ಲೋ ಬಿಪಿಯಾಗಿ ಕುಸಿದುಬಿದ್ದು ಕರ್ತವ್ಯನಿರತ ಹೆಡ್ಕಾನ್ಸ್ಟೇಬಲ್ ಸಾವು
Haveri News: ಲೋ ಬಿಪಿಯಾಗಿ ಕುಸಿದುಬಿದ್ದು ಕರ್ತವ್ಯನಿರತ ಹೆಡ್ಕಾನ್ಸ್ಟೇಬಲ್ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ರಟ್ಟೀಹಳ್ಳಿ ಪಟ್ಟಣದಲ್ಲಿ ನಡೆದಿದೆ.

ಹಾವೇರಿ, ಆಗಸ್ಟ್ 06: ಲೋ ಬಿಪಿಯಾಗಿ ಕುಸಿದುಬಿದ್ದು ಕರ್ತವ್ಯನಿರತ ಹೆಡ್ಕಾನ್ಸ್ಟೇಬಲ್ (Head constable) ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ರಟ್ಟೀಹಳ್ಳಿ ಪಟ್ಟಣದಲ್ಲಿ ನಡೆದಿದೆ. ರಟ್ಟೀಹಳ್ಳಿ ಪೊಲೀಸ್ ಠಾಣೆ ಬಸಪ್ಪ ಮಲ್ಲಾಡದ(48) ಮೃತ ಹೆಡ್ಕಾನ್ಸ್ಟೇಬಲ್. ಮೂಲತಃ ರಾಣೆಬೆನ್ನೂರು ತಾಲ್ಲೂಕಿನ ಹಾರೋಗೊಪ್ಪ ನಿವಾಸಿ. 26 ವರ್ಷದಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ರಟ್ಟೀಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ದಾಖಲಾಗಿದೆ.
ಬಲಮುರಿ ಬಳಿ ಕಾವೇರಿ ನದಿಯಲ್ಲಿ ಮುಳುಗಿ ಯುವಕ ಸಾವು
ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಬಲಮುರಿ ಬಳಿ ಕಾವೇರಿ ನದಿಯಲ್ಲಿ ಮುಳುಗಿ ಯುವಕ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಕೋಲಾರ ಜಿಲ್ಲೆ ಕೆಜಿಎಫ್ ಮೂಲದ ಯಶ್ವಂತ್(27) ಮೃತ ಯುವಕ. ನಾಲ್ವರು ಸ್ನೇಹಿತರ ಜೊತೆ ಪಿಕ್ನಿಕ್ಗೆ ಬಂದಿದ್ದ ವೇಳೆ ಕಾವೇರಿ ನದಿಯಲ್ಲಿ ಈಜಲು ಹೋಗಿ ಮೃತಪಟ್ಟಿದ್ದಾರೆ. ಕೆಆರ್ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಗದಗ: ನಕಲಿ ದಾಖಲೆ ಸೃಷ್ಟಿಸಿ 40 ಕೋಟಿ ಮೊತ್ತದ ಜಮೀನು ಲೂಟಿಗೆ ಪ್ಲಾನ್! ಆರು ಮಂದಿ ಅರೆಸ್ಟ್
ಮರದ ಕೊಂಬೆ ಕಡಿಯುವಾಗ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು
ಚಿಕ್ಕಮಗಳೂರು: ಮರದ ಕೊಂಬೆ ಕಡಿಯುವಾಗ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಹುಯಿಲುಮನೆ ಗ್ರಾಮದಲ್ಲಿ ನಡೆದಿದೆ. ಲೋಕಪ್ಪಗೌಡ(56) ಮೃತ ವ್ಯಕ್ತಿ. ವಿದ್ಯುತ್ ತಂತಿಗೆ ತಗುಲುತ್ತಿದ್ದ ಕೊಂಬೆ ಕಡಿಯುತ್ತಿದ್ದಾಗ ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ಬಾಳೂರು ಠಾಣೆಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇದನ್ನೂ ಓದಿ: ಕೋಲಾರ ಪೊಲೀಸರ ಭರ್ಜರಿ ಕಾರ್ಯಾಚರಣೆ: ಮೂವರು ಮನೆಗಳ್ಳರ ಬಂಧನ
ಜಮೀನಿನ ರಸ್ತೆ ವಿವಾದ: ಸೈಜುಗಲ್ಲು ಎತ್ತಿಹಾಕಿ ಮಹಿಳೆ ಕೊಲೆಗೆ ಯತ್ನ
ತುಮಕೂರು: ಜಮೀನಿನ ರಸ್ತೆ ವಿವಾದ, ಸೈಜುಗಲ್ಲು ಎತ್ತಿಹಾಕಿ ಮಹಿಳೆ ಕೊಲೆಗೆ ಯತ್ನಿಸಿರುವಂತಹ ಘಟನೆ ಜಿಲ್ಲೆಯ ಪಾವಗಡ ತಾಲೂಕಿನ ತಿಮ್ಮಮ್ಮನಹಳ್ಳಿಯಲ್ಲಿ ನಡೆದಿದೆ. ತಿಮ್ಮಮ್ಮನಹಳ್ಳಿ ಗ್ರಾಮದಲ್ಲಿ ಸುಬ್ಬಯ್ಯ ಎಂಬುವವರಿಂದ ಕೃತ್ಯವೆಸಗಲಾಗಿದೆ. ಸಾರ್ವಜನಿಕರು ಓಡಾಡುವ ರಸ್ತೆಯಲ್ಲಿ ಕಲ್ಲು ಹಾಕಿ ಬಂದ್ ಮಾಡಿದ್ದ.
ಜಮೀನಿಗೆ ತೆರಳಲು ದಾರಿ ಬಿಡುವಂತೆ ಕೇಳಿದ್ದಕ್ಕೆ ಅಕ್ಕಮ್ಮ ಹತ್ಯೆಗೆ ಯತ್ನಿಸಲಾಗಿದೆ. ಸೈಜುಗಲ್ಲು ಎತ್ತಿಹಾಕಿದರೂ ಅದೃಷ್ಟವಶಾತ್ ಬಚಾವ್ ಆಗಿದ್ದಾರೆ. ಸೊಂಟ, ಕಾಲಿಗೆ ಗಂಭೀರ ಗಾಯಗಳಾಗಿದ್ದು ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಿರುಮಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



