Video: ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರು ಕಾರು ಅಪಘಾತವಾಗಿದೆ ಎನ್ನಲಾದ ಸ್ಥಳ ಇದೇ ನೋಡಿ
ಚಂದ್ರು ಕಾರು ಅಪಘಾತವಾಗಿದೆಯೆನ್ನಲಾದ ಸ್ಥಳ ಇದೇ ನೋಡಿ.
ದಾವಣಗೆರೆ: ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದ ಹೊನ್ನಾಳಿ ಬಿಜೆಪಿ ಶಾಸಕ ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ್ ಇಂದು(,03) ಶವ ಪತ್ತೆಯಾಗಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಗ್ರಾಮದ ಬಳಿ ಇರುವ ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಕಾರಿನ ಸಹಿತ ಚಂದ್ರಶೇಖರ್ನ ಮೃತದೇಹ ಸಿಕ್ಕಿದೆ.
ಕಾಲುವೆಯಿಂದ ಕ್ರೇನ್ ಮೂಲಕ ಚಂದ್ರಶೇಖರ್ ಕಾರನ್ನು ಮೇಲೆತ್ತಲಾಗಿದ್ದು, ಕಾರಿನಲ್ಲಿ ಏರ್ ಬ್ಯಾಗ್ ಸಹ ಓಪನ್ ಆಗಿರುವುದು ತಿಳಿದುಬಂದಿದೆ. ಇನ್ನು ಕಾರಿನ ಮುಂಭಾಗದ ಬಿಡಿಭಾಗಗಗಳು ರಸ್ತೆ ಪಕ್ಕ ಬಿದ್ದಿರುವುದು ಕಂಡುಬಂದಿದೆ. ಚಂದ್ರು ಕಾರು ಅಪಘಾತವಾಗಿದೆಯೆನ್ನಲಾದ ಸ್ಥಳ ಇದೇ ನೋಡಿ.