ಕೋಲಾರ ಪೊಲೀಸರ ಭರ್ಜರಿ ಕಾರ್ಯಾಚರಣೆ: ಮೂವರು ಮನೆಗಳ್ಳರ ಬಂಧನ

Kolar News: ಮೂವರು ಮನೆಗಳ್ಳರನ್ನು ಪೊಲೀಸರು ಬಂಧಿಸುವ ಮೂಲಕ 254 ಗ್ರಾಂ ಚಿನ್ನಾಭರಣ, 500 ಗ್ರಾಂ ಬೆಳ್ಳಿ ವಸ್ತುಗಳು, 2 ಕಾರು ಜಪ್ತಿ ಮಾಡಿದ್ದಾರೆ. ಆ ಮೂಲಕ ಶ್ರೀನಿವಾಸಪುರದಲ್ಲಿ 2 ಕಳವು ಪ್ರಕರಣವನ್ನು ಕೋಲಾರ ಪೊಲೀಸರು ಭೇದಿಸಿದ್ದಾರೆ.  

ಕೋಲಾರ ಪೊಲೀಸರ ಭರ್ಜರಿ ಕಾರ್ಯಾಚರಣೆ: ಮೂವರು ಮನೆಗಳ್ಳರ ಬಂಧನ
ಬಂಧಿತರಿಂದ ಜಪ್ತಿ ಮಾಡಿದ ವಸ್ತುಗಳು
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಗಂಗಾಧರ​ ಬ. ಸಾಬೋಜಿ

Updated on:Aug 06, 2023 | 3:23 PM

ಕೋಲಾರ, ಆಗಸ್ಟ್​ 06: ಮೂವರು ಮನೆಗಳ್ಳರನ್ನು (thieves) ಪೊಲೀಸರು ಬಂಧಿಸುವ ಮೂಲಕ 254 ಗ್ರಾಂ ಚಿನ್ನಾಭರಣ, 500 ಗ್ರಾಂ ಬೆಳ್ಳಿ ವಸ್ತುಗಳು, 2 ಕಾರು ಜಪ್ತಿ ಮಾಡಿದ್ದಾರೆ. ತುಮಕೂರು ಮೂಲದ ಜಗನ್ನಾಥ್, ಚಿಕ್ಕಬಳ್ಳಾಪುರ ಮೂಲದ ಶ್ರೀನಾಥ್, ಉಮಾಶಂಕರ್​ ಬಂಧಿತರು. ಜು.16ರಂದು ಕೋಲಾರದ ಕೀಲುಕೋಟೆ ಬಡಾವಣೆ ಮನೆಯಲ್ಲಿ ಕಳವು ಮಾಡಿದ್ದರು. ಸದ್ಯ ಆ ಕಳ್ಳರನ್ನು ಬಂಧಿಸುವ ಮುಲಕ ಶ್ರೀನಿವಾಸಪುರದಲ್ಲಿ 2 ಕಳವು ಪ್ರಕರಣವನ್ನು ಕೋಲಾರ ಪೊಲೀಸರು ಭೇದಿಸಿದ್ದಾರೆ.

ಮನೆಯ ಮುಂದೆ ನಿಲ್ಲಿಸಿದ್ದ ಕಾರು ಕಳ್ಳತನ

ಹಾಸನ: ಮನೆಯ ಮುಂದೆ ನಿಲ್ಲಿಸಿದ್ದ ಕಾರು ಕಳ್ಳತನ ಮಾಡಿದ ಖದೀಮರು ಬೈಕ್ ಬಿಟ್ಟು ಹೋಗಿರುವಂತಹ ಘಟನೆ ನಗರದ ವಾರ್ಡ್‌ ನಂಬರ್‌ 35 ಕೆ.ಹೊಸಕೊಪ್ಪಲಿನಲ್ಲಿ ನಡೆದಿದೆ. ಅಭಿಷೇಕ್‌ ಎಂಬುವವರಿಗೆ ಸೇರಿದ ಮಾರುತಿ 800 ಕಾರು ಸೇರಿತ್ತು. ಕಳ್ಳರು ಕಾರಿನ ಡೋರ್ ತೆಗೆದು ಸ್ವಲ್ಪ ದೂರು ಕಾರನ್ನು ತಳ್ಳಿಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಅಪಾರ್ಟ್​ಮೆಂಟ್​ನಿಂದ ಹಾರಿ ಬಿಲ್ಡರ್ ಆತ್ಮಹತ್ಯೆ

ಆನಂತರ ಕಾರು ಸ್ಟಾರ್ಟ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾರೆ. ಕಾರು ಕದಿಯಲು ಕಳ್ಳತನ ಮಾಡಿಕೊಂಡು ಬೈಕ್‌ನಲ್ಲಿ ಬಂದಿದ್ದರು. ಬೈಕ್‌ನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಕಾರು ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಕೆ.ಆರ್.ಪುರಂ ಪೊಲೀಸ್‌ ಠಾಣೆ ಪ್ರಕರಣ ದಾಖಲಿಸಲಾಗಿದೆ.

ಟೊಮ್ಯಾಟೊ ಆಯಿತು ಈಗ ದಾಳಿಂಬೆ ತೋಟಕ್ಕೆ ಕಳ್ಳರ ಕಾಟ

ಚಿಕ್ಕಬಳ್ಳಾಫುರ: ತೋಟದಲ್ಲಿ ಬೆಳೆದು ನಿಂತಿದ್ದ ದಾಳಿಂಬೆ ಹಣ್ಣುಗಳನ್ನು ಕಳ್ಳರು ಕದ್ದು ಪರಾರಿಯಾಗಿರುವಂತಹ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಕ್ರಾಸ್ ಬಳಿ ನಡೆದಿದೆ. ದಾಳಿಂಬೆಗೆ ಚಿನ್ನದ ಬೆಲೆ ಹಿನ್ನಲೆ ರಾತ್ರೋ ರಾತ್ರಿ ಕಳ್ಳತನ ಮಾಡಲಾಗಿದೆ. ರೈತ ಜಗದೀಶ ಎನ್ನುವವರಿಗೆ ಸೇದಿದ್ದ ದಾಳಿಂಬೆ ತೋಟದಲ್ಲಿ ಕಳ್ಳತನ ಮಾಡಲಾಗಿದೆ.

ಇದನ್ನೂ ಓದಿ: ಮಚ್ಚು ಹಿಡಿದು ಮೆರೆದವನು ಮಚ್ಚಿನಿಂದಲೇ ಅಂತ್ಯ, ತನ್ನ ಭವಿಷ್ಯವನ್ನು ತಾನೇ ನುಡಿದಿದ್ದ ಹತ್ಯೆಯಾದ ರೌಡಿಶೀಟರ್

ನಾಲ್ಕು ಜನ ದುಷ್ಕರ್ಮಿಗಳಿಂದ ದಾಳಿಂಬೆ ಕಳ್ಳತನ ಮಾಡಿದ್ದು, ಲಕ್ಷಾಂತರ ರೂಪಾಯಿ ಮೌಲ್ಯ ನಷ್ಟವಾಗಿದೆ ಎನ್ನಲಾಗುತ್ತಿದೆ. ನಂದಿಗಿರಿಧಾಮ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ದಾಖಲಾಗಿದೆ.

ಮರದಿಂದ ಕೆಳಗೆ ಬಿದ್ದು ಗನ್​ಮ್ಯಾನ್ ಸಾವು

ಮಡಿಕೇರಿ: ಕುಶಾಲನಗರ ತಾಲೂಕಿನ ಕಾನ್​ಬೈಲು ಗ್ರಾಮದಲ್ಲಿ ಮರದಿಂದ ಕೆಳಗೆ ಬಿದ್ದು ಗನ್​ಮ್ಯಾನ್ ಲೋಕೇಶ್(40) ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಮಾಜಿ ಶಾಸಕ ಅಪ್ಪಚ್ಚು ರಂಜನ್​ಗೆ ಮೃತ ಲೋಕೇಶ್ ಗನ್​ಮ್ಯಾನ್ ಆಗಿದ್ದ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:20 pm, Sun, 6 August 23

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!