Karnataka Rain: ಸಿಡಿಲು ಬಡಿದು ಓರ್ವ ವ್ಯಕ್ತಿ ಹಾಗೂ ಮೇಕೆಗಳು ಸಾವು

| Updated By: ಗಂಗಾಧರ​ ಬ. ಸಾಬೋಜಿ

Updated on: Apr 28, 2022 | 9:08 PM

ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಸಿಡಿಲು ಬಡಿದ ಹಿನ್ನಲೆ ತೆಂಗಿನ ಮರ ಹೊತ್ತಿ ಊರಿದಿರುವಂತಹ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ನಡೆದಿದೆ.

Karnataka Rain: ಸಿಡಿಲು ಬಡಿದು ಓರ್ವ ವ್ಯಕ್ತಿ ಹಾಗೂ ಮೇಕೆಗಳು ಸಾವು
ಪ್ರಾತಿನಿಧಿಕ ಚಿತ್ರ
Follow us on

ರಾಯಚೂರು: ಸಿಡಿಲು (Thunderbolt) ಬಡಿದು ಓರ್ವ ವ್ಯಕ್ತಿ ಹಾಗೂ ಮೇಕೆಗಳು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಬನ್ನಿಗೋಳ ಗ್ರಾಮದಲ್ಲಿ ನಡೆದಿದೆ. ರಾಮಣ್ಣ ಪೂಜಾರಿ(48) ಮೃತ ವ್ಯಕ್ತಿ. ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಧಾರಾಕಾರ ಮಳೆಯಿಂದಾಗಿ ಧರೆಗುರುಳಿದ ಮರ:

ಶಿವಮೊಗ್ಗ: ನಗರದಲ್ಲಿ ಗಾಳಿ ಗುಡುಗು ಸಹಿತ ಧಾರಾಕಾರ ಮಳೆಯಿಂದಾಗಿ ಮರಗಳು ಧರೆಗುರುಳಿರುವಂತಹ ಘಟನೆ ದುರ್ಗಿಗುಡಿ ಬಡಾವಣೆ ಮತ್ತು ತಿಲಕ ನಗರದ ಮಲ್ನಾಡ್ ಸ್ಕ್ಯಾನ್ ಸೆಂಟರ್ ಬಳಿ ನಡೆದಿದೆ. ನಗರದ ವಿವಿಧ ಬಡಾವಣೆಯಲ್ಲಿ ಪವರ್ ಕಟ್ ಮಾಡಲಾಗಿದೆ. ಕೆಲ ಹೊತ್ತು ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ವಾಹನ ಸವಾರರ ಪರದಾಡುವಂತ್ತಾಗಿದೆ.

ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ:

ಕೊಪ್ಪಳ‌: ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಸಿಡಿಲು ಬಡಿದ ಹಿನ್ನಲೆ ತೆಂಗಿನ ಮರ ಹೊತ್ತಿ ಊರಿದಿರುವಂತಹ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ನಡೆದಿದೆ. ಶಂಕರಪ್ಪ ಪರಸಪ್ಪ ಹುಲಿಮನಿ ಎಂಬುವರ ಮನೆ ಮುಂದೆ ಟೆಂಗಿನ ಮರ ಇದಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ‌. ಟೆಂಗಿನ ಮರ ಹೊತ್ತಿ ಉರಿಯೋ ದೃಶ್ಯವನ್ನು ಮೊಬೈಲ್​ನಲ್ಲಿ ಸ್ಥಳೀಯರು ಸೆರೆ ಹಿಡಿದಿದ್ದಾರೆ. ಹಾವೇರಿಯಲ್ಲಿಯೂ ಗುಡುಗು ಸಿಡಿಲಿನೊಂದಿಗೆ ಮಳೆರಾಯನ ಆಗಮನವಾಗಿದೆ. ಅರ್ಧ ಗಂಟೆಯಿಂದ ಗುಡುಗು ಸಿಡಿಲಿನೊಂದಿಗೆ ಮಳೆರಾಯ ಆರ್ಭಟಿಸುತ್ತಿದ್ದು, ಬಿಸಿಲಿನಿಂದ ತತ್ತರಿಸಿದ್ದ ಜನರಿಗೆ ಮಳೆರಾಯ ತಂಪೆರೆದಂತ್ತಾಗಿದೆ.

ಆಲಿಕಲ್ಲು ಮಳೆ‌ ಕಂಡು ಗ್ರಾಮೀಣ ಭಾಗದ ಜನ್ರ ಹರ್ಷ

ಗದಗ: ಸಿಡಿಲು ಬಡಿದು ಓರ್ವ ಮಹಿಳೆ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತ್ಲಿ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿ ಇದ್ದಾಗ ಘಟನೆ ಸಂಭವಿಸಿದ್ದು, ಲತಾ. ಕಲಕೇರಿ (27) ಮೃತ ಮಹಿಳೆ. ಸ್ಥಳಕ್ಕೆ ಕಂದಾಯ ಇಲಾಖೆ ರೆವಿನ್ಯೂ ಇನ್ಸ್‌ಪೆಕ್ಟರ್ M A ನದಾಫ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ತಾಲೂಕಿನ ಹೊಂಬಳ ಗ್ರಾಮದಲ್ಲಿ ಗುಡುಗು ಸಮೇತವಾಗಿ ಆಲಿಕಲ್ಲು ಮಳೆ ಸುರಿದಿದ್ದು, ಗ್ರಾಮಸ್ಥರು ಆಲಿಕಲ್ಲು ಸಂಗ್ರಹಣೆ ಮಾಡುತ್ತಿದ್ದಾರೆ.  ಆಲಿಕಲ್ಲು ಮಳೆ‌ ಕಂಡು ಗ್ರಾಮೀಣ ಭಾಗದ ಜನ್ರ ಹರ್ಷಗೊಂಡಿದ್ದಾರೆ.

ಧಾರಾಕಾರ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತ;

ರಾಯಚೂರು; ಲಿಂಗಸಗೂರು ತಾಲ್ಲೂಕಿನ ಹಟ್ಟಿ, ಮುದಗಲ್ ಸೇರಿದಂತೆ ಜಿಲ್ಲೆಯ ಹಲವೆಡೆ ಆಲಿಕಲ್ಲು ಸಹಿತ ಮಳೆ ಆಗಿದೆ. ಗಾಳಿ ಸಹಿತ ಮಳೆಗೆ ಬೃಹತ್ ಮರ ಧರೆಗುರುಳಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ಸದ್ಯ ಧರೆಗುರುಳಿದ ಮರ ಸ್ಥಳೀಯರು ತೆರವುಗೊಳಿಸಿದ್ದಾರೆ. ಹಟ್ಟಿ ಪಟ್ಟಣದಲ್ಲಿ ಅರ್ಧ ಗಂಟೆ ಸುರಿದ ಆಲಿಕಲ್ಲು ಸಹಿತ ಮಳೆ ಸುರಿದಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ದಿಢೀರ್ ಮಳೆಯಿಂದ ಭತ್ತ ಕಟಾವು ಮಾಡಿದ್ದ ರೈತರು ಕಂಗಾಲಾಗಿದ್ದಾರೆ.

ಮಳೆಯಿಂದಾಗಿ ಕಟ್ಟಡ ಕುಸಿದು ಕಾರ್ಮಿಕ ಸಾವು;

ವಿಜಯನಗರ: ಹಗರಿಬೊಮ್ಮನಹಳ್ಳಿ ತಾಲೂಕಿನ ಹಲವು ಗ್ರಾಮಗಳಲ್ಲಿ ಗಾಳಿ ಸಹಿತ ಅಲಿಕಲ್ಲು ಮಳೆ ಸುರಿದಿದ್ದು, ಭಾರಿ ಗಾಳಿ ಮಳೆಗೆ ಕೆಲವೆಡೆ ಮರಗಳು ಮತ್ತು ಗುಡಿಸಲುಗಳು ನೆಲಸಮವಾಗಿವೆ. ಬಲ್ಲಾಹುಣಸಿ ಗ್ರಾಮದಲ್ಲಿ ನಿರ್ಮಾಣ ಹಂತದ ರೇಷ್ಮೆ ಮನೆಯ ಕಟ್ಟಡ ಕುಸಿತವಾಗಿದ್ದು, ಕಟ್ಟಡ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸಾಸಿವೆಹಳ್ಳಿ ಚಂದ್ರಶೇಖರ (26) ಸ್ಥಳದಲ್ಲೆ ಮೃತ ಪಟ್ಟ ಕಾರ್ಮಿಕ. ಕಟ್ಟಡ ಕಾಮಗಾರಿಯಲ್ಲಿ ಭಾಗಿಯಾಗಿದ್ದ ಐವರಿಗೆ ಗಂಭೀರ ಗಾಯವಾಗಿದ್ದು, ಗಾಯಾಳುಗಳು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ;

Reliance: 25 ಸಾವಿರ ಕೋಟಿ ಅಮೆರಿಕನ್ ಡಾಲರ್ ಮಾರುಕಟ್ಟೆ ಬಂಡವಾಳ ಮೌಲ್ಯ ದಾಟಿದ ಮೊದಲ ಭಾರತೀಯ ಕಂಪೆನಿ ಎನಿಸಿಕೊಂಡ ರಿಲಯನ್ಸ್

Published On - 7:54 pm, Thu, 28 April 22