ಸಿಐಡಿ ವಶದಲ್ಲಿದ್ದರೂ ಕಡಿಮೆಯಾಗದ ರುದ್ರಗೌಡ ಪಾಟೀಲ್ ವರ್ಚಸ್ಸು; ಅಫಜಲಪುರದಲ್ಲಿ ರಾರಾಜಿಸುತ್ತಿವೆ ದೊಡ್ಡ ದೊಡ್ಡ ಕಟೌಟ್ಸ್
ಅಫಜಲಪುರದಲ್ಲಿ ಆರ್ಡಿ ಪಾಟೀಲ್ನ ದೊಡ್ಡ ದೊಡ್ಡ ಕಟೌಟ್ಗಳು ರಾರಾಜಿಸುತ್ತಿವೆ. ಅಫಜಲಪುರದಲ್ಲಿ ನಡೆಯುತ್ತಿರುವ ಎತ್ತಿನ ಬಂಡಿ ಓಟದ ಸ್ಪರ್ಧೆಯಲ್ಲಿ ಆರ್ಡಿ ಪಾಟೀಲ್ನ ಕಟೌಟ್ ಹಾಕಲಾಗಿದೆ.
ಕಲಬುರಗಿ: ರಾಜ್ಯದಲ್ಲಿ 545 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆಯ ಅಕ್ರಮ ಬಯಲಾಗ್ತಿದ್ದಂತೆ ಒಂದೊಂದೇ ರಹಸ್ಯಗಳು ಹೊರಬರ್ತಿವೆ. ಪ್ರಕರಣದ ಕಿಂಗ್ಪಿನ್ ರುದ್ರಗೌಡ ಪಾಟೀಲ್, ಮಹಾಂತೇಶ್ ಪಾಟೀಲ್ ಸೇರಿದಂತೆ 7 ಆರೋಪಿಗಳನ್ನು ಸಿಐಡಿ ವಿಚಾರಣೆ ನಡೆಸಿ ಪರೀಕ್ಷಾ ಅಕ್ರಮದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇದು ಒಂದು ಕಡೆ ಆದ್ರೆ ಮತ್ತೊಂದು ಕಡೆ ಅಕ್ರಮದ ಕಿಂಗ್ಪಿನ್ ರುದ್ರಗೌಡ ಪಾಟೀಲ್ ಸಿಐಡಿ ವಶದಲ್ಲಿದ್ದರೂ ಹೊರಗಡೆ ಆತನ ವರ್ಚಸ್ಸು ಕಡಿಮೆಯಾಗಿಲ್ಲ.
ಅಫಜಲಪುರದಲ್ಲಿ ಆರ್ಡಿ ಪಾಟೀಲ್ನ ದೊಡ್ಡ ದೊಡ್ಡ ಕಟೌಟ್ಗಳು ರಾರಾಜಿಸುತ್ತಿವೆ. ಅಫಜಲಪುರದಲ್ಲಿ ನಡೆಯುತ್ತಿರುವ ಎತ್ತಿನ ಬಂಡಿ ಓಟದ ಸ್ಪರ್ಧೆಯಲ್ಲಿ ಆರ್ಡಿ ಪಾಟೀಲ್ನ ಕಟೌಟ್ ಹಾಕಲಾಗಿದೆ. ರುದ್ರಗೌಡ ಪಾಟೀಲ್ ಸಿಐಡಿ ಬಂಧನಕ್ಕೆ ಒಳಗಾಗುವ ಮೊದಲೇ ಸಿದ್ಧತೆ ಮಾಡಿಕೊಂಡಿದ್ದ ಕಟೌಟ್ಗಳಿವು. ಎತ್ತಿನ ಬಂಡಿ ಓಟದ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗೆಲ್ಲುವ ರೈತನಿಗೆ 10 ಗ್ರಾಂ ಬಂಗಾರವನ್ನು ರುದ್ರಗೌಡ ಪಾಟೀಲ್ ನೀಡುತ್ತಾರೆ ಎಂದು ತಯಾರಿ ಮಾಡಿಕೊಳ್ಳಲಾಗಿತ್ತು. ಆದ್ರೆ ರುದ್ರಗೌಡ ಪಾಟೀಲ್ ಸಿಐಡಿ ವಶದಲ್ಲಿದ್ದಾರೆ. ಹಾಗಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ. ಆದ್ರೂ ಅವರ ಅಭಿಮಾನಿಗಳು ಅದೇ ಹಳೆಯ ಕಟೌಟ್ಗಳನ್ನು ಹಾಕಿದ್ದಾರೆ. ಈ ಮೂಲಕ ರುದ್ರಗೌಡ ಪಾಟೀಲ್ ರಾಜಕೀಯದಲ್ಲಿ ಬೆಳೆಯೋ ಪ್ಲ್ಯಾನ್ ಮಾಡಿ ತಮ್ಮದೇ ಅಭಿಮಾನಿ ಬಳಗವನ್ನು ಬೆಳೆಸಿಕೊಂಡಿದ್ದರು ಎನ್ನಲಾಗಿದೆ.
ಪೊಲೀಸ್ ನೇಮಕಾತಿ ವಿಭಾಗದಿಂದ ಅಮೃತ್ಪಾಲ್ ವರ್ಗಾವಣೆ ಎಡಿಜಿಪಿ ಅಮೃತ್ಪಾಲ್ ವರ್ಗಾವಣೆ ಬಳಿಕ ಐಪಿಎಸ್ ವಲಯದಲ್ಲಿ ಚರ್ಚೆ ಶುರುವಾಗಿದೆ. ಹಿರಿಯ ಐಪಿಎಸ್ ಅಧಿಕಾರಿಗಳು ಅಸಮಾಧಾನ ಹೊರ ಹಾಕಿದ್ದಾರೆ. ಆಂತರಿಕ ಭದ್ರತಾ ದಳದ ಎಡಿಜಿಪಿ ಆಗಿ ಅಮೃತ್ಪಾಲ್ ವರ್ಗಾವಣೆಯಾಗಿದ್ದಾರೆ. ತನ್ನ 2 ವರ್ಷ 3 ತಿಂಗಳ ಅವಧಿಯಲ್ಲಿ ಉತ್ತಮ ಕೆಲಸ ಮಾಡಿರುವೆ. ಇತ್ತೀಚಿನ ದಿನಗಳಲ್ಲಿ ನಡೆದಿರುವ ಹಾನಿಕಾರಕ ವಿಚಾರ ಬಿಟ್ಟರೆ ಉಳಿದಂತೆ ಉತ್ತಮ ಕೆಲಸ ಮಾಡಿರುವ ತೃಪ್ತಿ ಇದೆ ಎಂದು ತನ್ನ ಸಹೋದ್ಯೋಗಿಗಳ ಬಳಿ ಅಮೃತ್ಪಾಲ್ ಹೇಳಿಕೊಂಡಿದ್ದಾರೆ. ಕರ್ತವ್ಯದ ವೇಳೆ ಸಿಬ್ಬಂದಿ, ಅಧಿಕಾರಿಗಳಿಂದ ಉತ್ತಮ ಸಹಕಾರ ಸಿಕ್ಕಿದೆ. ಆಂತರಿಕ ಭದ್ರತಾ ದಳದಲ್ಲಿ ನಮ್ಮ ಹೊಸ ಸವಾಲುಗಳಿವೆ. ನಾವೆಲ್ಲ ಉತ್ತಮವಾಗಿ ಕೆಲಸ ಮಾಡಬೇಕು ಎಂದಿದ್ದಾರೆ. ಅಮೃತ್ಪಾಲ್ಗೆ ಐಜಿಪಿ ಡಿ.ರೂಪಾ ಧ್ವನಿಗೂಡಿಸಿದ್ದು ಒಳ್ಳೆಯ ಅಧಿಕಾರಿಗಳಿಗೆ ಹೀಗೆ ಆಗಬಾರದು. ಇಲಾಖೆಯನ್ನು ಜನತೆ ಅನುಮಾನದಿಂದ ನೋಡುವಂತಾಗುತ್ತೆ. ಇದರಿಂದ ಸರ್ಕಾರಕ್ಕೂ ಮುಜುಗರ ಆಗುತ್ತೆ. ಸಮಸ್ಯೆ ಬಂದಾಗ ಎಲ್ಲರೂ ಕುಳಿತು ಚರ್ಚೆಸಬೇಕು. ಹಿರಿಯ ಅಧಿಕಾರಿಗಳ ಈ ಬಗ್ಗೆ ಗಮನ ಹರಿಸಬೇಕಿದೆ. ನಿಷ್ಠೆಯಿಂದ ಕೆಲಸ ಮಾಡುವ ಅಧಿಕಾರಿಗಳಿಗೆ ಸಮಸ್ಯೆ ಆಗುತ್ತೆ ಎಂದು ಎಡಿಜಿಪಿ ಅಮೃತ್ಪಾಲ್ ಪರ ಐಜಿಪಿ ಡಿ.ರೂಪಾ ಮಾತನಾಡಿದ್ದಾರೆ.
ಇದನ್ನೂ ಓದಿ: 545 ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ; ಕಿಂಗ್ ಪಿನ್ಗಳ ಜೊತೆ ಸಂಪರ್ಕ ಹೊಂದಿರುವವರಿಗೂ ಸಂಕಷ್ಟ ಶುರು
Samantha Birthday: ಸಮಂತಾ ಜನ್ಮದಿನ: ಮದುವೆ, ವಿಚ್ಛೇದನ ಏನೇ ಆದ್ರೂ ಕಮ್ಮಿ ಆಗಿಲ್ಲ ಈ ನಟಿಯ ಚಾರ್ಮ್; ಕಾರಣವೇನು?
Published On - 11:33 am, Thu, 28 April 22