PSI Recruitment Scam: ಒಳಗೆ ಅಕ್ರಮ, ಹೊರಗೆ ದಿವ್ಯಾ; ಪಿಎಸ್​ಐ ಪರೀಕ್ಷೆ ನಡೆದ ದಿನ ಶಾಲೆಯ ಹೊರಗೆ ಕಾವಲಿದ್ದ ದಿವ್ಯಾ ಹಾಗರಗಿ

545 ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಪರೀಕ್ಷೆ ನಡೆದ ದಿನ ನಗರದ ಗೋಕುಲ ನಗರದಲ್ಲಿರುವ ಜ್ಞಾನಜೋತಿ ಇಂಗ್ಲಿಷ್ ಶಾಲೆಯ ಹೊರಗೆ ಇದ್ದರು ಎಂದು ಸಿಐಡಿ ಹೇಳಿದೆ.

PSI Recruitment Scam: ಒಳಗೆ ಅಕ್ರಮ, ಹೊರಗೆ ದಿವ್ಯಾ; ಪಿಎಸ್​ಐ ಪರೀಕ್ಷೆ ನಡೆದ ದಿನ ಶಾಲೆಯ ಹೊರಗೆ ಕಾವಲಿದ್ದ ದಿವ್ಯಾ ಹಾಗರಗಿ
ಆರೋಪಿ ದಿವ್ಯಾ ಹಾಗರಗಿ ಮತ್ತು ಸಿಐಡಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Apr 29, 2022 | 8:24 AM

ಕಲಬುರಗಿ: 545 ಪಿಎಸ್​ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಪರೀಕ್ಷೆ ನಡೆದ ದಿನ ನಗರದ ಗೋಕುಲ ನಗರದಲ್ಲಿರುವ ಜ್ಞಾನಜೋತಿ ಇಂಗ್ಲಿಷ್ ಶಾಲೆಯ ಹೊರಗೆ ಇದ್ದರು. ಪರೀಕ್ಷಾ ಕೇಂದ್ರದ ಒಳಗೆ ಯಾರೊಬ್ಬರೂ ಬಾರದಂತೆ ನೋಡಿಕೊಳ್ಳುತ್ತಿದ್ದರು. ಕಲಬುರಗಿಯ ಹಲವು ಅಧಿಕಾರಿಗಳ ಜೊತೆ ಸಂಪರ್ಕ ಹೊಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ. ದಿವ್ಯಾ ಹಾಗರಗಿ ಬಂಧನಕ್ಕೆಂದು ಸಿಐಡಿ ಅಧಿಕಾರಿಗಳು ಮೂರು ತಂಡಗಳನ್ನು ರಚಿಸಿ ಹುಡುಕಾಟ ನಡೆಸುತ್ತಿತ್ತು. ಮಹಾರಾಷ್ಟ್ರದ ಪುಣೆಯಲ್ಲಿ ನಿನ್ನೆ ಬೆಳಿಗ್ಗೆಯಿಂದ (ಏಪ್ರಿಲ್ 28) ಶೋಧ ನಡೆಸುತ್ತಿದ್ದ ಸಿಐಡಿ ತಂಡದ ಬಲೆಗೆ ರಾತ್ರಿಯ ಹೊತ್ತಿಗೆ ದಿವ್ಯಾ ಹಾಗರಗಿ ಮತ್ತು ಗ್ಯಾಂಗ್ ಸಿಲುಕಿತು. ಜ್ಞಾನಜ್ಯೋತಿ ಇಂಗ್ಲಿಷ್​ ಶಾಲೆಯ ಹೆಡ್​ಮಾಸ್ಟರ್​ ಕಾಶಿನಾಥ್​, ಪರೀಕ್ಷೆ ವೇಳೆ ಕೊಠಡಿ ಮೇಲ್ವಿಚಾರಕರಾಗಿದ್ದ ಶಾಲೆಯ ಸಿಬ್ಬಂದಿ ಸುನಂದಾ, ಅರ್ಚನಾ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕಳೆದ 18 ದಿನಗಳಿಂದ ನಾಪತ್ತೆಯಾಗಿದ್ದ ದಿವ್ಯಾ ಮತ್ತು ಗ್ಯಾಂಗ್​ ತಲೆಮರೆಸಿಕೊಂಡಿತ್ತು. ಸಿಐಡಿ ಎಸ್​ಪಿ ರಾಘವೇಂದ್ರ ಹೆಗಡೆ ನೇತೃತ್ವದ ತಂಡವು ಪುಣೆಯಲ್ಲಿ ಇವರನ್ನು ಬಂಧಿಸಿದೆ.

ದಿವ್ಯಾಗಾಗಿ ಕಲಬುರಗಿಯಿಂದ ಕಾಶ್ಮೀರದವರೆಗೂ ಸಿಐಡಿ ತಂಡವು ಹುಡುಕಾಟ ನಡೆಸಿತ್ತು. ಏಪ್ರಿಲ್ 12ರಂದು ವಿಚಾರಣೆಗೆ ಹಾಜರಾಗಿದ್ದ ದಿವ್ಯಾ ಹಾಗರಗಿ ತನಿಖೆಗೆ ಎಲ್ಲ ಸಹಕಾರ ನೀಡುವುದಾಗಿ ಹೇಳಿ ಅಕ್ರಮದ ಸಾಕ್ಷ್ಯ ಸಿಐಡಿಗೆ ಸಿಕ್ಕ ನಂತರ ನಾಪತ್ತೆಯಾಗಿದ್ದರು.

ಹೇಗೆ ನಡೆಯಿತು ಅಕ್ರಮ? ಪೋಲಿಸರ ತನಿಖೆ ವೇಳೆ ಪಿಎಸ್​ಐ ನೇಮಕಾತಿ ಅಕ್ರಮ ಹೇಗೆ ನಡೆಯಿತು ಎಂಬ ಮಾಹಿತಿ ಬಹಿರಂಗವಾಗಿದೆ. ಪರೀಕ್ಷಾ ಕೇಂದ್ರದ ಮೇಲ್ವಿಚಾರಕರೇ ಪಿಎಸ್ಐ ಅಕ್ರಮ ಪರೀಕ್ಷೆಯಲ್ಲಿ ಭಾಗಿಯಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಪರೀಕ್ಷಾರ್ಥಿಗಳಿಗೆ ಪರೀಕ್ಷೆ ವೇಳೆ ನೀಡುತ್ತಿದ್ದ ಒಎಂಆರ್​ನ ನಕಲು ಪ್ರತಿಗಳನ್ನು ಸಿಬ್ಬಂದಿ ಪಡೆಯುತ್ತಿದ್ದರು. ಇದೇ ಅನುಮಾನದ ಹಿನ್ನಲೆಯಲ್ಲಿ ಸೂಕ್ಷ್ಮವಾಗಿ ಗಮನಿಸಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದೇ ಮಾಹಿತಿ ಆಧರಿಸಿ ಆರೋಪಿಗಳನ್ನು ಸಿಐಡಿ ವಿಸ್ತೃತ ವಿಚಾರಣೆಗೆ ಒಳಪಡಿಸಿತ್ತು. ಲಕ್ಷ-ಲಕ್ಷ ಹಣ ನೀಡಿದವರಿಗೆ ಪರೀಕ್ಷೆ ಪ್ರಾರಂಭವಾಗುವುದಕ್ಕೆ 15-20 ನಿಮಿಷ ಮೊದಲು ಉತ್ತರಗಳು ಲಭ್ಯವಾಗುತ್ತಿದ್ದವು. ಪೊಲೀಸ್ ಸಿಬ್ಬಂದಿಯ ಮಗನೊಬ್ಬನ ಚಲನವಲನ ಗಮನಿಸಿದ್ದ ಸ್ಥಳೀಯ ವ್ಯಕ್ತಿ ಅನುಮಾನಗೊಂಡು ದೂರು ನೀಡಿದ್ದ. ಅವನ ವಿಚಾರಣೆ ವೇಳೆ ಹಲವು ಸಂಗತಿಗಳು ಬೆಳಕಿಗೆ ಬಂದಿದ್ದವು.

ಅಕ್ರಮದಲ್ಲಿ ಭಾಗಿಯಾಗಿರುವ ಮೇಲ್ವಿಚಾರಕರು ಪರೀಕ್ಷಾರ್ಥಿಗಳಿಂದ ಒಎಂಆರ್​ ಶೀಟ್​ಗಳನ್ನು ಸಂಗ್ರಹಿಸುತ್ತಿದ್ದರು. ಬಳಿಕ‌ ಮೇಲ್ವಿಚಾರಕರೇ ಉತ್ತರಗಳನ್ನು ಒಎಂಆರ್​ ಶೀಟ್​ಗೆ ಎಂಟ್ರಿ ಮಾಡುತ್ತಿದ್ದರು ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿತ್ತು.

ಈ ಎಲ್ಲ ಅಕ್ರಮಗಳಿಗೆ ದಿವ್ಯಾ ಹಾಗರಗಿ ಒಡೆತನ ಜ್ಞಾನಜ್ಯೋತಿ ಇಂಗ್ಲಿಷ್ ಶಾಲೆಯೇ ಕೇಂದ್ರ ಸ್ಥಾನವಾಗಿತ್ತು. ಕಿಂಗ್​ಪಿನ್ ರುದ್ರಗೌಡ ಪಾಟೀಲ್, ಮಂಜುನಾಥ ಮೇಳಕುಂದಿ ಜೊತೆ ಡೀಲ್ ಮಾಡಿಕೊಂಡಿದ್ದ ದಿವ್ಯಾ ಹಾಗರಗಿ ತನ್ನ ಪ್ರಭಾವವನ್ನು ಬೀರಿ, ತನ್ನ ಶಾಲೆಗೆ ಪರೀಕ್ಷಾ ಕೇಂದ್ರವನ್ನು ಮಜೂರು ಮಾಡಿಸಿಕೊಂಡಿದ್ದರು. ತನ್ನ ಶಾಲೆಯ ಸಿಬ್ಬಂದಿಯನ್ನೇ ಅಕ್ರಮ ಚಟುವಟಿಕೆಗಳಿಗೂ ಬಳಸಿಕೊಂಡಿದ್ದರು. ಪ್ರಶ್ನಪತ್ರಿಕೆಯನ್ನು ಕಿಂಗ್​ಪಿನ್​ಗಳಿಗೆ ಕಳಿಸಿದ್ದ ಇವರು, ಪರೀಕ್ಷೆ ಮುಗಿದ ನಂತರ ಒಎಂಆರ್​ ಶೀಟ್​ಗಳಲ್ಲಿ ಅಭ್ಯರ್ಥಿಗಳ ಪರವಾಗಿ ಉತ್ತರಗಳನ್ನು ತುಂಬಿದ್ದರು.

ಇಂದು ನಿರೀಕ್ಷಣಾ ಜಾಮೀನು ವಿಚಾರಣೆ

ಮಹಾರಾಷ್ಟ್ರದ ಪುಣೆಯಲ್ಲಿ ಸಿಐಡಿ ಪೊಲೀಸರಿಗೆ ಸೆರೆ ಸಿಕ್ಕಿರುವ ಪಿಎಸ್​ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಮತ್ತು ಸಹಚರರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯು ಇಂದು ಕಲಬುರಗಿ ಜಿಲ್ಲಾ ಹೆಚ್ಚುವರಿ 1ನೇ ಕೋರ್ಟ್​ನಲ್ಲಿ ನಡೆಯಲಿದೆ. ಎರಡು ದಿನಗಳ ಹಿಂದೆಯಷ್ಟೇ ಇವರ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿತ್ತು.

ಇದನ್ನೂ ಓದಿ: Breaking News: PSI ನೇಮಕಾತಿ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಂಧನ

ಇದನ್ನೂ ಓದಿ: 545 ಪಿಎಸ್ಐ ಹುದ್ದೆ ನೇಮಕಾತಿಯಲ್ಲಿ ಅಕ್ರಮ; ಬಿಜೆಪಿಯ ದಿವ್ಯಾ ಹಾಗರಗಿ ಪತಿ ರಾಜೇಶ್ ಹಾಗರಗಿ ಬಂಧನ

Published On - 8:23 am, Fri, 29 April 22

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್