PSI Scam: ಪಿಎಸ್‌ಐ ನೇಮಕಾತಿ ಅಕ್ರಮ -ಜ್ಯೋತಿ ಅರೆಸ್ಟ್, ಬಂಧಿತರ ಸಂಖ್ಯೆ 17, ಕಿಂಗ್‌ಪಿನ್ ರುದ್ರಗೌಡನ ಆರೋಗ್ಯ ಏರುಪೇರು
ಪಿಎಸ್‌ಐ ಹುದ್ದೆಗಳಿಗೆ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಸಿಐಡಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಈ ಮಧ್ಯೆ ಕಿಂಗ್‌ಪಿನ್ ರುದ್ರಗೌಡ ಪಾಟೀಲನ ಆರೋಗ್ಯ ಏರುಪೇರಾಗಿದೆ. ಸಿಐಡಿ ವಿಚಾರಣೆ ವೇಳೆ ವಾಂತಿ ಮಾಡಿಕೊಂಡ ರುದ್ರಗೌಡನನ್ನು ಜಿಮ್ಸ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕಲಬರುಗಿ: 545 ಪಿಎಸ್‌ಐ ಹುದ್ದೆಗಳಿಗೆ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಸಿಐಡಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಈ ಮಧ್ಯೆ ಕಿಂಗ್‌ಪಿನ್ ರುದ್ರಗೌಡ ಪಾಟೀಲನ ಆರೋಗ್ಯ ಏರುಪೇರಾಗಿದೆ. ಸಿಐಡಿ ವಿಚಾರಣೆ ವೇಳೆ ವಾಂತಿ ಮಾಡಿಕೊಂಡ ರುದ್ರಗೌಡನನ್ನು (kingpin rudragowda patil health) ಜಿಮ್ಸ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ. ಇಂದು ಬಂಧನಕ್ಕೀಡಾದ ಜ್ಯೋತಿ ಪಾಟೀಲ್, ಶಹಬಾದ್ ನಗರಸಭೆಯಲ್ಲಿ SDA ಆಗಿದ್ದಾಳೆ. ಬೆಂಗಳೂರಿನ ಆರ್‌ಡಿಪಿಆರ್‌ನಲ್ಲಿ ಕೆಲಸ ಮಾಡುತ್ತಿದ್ದ ಜ್ಯೋತಿ ಎರಡು ತಿಂಗಳ ಹಿಂದಷ್ಟೇ ಶಹಬಾದ್ ನಗರಸಭೆಗೆ ವರ್ಗಾವಣೆಯಾಗಿದ್ದಾಳೆ. ವರ್ಗಾವಣೆ ಬಳಿಕ ಜ್ಯೋತಿ, ಕಲಬರುಗಿಯಲ್ಲಿ ವಾಸವಿದ್ದಾಳೆ (PSI Recruitment Scam).
ಪರಾರಿಯಾಗಿರುವ ಆರೋಪಿ ಅಭ್ಯರ್ಥಿ ಶಾಂತಿಬಾಯಿ! ಕಲಬರುಗಿಯಲ್ಲಿ ವಾಸವಿದ್ದ ಜ್ಯೋತಿ ಪಾಟೀಲ್ ಎಂಬ ಆರೋಪಿಯನ್ನು ಬಂಧಿಸುವ ಮೂಲಕ PSI ಅಕ್ರಮ ನೇಮಕಾತಿ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 17ಕ್ಕೆ ಏರಿದೆ. ಇದರೊಂದಿಗೆ ಪ್ರಕರಣದಲ್ಲಿ ಮೊದಲ ಬಾರಿಗೆ ಓರ್ವ ಮಹಿಳೆಯನ್ನು ಬಂಧಿಸಿದಂತಾಗಿದೆ. ಆದರೆ ಮತ್ತೊಬ್ಬ ಹೈ ಪ್ರೊಫೈಲ್ ದಿವ್ಯಾ ಹಾಗರಗಿ ಸಿಐಡಿ ಪೊಲೀಸರಿಗೆ ಇನ್ನೂ ಚಳ್ಳೆಹಣ್ಣುಗಳನ್ನು ಢಾಳಾಗಿ ತಿನ್ನಿಸುತ್ತುಲೇ ಇದ್ದಾಳೆ.
ಅಭ್ಯರ್ಥಿಯೊಬ್ಬಳನ್ನು ಕಿಂಗ್‌ಪಿನ್ ಜೊತೆ ಡೀಲ್ ಮಾಡಿಸಿದ್ದ ಆರೋಪ ಜ್ಯೋತಿ ಮೇಲಿದೆ. ಜ್ಯೋತಿ, ಅಭ್ಯರ್ಥಿ ಶಾಂತಿಬಾಯಿಯನ್ನು ಕಿಂಗ್ ಪಿನ್ ಮಂಜುನಾಥ ಮೇಳಕುಂದಿಗೆ ಪರಿಚಯಿಸಿದ್ದಳು. ಗಮನಾರ್ಹ ಸಂಗತಿಯೆಂದರೆ ಅಭ್ಯರ್ಥಿ ಶಾಂತಿಬಾಯಿ ಇದೇ ಪಿಎಸ್‌ಐ ಪರೀಕ್ಷೆ ಬರೆದು, ಆಯ್ಕೆಯಾಗಿದ್ದಾಳೆ! ಆದರೆ ಆರೋಪಿ ಅಭ್ಯರ್ಥಿ ಶಾಂತಿಬಾಯಿ ತಲೆಮರೆಸಿಕೊಂಡಿದ್ದಾಳೆ.
ರುದ್ರಗೌಡನಿಗೆ ವಾಂತಿ, ನಿತ್ರಾಣ: 545 ಪಿಎಸ್‌ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣದ ಕಿಂಗ್‌ಪಿನ್ ಎನ್ನಲಾದ ರುದ್ರಗೌಡ ಪಾಟೀಲ್ನ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ. ಸಿಐಡಿ ವಿಚಾರಣೆ ವೇಳೆ ವಾಂತಿ ಮಾಡಿಕೊಂಡಿದ್ದಾನೆ, ರುದ್ರಗೌಡ. ರುದ್ರಗೌಡನನ್ನು ತಕ್ಷಣ ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವಾಂತಿ ಬಳಿಕ ತೀವ್ರ ನಿತ್ರಾಣಗೊಂಡಿರುವ ರುದ್ರಗೌಡನಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅವನು ಸಿಐಡಿ ಕಸ್ಟಡಿಯಲ್ಲಿದ್ದಾನೆ.
Also Read: Acid Attack: ಆ್ಯಸಿಡ್ ದಾಳಿಗೆ ಪ್ರೇಮ ವೈಫಲ್ಯ, ಸೆಕ್ಸ್ ನಿರಾಕರಣೆ ಕಾರಣ -ಸುಪ್ರೀಂ ಕೋರ್ಟ್ ಏನು ಹೇಳುತ್ತದೆ?
Published On - 7:51 pm, Thu, 28 April 22