ತಾನೊಬ್ಬ ಪೊಲೀಸ್ ಹಣ ನೀಡದಿದ್ದರೆ ಅತ್ಯಾಚಾರ ಮಾಡುವೆ ಎಂದು ಬೆದರಿಸಿ ಮಹಿಳಾ ಥೆರಪಿಸ್ಟ್​ಗೆ ವಂಚನೆ

ಮಸಾಜ್​ಗಾಗಿ 25 ವರ್ಷದ ಥೆರಪಿಸ್ಟ್ ಯುವತಿಯನ್ನು ಬುಕ್ ಮಾಡಿದ್ದ ಆರೋಪಿ ಯುವತಿ ಬರುತ್ತಿದ್ದಂತೆ ಆಕೆಯನ್ನು ಕಾರಿನಲ್ಲಿ ಕೂರಿಸಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ನಾನು ಪೊಲೀಸ್, ನಿನ್ನ ಮೇಲೆ ಅತ್ಯಾಚಾರ ಮಾಡಬಹುದು, ಇಲ್ಲಸಲ್ಲದ ದೂರು ದಾಖಲಿಸಬಹುದು ಎಂದು ಬೆದರಿಸಿ ಹಣ ಸುಲಿಗೆ ಮಾಡಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ತಾನೊಬ್ಬ ಪೊಲೀಸ್ ಹಣ ನೀಡದಿದ್ದರೆ ಅತ್ಯಾಚಾರ ಮಾಡುವೆ ಎಂದು ಬೆದರಿಸಿ ಮಹಿಳಾ ಥೆರಪಿಸ್ಟ್​ಗೆ ವಂಚನೆ
ಆರೋಪಿ ಮಹೇಂದ್ರ ಕುಮಾರ್
Follow us
| Updated By: ಆಯೇಷಾ ಬಾನು

Updated on: Jul 22, 2024 | 9:18 AM

ಬೆಂಗಳೂರು, ಜುಲೈ.22: ನಕಲಿ ಪೊಲೀಸಪ್ಪ ವಿಚ್ಛೇದಿತ ಮಹಿಳೆಯನ್ನು ಮದುವೆ ಆಗುವುದಾಗಿ ನಂಬಿಸಿ ಲವ್, ಸೆಕ್ಸ್, ದೋಖಾ ಮಾಡಿರುವಂತಹ ಘಟನೆ ಬೆಂಗಳೂರಿನ (Bengaluru) ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿತ್ತು. ಇದೀಗ ಇದೇ ರೀತಿಯ ಮತ್ತೊಂದು ವಂಚನೆಯ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಆರೋಪಿ ಪೊಲೀಸ್ ಎಂದು ನಂಬಿಸಿ ಮಹಿಳಾ ಮಸಾಜ್ ಥೆರಪಿಸ್ಟ್ (Woman Massage Therapist) ಬಳಿ ಸುಲಿಗೆ ಮಾಡಿದ್ದಾನೆ. ಸದ್ಯ ಸುಲಿಗೆಯನ್ನೆ ವೃತ್ತಿ ಮಾಡಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಹೇಂದ್ರ ಕುಮಾರ್(33) ಬಂಧಿತ ಆರೋಪಿ. ಮಸಾಜ್​ಗಾಗಿ ಜುಲೈ 3 ರಂದು ಆರೋಪಿ ಮಹೇಂದ್ರ ಕುಮಾರ್, ತನ್ನ‌ ಹೆಸರು ಸುರೇಶ್ ಎಂದು ಆನ್ಲೈನ್ ಮೂಲಕ 25 ವರ್ಷದ ಥೆರಪಿಸ್ಟ್ ಬುಕ್ ಮಾಡಿದ್ದ. ಥೆರಪಿಸ್ಟ್​ನನ್ನು ರಾಮಮೂರ್ತಿ ನಗರದ ಅಪಾರ್ಟ್ಮೆಂಟ್‌ ಒಂದರ ಬಳಿ ಕರೆಸಿದ್ದ. ರಾತ್ರಿ‌ 10;30ರ ಸುಮಾರಿಗೆ ಮಹಿಳಾ ಥೆರಪಿಸ್ಟ್ ಸ್ಥಳಕ್ಕೆ ಬಂದಿದ್ದು ಆಕೆಯನ್ನು ಕಾರಿನಲ್ಲಿ ಕರೆದೊಯ್ದು ಒಂದು ಕಿ.ಮೀ. ಹೋದ ಬಳಿಕ ಬ್ಲ್ಯಾಕ್ ಮೇಲ್ ಮಾಡಿದ್ದ.

ಇದನ್ನೂ ಓದಿ: ಬಾಳು ನೀಡುವುದಾಗಿ ವಿಚ್ಛೇದಿತ ಮಹಿಳೆಯಿಂದ ಲಕ್ಷ ಲಕ್ಷ ಹಣ ದೋಚಿದ ನಕಲಿ ಪೊಲೀಸಪ್ಪ

ತಾನು ಪೊಲೀಸ್ ಎಂದು ಹೇಳಿ 10 ಲಕ್ಷ ಹಣ ನೀಡಬೇಕು, ಇಲ್ಲ ರೇಪ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ಹೆದರಿದ ಮಹಿಳಾ ಥೆರಪಿಸ್ಟ್ ತನ್ನ ಸ್ನೇಹಿತರಿಗೆ ಕರೆ ಮಾಡಿ ಹಣ ಕೇಳಿದ್ದಾರೆ. ಬಳಿಕ ಯುವತಿಯ ಸ್ನೇಹಿತನಿಂದ ಮಹೇಂದ್ರನಿಗೆ 1 ಲಕ್ಷದ 50 ಸಾವಿರ ಹಣ ವರ್ಗಾವಣೆ ಆಗಿದೆ. ನಂತರ ಯುವತಿಯನ್ನು ಇಡೀ ರಾತ್ರಿ‌ ಹೆಬ್ಬಾಳ ಸೇರಿ ಹಲವೆಡೆ ಸುತ್ತಾಡಿಸಿದ್ದ ಆರೋಪಿ, ಬೆಳಗಿನ ಜಾವ ಏರ್ಪೋರ್ಟ್ ಬಳಿ ಇಳಿಸಿ ನಿನ್ನ ಊರಿಗೆ ಹೋಗಬೇಕು ಇಲ್ಲ ಕೇಸ್ ಹಾಕುವುದಾಗಿ ಬೆದರಿಸಿದ್ದಾನೆ.

ಸದ್ಯ ಈಗ ಯುವತಿ ಕೊಟ್ಟ ದೂರಿನ ಮೇರೆಗೆ ಆರೋಪಿಯನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ. ಡಾಗ್ ಬ್ರೀಡಿಂಗ್ ಕೆಲಸ ಮಾಡುತ್ತಿದ್ದ ಮಹೇಂದ್ರ ಈ ರೀತಿ ಸುಲಿಗೆ ಮಾಡುವುದನ್ನೂ ಕಾಯಕ ಮಾಡಿಕೊಂಡಿದ್ದ. ಈತ ಮೋಜಿನ ಜೀವನಕ್ಕಾಗಿ ಹಣ ಹೊಂದಿಸಲು ಸುಲಿಗೆಗೆ ಇಳಿದಿದ್ದ. ಬಂಧನದ ನಂತರ ಈ ರೀತಿ ಹಲವರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ. ಈ ಹಿಂದೆಯೂ ಮಾರತ್ತಳ್ಳಿ, ಪುಲಿಕೇಶಿ ನಗರ ಠಾಣೆಯಲ್ಲೂ ಈತನ ವಿರುದ್ದ ಪ್ರಕರಣ ದಾಖಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ