ಬೆಂಗಳೂರು: ಒಂಟಿ ಮನೆಯಲ್ಲಿ ವಾಸವಾಗಿದ್ದ ಮಹಿಳೆಯನ್ನು ಕಟ್ಟಿ ಹಾಕಿ ಕಳ್ಳತನ; ಇಬ್ಬರು ಅರೆಸ್ಟ್!
ದೊಡ್ಡಜಾಲದ ಒಂಟಿ ಮನೆಯಲ್ಲಿ ಮಹಿಳೆಯೊಬ್ಬರು ವಾಸವಾಗಿದ್ದರು. ಇದೇ ತಿಂಗಳ 6ನೇ ತಾರೀಖು ರಾತ್ರಿ ವೇಳೆ ಮಹಿಳೆ ಮನೆಗೆ ನುಗ್ಗಿದ್ದ ಖದೀಮರು ಕಳ್ಳತನ ನಡೆಸಿದ್ದರು.
ಬೆಂಗಳೂರು: ಒಂಟಿ ಮನೆಯಲ್ಲಿ ವಾಸವಾಗಿದ್ದ ಮಹಿಳೆಯನ್ನು ಕಟ್ಟಿ ಹಾಕಿ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕೃತ್ಯ ನಡೆದ 24 ಗಂಟೆಯಲ್ಲಿ ಬೆಂಗಳೂರಿನ ಚಿಕ್ಕಜಾಲ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ದೊಡ್ಡಜಾಲದಲ್ಲಿ ಮಹಿಳೆ ಮನೆಗೆ ನುಗ್ಗಿ ಆರೋಪಿಗಳು ಕಳ್ಳತನ ಎಸಗಿದ್ದರು. ಮಹಿಳೆಯನ್ನು ಕಟ್ಟಿಹಾಕಿ ಬಾಯಿಗೆ ಬಟ್ಟೆ ತುರುಕಿ, ಮನೆಯಲ್ಲಿ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದರು. ದೊಡ್ಡಜಾಲದ ರಾಕೇಶ್ ಸೇರಿ ಇಬ್ಬರು ಆರೋಪಿಗಳು ಸದ್ಯ ಬಂಧನಕ್ಕೊಳಗಾಗಿದ್ದಾರೆ.
ದೊಡ್ಡಜಾಲದ ಒಂಟಿ ಮನೆಯಲ್ಲಿ ಮಹಿಳೆಯೊಬ್ಬರು ವಾಸವಾಗಿದ್ದರು. ಇದೇ ತಿಂಗಳ 6ನೇ ತಾರೀಖು ರಾತ್ರಿ ವೇಳೆ ಮಹಿಳೆ ಮನೆಗೆ ನುಗ್ಗಿದ್ದ ಖದೀಮರು ಕಳ್ಳತನ ನಡೆಸಿದ್ದರು. ಮನೆಯ ಬಾಗಿಲು ತಟ್ಟಿ ಒಳ ಪ್ರವೇಶಿಸಿ ಕೃತ್ಯ ಎಸಗಿದ್ದರು. ಬಾಗಿಲು ತೆರೆದ ಮಹಿಳೆ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳು, ನಂತರ ಮಹಿಳೆಯ ಬಾಯಿಗೆ ಬಟ್ಟೆ ತುರುಕಿ ಕೈಕಾಲು ಕಟ್ಟಿ ಹಾಕಿದ್ದರು. ನಂತರ ಮನೆಯಲ್ಲಿದ್ದ ಚಿನ್ನಾಭರಣ, ನಗದು ಕದ್ದು ಎಸ್ಕೇಪ್ ಆಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಚಿಕ್ಕಜಾಲ ಪೊಲೀಸರು ಮಾಹಿತಿ ಬಂದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಮಹಿಳೆಯ ಮಗಳು ವಿದೇಶದಲ್ಲಿ ವಾಸವಿದ್ದಾರೆ. ದೊಡ್ಡ ಮನೆಯಲ್ಲಿ ಮಹಿಳೆ ಒಂಟಿಯಾಗಿ ವಾಸವಿದ್ದರು. ಅದೇ ಊರಿನ ನಿವಾಸಿಯಾದ ರಾಕೇಶ್ ಮಹಿಳೆ ಬಗ್ಗೆ ಮಾಹಿತಿ ಪಡೆದು ತನ್ನ ಗೆಳೆಯನೊಂದಿಗೆ ಸೇರಿ ಕೃತ್ಯ ಎಸಗಿದ್ದಾನೆ. ಸದ್ಯ ಆರೋಪಿಗಳ ಬಂಧಿಸಿ ಚಿಕ್ಕಜಾಲ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿ ಸೆರೆ ಬೀಗ ಹಾಕಿದ್ದ ಮನೆಗಳಲ್ಲಿ ಕಳವು ಮಾಡುತ್ತಿದ್ದ ಆರೋಪಿ ಸೆರೆಯಾಗಿದ್ದಾನೆ. ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಯೋಗೇಶ್ ಎಂಬುವವನನ್ನು ಅರೆಸ್ಟ್ ಮಾಡಿದ್ದಾರೆ. ಕಿಟಕಿ ಪಕ್ಕ ಕೀ ಇಡುತ್ತಿದ್ದನ್ನು ಗಮನಿಸಿ ಆರೋಪಿ ಕಳ್ಳತನ ಮಾಡುತ್ತಿದ್ದ. ಬಂಧಿತ ಯೋಗೇಶ್ನಿಂದ 48.9 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ
ಆಂಧ್ರಪ್ರದೇಶದಲ್ಲಿ ಭೀಕರ ಅಗ್ನಿ ದುರಂತ; ರಸ್ತೆ ಬದಿಯಲ್ಲಿದ್ದ 30 ಗುಡಿಸಲುಗಳು ಸಂಪೂರ್ಣ ಭಸ್ಮ
ಯಾದಗಿರಿಯಲ್ಲಿ ಆಟೋ, ಲಾರಿ ನಡುವೆ ಭೀಕರ ಅಪಘಾತ! ಮೂವರ ದುರ್ಮರಣ
Published On - 10:12 am, Sat, 13 November 21