ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ವೇಗವಾಗಿ ಹೆಚ್ಚಾಗುತ್ತಿದ್ದರೆ, ಜೀವನಶೈಲಿಯಲ್ಲಿ ಈ ಬದಲಾವಣೆಗಳನ್ನು ಮಾಡಿ

ನಮ್ಮ ದೇಹದಲ್ಲಿ ಎರಡು ರೀತಿಯ ಕೊಲೆಸ್ಟ್ರಾಲ್​​ಗಳಿವೆ, ಒಂದು ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಇನ್ನೊಂದು ಕೆಟ್ಟ ಕೊಲೆಸ್ಟ್ರಾಲ್. ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದಾಗ ಹಲವು ಸಮಸ್ಯೆಗಳು ಉದ್ಭವಿಸಿ ಹೃದ್ರೋಗದಿಂದ ಹಿಡಿದು ಹೃದಯಾಘಾತ, ಪಿತ್ತಜನಕಾಂಗದ ಹಾನಿ ಮತ್ತು ಶ್ವಾಸಕೋಶ ಸಂಬಂಧಿ ಸಮಸ್ಯೆಗಳವರೆಗೆ ಹಲವು ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ನೀವು ಯಾವ 5 ಅಭ್ಯಾಸಗಳನ್ನು ಅಳವಡಿಸಿಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ವೇಗವಾಗಿ ಹೆಚ್ಚಾಗುತ್ತಿದ್ದರೆ, ಜೀವನಶೈಲಿಯಲ್ಲಿ ಈ ಬದಲಾವಣೆಗಳನ್ನು ಮಾಡಿ
ಕೊಬ್ಬು
Follow us
ನಯನಾ ರಾಜೀವ್
|

Updated on: Aug 31, 2023 | 3:00 PM

ನಮ್ಮ ದೇಹದಲ್ಲಿ ಎರಡು ರೀತಿಯ ಕೊಲೆಸ್ಟ್ರಾಲ್​​ಗಳಿವೆ, ಒಂದು ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಇನ್ನೊಂದು ಕೆಟ್ಟ ಕೊಲೆಸ್ಟ್ರಾಲ್, ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದಾಗ ಹಲವು ಸಮಸ್ಯೆಗಳು ಉದ್ಭವಿಸಿ ಹೃದ್ರೋಗದಿಂದ ಹಿಡಿದು ಹೃದಯಾಘಾತ, ಪಿತ್ತಜನಕಾಂಗದ ಹಾನಿ ಮತ್ತು ಶ್ವಾಸಕೋಶ ಸಂಬಂಧಿ ಸಮಸ್ಯೆಗಳವರೆಗೆ ಹಲವು ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ನೀವು ಯಾವ 5 ಅಭ್ಯಾಸಗಳನ್ನು ಅಳವಡಿಸಿಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಸ್ಯಾಚುರೇಟೆಡ್ ಕೊಬ್ಬನ್ನು ಕಡಿಮೆ ಮಾಡಿ ಹೆಚ್ಚಿನ ಕೊಬ್ಬಿನಂಶ ಹೊಂದಿರುವ ಹಾಲು, ಬೆಣ್ಣೆ, ಕೆನೆ, ತುಪ್ಪ, ಮೊಸರು ಮುಂತಾದ ಡೈರಿ ಉತ್ಪನ್ನಗಳಿಂದ ದೂರವಿರಿ. ಇದರ ಬದಲಾಗಿ ನೀವು ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳನ್ನು ಸೇವಿಸಬಹುದು. ಅಷ್ಟೇ ಅಲ್ಲ, ಸಂಸ್ಕರಿಸಿದ ಆಹಾರ ಮತ್ತು ಮಾಂಸದಲ್ಲಿಯೂ ಅಪರ್ಯಾಪ್ತ ಕೊಬ್ಬು ಕಂಡುಬರುತ್ತದೆ, ಇವುಗಳ ಸೇವನೆಯನ್ನೂ ಕಡಿಮೆ ಮಾಡಬೇಕು.

ಆರೋಗ್ಯಕರ ಕೊಬ್ಬನ್ನು ತಿನ್ನಿರಿ ಅಪರ್ಯಾಪ್ತ ಕೊಬ್ಬಿನ ಬದಲಿಗೆ, ನೀವು ಆರೋಗ್ಯಕರ ಕೊಬ್ಬನ್ನು ಸೇವಿಸಬಹುದು, ಉದಾಹರಣೆಗೆ ಆಲಿವ್ ಎಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಸಂಸ್ಕರಿಸಿದ ಎಣ್ಣೆಯ ಬದಲಿಗೆ ಬಳಸಿ. ಮೊಟ್ಟೆಯ ಹಳದಿ ಭಾಗದ ಬದಲಿಗೆ, ಬಿಳಿ ಭಾಗವನ್ನು ತಿನ್ನಿರಿ, ಕೊಬ್ಬಿನಾಮ್ಲಗಳು ಸಮೃದ್ಧವಾಗಿರುವ ಮೀನುಗಳನ್ನು ತಿನ್ನಿರಿ, ಇದರಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು ವಿಶೇಷವಾಗಿ ಕಂಡುಬರುತ್ತವೆ.

ಮತ್ತಷ್ಟ ಓದಿ: Cholesterol: ದೇಹದಲ್ಲಿ ಅಧಿಕ ಕೊಬ್ಬು ಸಂಗ್ರಹವಾದರೆ ಈ 3 ಭಾಗಗಳಲ್ಲಿ ಉರಿಯೂತ ಕಾಣಿಸಿಕೊಳ್ಳುತ್ತೆ

ಆಹಾರದಲ್ಲಿ ಫೈಬರ್ ಸೇರಿಸಿ ತಾಜಾ ಹಣ್ಣುಗಳು ಮತ್ತು ಬೀಜಗಳು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಕೆಲಸ ಮಾಡುತ್ತವೆ. ನಿಮ್ಮ ಆಹಾರದಲ್ಲಿ ಆವಕಾಡೊ, ಸೇಬು, ಸಿಟ್ರಸ್ ಆಹಾರ, ಓಟ್ ಮೀಲ್, ಸಲಾಡ್, ಚಿಯಾ ಬೀಜಗಳನ್ನು ಸೇರಿಸಿ, ಏಕೆಂದರೆ ಇದು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸುವ ಹೆಚ್ಚಿನ ಫೈಬರ್ ಹೊಂದಿರುತ್ತದೆ.

ಆಹಾರದಲ್ಲಿ ಮಸಾಲೆ ಪದಾರ್ಥಗಳನ್ನು ಸೇರಿಸಿ ಕೆಲವು ವಿಶೇಷ ಮಸಾಲೆಗಳು ಕೊಲೆಸ್ಟ್ರಾಲ್‌ ಕಡಿಮೆ ಮಾಡಲು ತುಂಬಾ ಪ್ರಯೋಜನಕಾರಿ ದಾಲ್ಚಿನ್ನಿ, ಬೆಳ್ಳುಳ್ಳಿ, ಶುಂಠಿ, ಕರಿಮೆಣಸು ಮತ್ತು ಕೊತ್ತಂಬರಿ, ಅವು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತವೆ ಮತ್ತು ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.

ನಿಯಮಿತ ವ್ಯಾಯಾಮ ಆಹಾರ ಕ್ರಮವನ್ನು ಬದಲಾಯಿಸುವುದರ ಹೊರತಾಗಿ, ನಿಮ್ಮ ನಿಯಮಿತ ದಿನಚರಿಯಲ್ಲಿ ವ್ಯಾಯಾಮವನ್ನು ಸೇರಿಸುವುದು ಬಹಳ ಮುಖ್ಯ. ನೀವು ವಾಕಿಂಗ್, ಜಾಗಿಂಗ್, ಸೈಕ್ಲಿಂಗ್ ಅಥವಾ ಈಜು ಮುಂತಾದ ವ್ಯಾಯಾಮಗಳನ್ನು ಮಾಡಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ