ಯಾದಗಿರಿಯಲ್ಲಿ ಆಟೋ, ಲಾರಿ ನಡುವೆ ಭೀಕರ ಅಪಘಾತ! ಮೂವರ ದುರ್ಮರಣ

TV9 Digital Desk

| Edited By: sandhya thejappa

Updated on: Nov 13, 2021 | 8:53 AM

ಆಟೋ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಆಟೋ ಚಾಲಕ, ಆಟೋದಲ್ಲಿದ್ದ 15 ದಿನದ ಮಗು ಹಾಗೂ ಮಗುವಿನ ಅಜ್ಜ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ಯಾದಗಿರಿಯಲ್ಲಿ ಆಟೋ, ಲಾರಿ ನಡುವೆ ಭೀಕರ ಅಪಘಾತ! ಮೂವರ ದುರ್ಮರಣ
ಲಾರಿ ಮತ್ತು ಆಟೋ ನಡುವೆ ಡಿಕ್ಕಿಯಾಗಿ ಭೀಕರ ಅಪಘಾತ ನಡೆದಿದೆ

Follow us on

ಯಾದಗಿರಿ: ಆಟೋ ಮತ್ತು ಲಾರಿ ನಡುವೆ ಡಿಕ್ಕಿಯಾಗಿ ಮೂವರು ಮೃತಪಟ್ಟಿರುವ ಘಟನೆ ಯಾದಗಿರಿ ನಗರದ ಮುದ್ನಾಳ್ ಕ್ರಾಸ್ ಬಳಿ ಸಂಭವಿಸಿದೆ. ಎರಡೂವರೆ ತಿಂಗಳ ಮಗು ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಆಟೋದಲ್ಲಿದ್ದ 6 ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಯಾದಗಿರಿ ತಾಲೂಕಿನ ಕಂಚಗಾರಹಳ್ಳಿ ತಾಂಡಾಗೆ ಹೋಗುತ್ತಿದ್ದರು. ಈ ವೇಳೆ ಭೀಕರ ಅಪಘಾತ ನಡೆದಿದೆ.

ಆಟೋ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಆಟೋ ಚಾಲಕ, ಆಟೋದಲ್ಲಿದ್ದ 15 ದಿನದ ಮಗು ಹಾಗೂ ಮಗುವಿನ ಅಜ್ಜ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಆಟೋ ಚಾಲಕ ಲಕ್ಷ್ಮಣ ಕಂಚಗಾರಹಳ್ಳಿ ತಾಂಡ ನಿವಾಸಿ, ಜಯರಾಜ್ ಹಾಗೂ 15 ದಿನದ ಮಗು ಶಹಾಪುರ ತಾಲೂಕಿನ ಹೋತಪೇಟೆ ನಿವಾಸಿ. ಆಟೋದಲ್ಲಿ ಪ್ರಯಾಣಿಸುತ್ತಿದ್ದ ಇನ್ನು 6 ಜನರಿಗೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯಾದಗಿರಿ ಸಂಚಾರಿ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ಪರಿಹಾರದ ಹಣಕ್ಕಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ ಬಾಗಲಕೋಟೆ: ನವನಗರದ 63ನೇ ಸೆಕ್ಟರ್ನಲ್ಲಿ ಬಾಮೈದನಿಗೆ ಭಾವ ಮತ್ತು ಸಹಚರರು ಚಾಕು ಇರಿದು ಹತ್ಯೆಗೈದಿದ್ದಾರೆ. ಆಲಮಟ್ಟಿ ಜಲಾಶಯ ಮುಳುಗಡೆ ಆಸ್ತಿ ಪರಿಹಾರ ವಿಚಾರಕ್ಕೆ ವೀರೇಶ್ ಹಡಗಲಿಮಠ(24) ಎಂಬುವವರನ್ನು ಭಾವ ಅವಧೂತ ಕೊಲೆ ಮಾಡಿದ್ದಾರೆ. 30 ಲಕ್ಷ ರೂಪಾಯಿ ಪರಿಹಾರಕ್ಕಾಗಿ ಬಾಮೈದ ವೀರೇಶ್, ಅಕ್ಕ ಮಧುಶ್ರೀ, ಭಾವ ಅವಧೂತ ಮಧ್ಯೆ ಗಲಾಟೆಯಾಗಿತ್ತು. ಈ ವೇಳೆ ಭಾವ ಮತ್ತು ಆತನ ಸಹಚರರಿಂದ ಬಾಮೈದನ ಕೊಲೆಯಾಗಿದೆ. ಸ್ಥಳಕ್ಕೆ ನವನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ

Petrol Price Today: ಸತತ ಒಂಬತ್ತು ದಿನಗಳಿಂದ ಸ್ಥಿರತೆಯನ್ನು ಕಾಯ್ದುಕೊಂಡ ಪೆಟ್ರೋಲ್​, ಡೀಸೆಲ್​ ದರ!

Karnataka Rain: ರಾಜ್ಯಾದ್ಯಂತ ನ. 16ರವರೆಗೆ ಭಾರೀ ಮಳೆ; ಬೆಂಗಳೂರಿನಲ್ಲಿ ಆರೆಂಜ್ ಅಲರ್ಟ್ ಘೋಷಣೆ

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada