ಹುಬ್ಬಳ್ಳಿ: ವಾಚ್​ಗಾಗಿ ಸ್ನೇಹಿತರ ನಡುವೆ ಜಗಳ; ಗಾಂಜಾ ಅಮಲಿನಲ್ಲಿ ಗೆಳೆಯನನ್ನೇ ಚಾಕುವಿನಿಂದ ಇರಿದು ಕೊಂದ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 07, 2023 | 9:01 PM

ಅವರಿಬ್ಬರು ಕಳೆದ ಒಂದು ವರ್ಷದಿಂದ ಸ್ನೇಹಿತರು. ಒಂದೇ ಏರಿಯಾದಲ್ಲಿದ್ದ ಅವರು ಮೂರು ತಿಂಗಳಿಂದ ಆಪ್ತ ಸ್ನೇಹಿತರಾಗಿದ್ರು. ಸ್ನೇಹಿತರಾಗಿದ್ದ ಅವರ ನಡುವೆ ವಾಚ್ ಬಂದು ಬದಲಾವಣೆ ಆಗಿತ್ತು. ಅದೇ ವಾಚ್​ಗೆ ಇಂದು ಒಬ್ಬನ ಪ್ರಾಣ ಹೋಗಿದೆ. ಹೌದು, ವಾಚ್​ಗಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಅರೇ ಏನಿದು ಅಂತೀರಾ? ಈ ಸ್ಟೋರಿ ನೋಡಿ.

ಹುಬ್ಬಳ್ಳಿ: ವಾಚ್​ಗಾಗಿ ಸ್ನೇಹಿತರ ನಡುವೆ ಜಗಳ; ಗಾಂಜಾ ಅಮಲಿನಲ್ಲಿ ಗೆಳೆಯನನ್ನೇ ಚಾಕುವಿನಿಂದ ಇರಿದು ಕೊಂದ
ಮೃತ ವ್ಯಕ್ತಿ
Follow us on

ಹುಬ್ಬಳ್ಳಿ, ಸೆ.07: ಶಾಂತವಾಗಿದ್ದ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕೇವಲ 3000 ಬೆಲೆಯ ಸ್ಮಾರ್ಟ್ ವಾಚ್​ಗಾಗಿ ಮತ್ತೆ ನೆತ್ತರು ಹರದಿದೆ. ಹೌದು, ಛೋಟಾ ಮುಂಬೈ ಎಂದು ಕರೆಯಲ್ಪಡುವ ಹುಬ್ಬಳ್ಳಿಯ (Hubballi) ಬೆಂಗೇರಿಯ ವೆಂಕಟೇಶ್ವರ ಕಾಲೋನಿಯಲ್ಲಿ ಕೊಲೆ ನಡೆದಿದೆ. ಮನೋಜ್ ಪಾರ್ಕ್ ನಿವಾಸಿಯಾದ ಅಸ್ಲಂ (30) ಎಂಬಾತನನ್ನು ಆತನ ಸ್ನೇಹಿತ ಮಂಜು ಎನ್ನುವವರು ಕೊಲೆ ಮಾಡಿದ್ದಾರೆ. ಕಳೆದ ಕೆಲ ದಿನಗಳಿಂದ ಶಾಂತವಾಗಿದ್ದ ಹುಬ್ಬಳ್ಳಿ ನಗರದಲ್ಲಿ ಯಾವುದೇ ಕೊಲೆ ಇಲ್ಲ ಎಂದು ಜನ ಆರಾಮಾಗಿದ್ದರು. ಅಂತಹದರಲ್ಲಿ ಕಳೆದ 5ನೇ ತಾರೀಕಿನ ರಾತ್ರಿ ನೆತ್ತರು ಹರದಿದೆ.

ಒಂದು ಸ್ಮಾರ್ಟ್ ವಾಚ್​ಗಾಗಿ ಗಲಾಟೆ ಕೊಲೆಯಲ್ಲಿ ಅಂತ್ಯ

ಅಸ್ಲಂ ಹಾಗೂ ಮಂಜು ಇಬ್ಬರು ಸ್ನೇಹಿತರು. ಅಸ್ಲಂ ಸ್ನೇಹಿತ ಮಂಜುಗೆ ವಾಚ್ ಕೊಟ್ಟಿದ್ದ. ನಿನ್ನೆ ರಾತ್ರಿ ಎಂಟು ಗಂಟೆ ಸುಮಾರಿಗೆ ವಾಪಸ್ ಕೇಳಿದಾಗ ಮಂಜು ವಾಚ್ ಕೊಡಲು ನಿರಾಕರಿಸಿದ್ದಾನೆ. ಇದಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳದಿದೆ. ಅದು ವಿಕೋಪಕ್ಕೆ ಹೋದಾಗ ಮಂಜು ಮನೆಯಲ್ಲಿರುವ ಚಾಕು ತಂದು ಎದೆಗೆ ಇರಿದ್ದಾನೆ. ಪರಿಣಾಮ ಅಸ್ಲಂ ಗಂಭೀರ ಗಾಯಗೊಂಡಿದ್ದ. ಆತನನ್ನು ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತನಾಗಿದ್ದಾನೆ.

ಇದನ್ನೂ ಓದಿ:ಹಳೇ ದ್ವೇಷಕ್ಕೆ ಭೀಕರ ಹತ್ಯೆ; ಒಂದೇ ಮನೆಯ ನಾಲ್ವರನ್ನು ಕೊಚ್ಚಿ ಕೊಲೆ

ಅಲರ್ಟ್ ಆದ ಖಾಕಿ; ವಾಚ್​ ಅಷ್ಟೇ ಅಲ್ಲ, ಗಾಂಜಾ ಘಮಲಿನಲ್ಲಿ ನಡೆದಿತ್ತು ಕೊಲೆ

ಇನ್ನು ಮೃತನಾಗಿದ್ದು ಮುಸ್ಲಿಂ, ಕೊಲೆ ಮಾಡಿದ್ದು ಹಿಂದೂ, ಹೀಗಾಗಿ ಅಲರ್ಟ್ ಆದ ಖಾಕಿ‌ ಕಿಮ್ಸ್ ನಲ್ಲಿ ಬೀಡು ಬಿಟ್ಟಿತ್ತು. ಖುದ್ದು ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಕಮೀಷನರ್ ರೇಣುಕಾ ಸುಕುಮಾರ ಸ್ಥಳಕ್ಕೆ ಆಗಮಿಸಿದ್ರು. ಹುಬ್ಬಳ್ಳಿಯ ಕಿಮ್ಸ್ ಗೆ ಆಗಮಿಸಿದ್ದ ರೇಣುಕಾ ಸುಕುಮಾರ ಕೊಲೆಯ‌ ಮಾಹಿತಿ ಪಡೆದುಕೊಂಡರು.ಇನ್ನು ಇದು ಕೇವಲ ವಾಚ್​ಗಾಗಿ ಅಲ್ಲ, ಗಾಂಜಾ ಗಮ್ಮತ್ತಲ್ಲಿ ನಡೆದ ಕೊಲೆ ಎನ್ನಲಾಗಿದೆ. ಹೌದು, ಮಂಜು ಗಾಂಜಾ ಸೇವನೆ ಮಾಡಿದ್ದ. ಗಾಂಜಾ ಗುಂಗಲ್ಲಿ ಏನ‌ ಮಾಡಿದಾನೆ ಅನ್ನೋದು ಅವನಿಗೆ ಗೊತ್ತೆ ಆಗಿಲ್ಲ.

ಇದಲ್ಲದೆ ತಾನು ಚಾಕು ಹಾಕಿಕೊಂಡು ಕಿಮ್ಸ್ ಗೆ ಬಂದಿದ್ದ. ಕಿಮ್ಸ್ ಬಂದಾಗಲೇ ಕೊಲೆ ಆರೋಪಿ ಮಂಜು‌ನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮನೆಯಲ್ಲಿ ತರಕಾರಿ ಕಟ್ ಮಾಡೋ ಚಾಕು ತಂದು ಮಂಜು ಅಸ್ಲಂ ನ ಎದೆಗೆ ಇರಿದಿದ್ದ, ಕತ್ತಲ್ಲಲಿ ಏನಾಗಿದೆ ಅನ್ನೋ ಅಷ್ಟರಲ್ಲಿ ಮಂಜು ಅಲ್ಲಿಂದ ಎಸ್ಕೇಪ್ ಆಗಿದ್ದ. ರಕ್ತಸ್ರಾವದಿಂದ ಬಳಲುತ್ತಿದ್ದ ಅಸ್ಲಂನನ್ನ ಕೂಡಲೇ ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ 30 ವರ್ಷದ ಅಸ್ಲಂ ಮೃತನಾಗಿದ್ದ. ಮಗನ ಕಳೆದುಕೊಂಡ ತಾಯಿ ಕಣ್ಣೀರು ಹಾಕುತ್ತಿದ್ದಾಳೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ