ಬೆಂಗಳೂರು: ನಗರದಲ್ಲಿ ಹಾಡಹಗಲೇ ವ್ಯಕ್ತಿಯ ಬರ್ಬರ ಹತ್ಯೆ ಪ್ರಕರಣ ನಡೆದಿದೆ. ಬೆಂಗಳೂರಿನ ನಾಗವಾರ ರಸ್ತೆಯ ಬಳಿ ಶ್ರೀಧರ್ ಎಂಬವರ ಹತ್ಯೆಯಾಗಿದೆ. ಬಾಣಸವಾಡಿಯ ರಾಮಸ್ವಾಮಿಪಾಳ್ಯ ನಿವಾಸಿ ಶ್ರೀಧರ್ ಮಾನವ ಹಕ್ಕು ಮತ್ತು ಭ್ರಷ್ಟಾಚಾರ ಮುಕ್ತ ಸಂಘಟನೆ ಉಪಾಧ್ಯಕ್ಷ ಆಗಿದ್ದರು. ನಾಗವಾರ ಬಳಿ ಬಂದಿದ್ದ ವೇಳೆ ಗ್ಯಾಂಗ್ ಒಂದು ದಾಳಿ ಮಾಡಿದೆ. ರಿಂಗ್ ರೋಡ್ನ ಸರ್ವಿಸ್ ರಸ್ತೆಯಲ್ಲಿ ಅಟ್ಟಾಡಿಸಿ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಕಾರು ಬಿಟ್ಟು ಸರ್ವಿಸ್ ರಸ್ತೆಯಲ್ಲಿ ಓಡುವಾಗ ಶ್ರೀಧರ್ ಹತ್ಯೆಯಾಗಿದೆ. ಆರೋಪಿಗಳಿಗೆ ಹೆಣ್ಣೂರು ಪೊಲೀಸರು ಬಲೆ ಬೀಸಿದ್ದಾರೆ.
ಪೂರ್ವ ವಿಭಾಗ ಡಿಸಿಪಿ ಡಾ. ಶರಣಪ್ಪ ಪ್ರಕರಣದ ಬಗ್ಗೆ ಹೇಳಿಕೆ ನೀಡಿದ್ದಾರೆ. ಆರೋಪಿಗಳು ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಗಾರ್ಮೆಂಟ್ಸ್ ವ್ಯವಹಾರ ಮಾಡಿಕೊಂಡಿದ್ದ ಮೃತ ಶ್ರೀಧರ್ ಮೇಲೆ ಹಲ್ಲೆ ನಡೆಸಲಾಗಿದೆ. ಭ್ರಷ್ಟಾಚಾರ ಮತ್ತು ಹ್ಯೂಮನ್ ರೈಟ್ಸ್ ಎಂಬ ಸಂಘ ಸಂಸ್ಥೆಯ ಉಪಾಧ್ಯಕ್ಷ ಆಗಿದ್ದ ಶ್ರೀಧರ್ ಮೇಲೆ ಹಲ್ಲೆ ನಡೆದಿದೆ. ಇಂದು ಹೆಣ್ಣೂರಿನಿಂದ ನಾಗವಾರ ಕಡೆಗೆ ತನ್ನ ಇನ್ನೋವಾ ಕ್ರಿಷ್ಟಾ ಕಾರಿನಲ್ಲಿ ಹೋಗ್ತಿದ್ದ ಶ್ರೀಧರ್ ಮೇಲೆ ಕಾರು ಅಡ್ಡಗಟ್ಟಿದ್ದ ಐವರು ಹಲ್ಲೆ ನಡೆಸಿದ್ದಾರೆ. ಕಾರನ್ನು ಅಲ್ಲಿಯೇ ಬಿಟ್ಟು ವಿರುದ್ಧ ರಸ್ತೆಗೆ ಓಡಿ ಬಂದಿದ್ದ ಶ್ರೀಧರ್ ಅವರನ್ನು ಹಿಂಬಾಲಿಸಿ ಹತ್ಯೆ ಮಾಡಲಾಗಿದೆ. ಹಂತಕರಿಗಾಗಿ ಈಗಾಗಲೆ ಎರಡು ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಮದುವೆ ಆಗಿದ್ದರೂ ಫೇಸ್ಬುಕ್ ಲವ್; ಯುವತಿ ರಂಪಾಟಕ್ಕೆ ನೊಂದು ಯುವಕ ಆತ್ಮಹತ್ಯೆ
ಯುವಕನೋರ್ವ ಮದುವೆ ಆಗಿದ್ದರೂ ಬೇರೆ ಯುವತಿ ಜತೆ ಫೇಸ್ಬುಕ್ ಪ್ರೀತಿಯಲ್ಲಿ ಬಿದ್ದಿದ್ದ. ಮದುವೆಯಾಗಿರುವ ವಿಚಾರ ತಿಳಿದು ಯುವತಿ ರಂಪಾಟ ಮಾಡಿದ ಹಿನ್ನೆಲೆಯಲ್ಲಿ ನೊಂದು ಚೇತನ್ (27) ಎಂಬ ಯುವಕ ನೇಣಿಗೆ ಶರಣಾಗಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದಲ್ಲಿ ಘಟನೆ ನಡೆದಿತ್ತು. 4 ವರ್ಷದ ಹಿಂದೆ ತುಮಕೂರಿನ ನವ್ಯಾ ಜತೆ ಚೇತನ್ಗೆ ವಿವಾಹವಾಗಿತ್ತು. ನವ್ಯಾ, ಚೇತನ್ ದಂಪತಿಗೆ 3 ವರ್ಷದ ಹೆಣ್ಣುಮಗುವಿದೆ. 1 ವರ್ಷದ ಹಿಂದೆ ಕೌಟುಂಬಿಕ ಕಲಹದಿಂದ ಚೇತನ್ ಪತ್ನಿಯನ್ನು ತೊರೆದಿದ್ದ. ನಂತರ ವಿವಾಹ ವಿಚ್ಛೇದನಕ್ಕಾಗಿ ಕೋರ್ಟ್ ಮೊರೆಹೋಗಿದ್ದ. ಈ ನಡುವೆ ಫೇಸ್ಬುಕ್ನಲ್ಲಿ ಯುವತಿ ಜೊತೆಗೆ ಪ್ರೀತಿಗೆ ಬಿದ್ದಿದ್ದು, ಮದುವೆಯಾಗಿದ್ದ ವಿಚಾರ ತಿಳಿದು ಯುವತಿ ರಂಪಾಟ ನಡೆಸಿದ್ದಾಳೆ. ಇದರಿಂದ ನೊಂದು ಚೇತನ್ ಮನೆಯಲ್ಲಿ ನೇಣಿಗೆ ಶರಣಾಗಿದ್ದ. ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.
ಇದನ್ನೂ ಓದಿ: Crime News: ಕೋರ್ಟ್ನಲ್ಲೇ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಕೊಲೆ ಆರೋಪಿ!
ಇದನ್ನೂ ಓದಿ: Nisha Dahiya Murder: ಸೋನಿಪತ್ನಲ್ಲಿ ಕುಸ್ತಿಪಟು ನಿಶಾ ದಹಿಯಾ ಕೊಲೆ ಪ್ರಕರಣ; ಕೋಚ್ ಪವನ್ ಸೇರಿ ಆರೋಪಿಗಳ ಬಂಧನ
Published On - 2:45 pm, Sat, 13 November 21