿಸುವಾಗ ವಿದ್ಯುತ್ ತಗುಲಿ ದುರಂತ ಸಂಭವಿಸಿದೆ. ವಿದ್ಯುತ್ ತಗುಲಿ ಸಾವನ್ನಪ್ಪಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ‌ ಆಗಿದೆ. ಅ್ಯಸಿಡ್ ಹಾಕಿ ವಿದ್ಯುತ್ ಚಾಲಿತ ಗನ್​ ನಿಂದ ಈಜುಕೊಳ ಸ್ವಚ್ಛಗೊಳಿಸುವಾಗ ದುರ್ಘಟನೆ ನಡೆದಿದೆ.

ಇದನ್ನೂ ಓದಿ: ಬಸ್​ಗೆ ಕಾಯ್ತಿದ್ದ ವಿದ್ಯಾರ್ಥಿನಿ ಅಪಹರಣ: ನಾಲ್ವರು ಯುವಕರಿಂದ ಕಿಡ್ನ್ಯಾಪ್‌ ಆರೋಪ

ಸಿಸಿ ಕ್ಯಾಮೆರಾದಲ್ಲಿ ಮತ್ತೊರ್ವ ವ್ಯಕ್ತಿ ಆತನನ್ನು ಎಬಿಸಲು ಪ್ರಯತ್ನಿಸುತ್ತಾರೆ. ಆತನಿಗೆ ಕರೆಂಟ್ ಶಾಕ್ ಹೊಡೆದ ಪರಿಣಾಮ ಕೆಳಗೆ ಬಿದ್ದ ಮತ್ತೋರ್ವ ವ್ಯಕ್ತಿ. ಇದೀಗ ಈ ವಿಡಿಯೋ ವೈರಲ್ ಆಗಿದೆ. ಹುಬ್ಬಳ್ಳಿಯ ಕೇಶ್ವಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:21 pm, Mon, 22 July 24