Nisha Dahiya Murder: ಸೋನಿಪತ್​ನಲ್ಲಿ ಕುಸ್ತಿಪಟು ನಿಶಾ ದಹಿಯಾ ಕೊಲೆ ಪ್ರಕರಣ; ಕೋಚ್ ಪವನ್ ಸೇರಿ ಆರೋಪಿಗಳ ಬಂಧನ

Nisha Dahiya Murder: ಸೋನಿಪತ್​ನಲ್ಲಿ ಕುಸ್ತಿಪಟು ನಿಶಾ ದಹಿಯಾ ಕೊಲೆ ಪ್ರಕರಣ; ಕೋಚ್ ಪವನ್ ಸೇರಿ ಆರೋಪಿಗಳ ಬಂಧನ
ನಿಶಾ ದಹಿಯಾ ಕೊಲೆ ಆರೋಪಿಗಳ ಬಂಧನ

Sonipat Wrestler Nisha Dahiya: 20 ವರ್ಷದ ನಿಶಾ ದಹಿಯಾ ಕುಸ್ತಿಪಟುವಾಗಬೇಕೆಂಬ ಆಸೆಯಿಂದ ಟ್ರೈನಿಂಗ್ ಪಡೆಯುತ್ತಿದ್ದರು. ಆದರೆ, ಆಕೆಗೆ ಟ್ರೈನಿಂಗ್ ನೀಡುತ್ತಿದ್ದ ಕೋಚ್ ಪವನ್ ಅವರಿಂದಲೇ ಆಕೆ ಕೊಲೆಯಾಗಿದ್ದಾರೆ.

TV9kannada Web Team

| Edited By: Sushma Chakre

Nov 12, 2021 | 4:06 PM

ನವದೆಹಲಿ: ಹರಿಯಾಣದ ಕುಸ್ತಿಪಟು ನಿಶಾ ದಹಿಯಾ (Nisha Dahiya) ಹಾಗೂ ಅವರ ಸೋದರನಿಗೆ ಗುಂಡು ಹಾರಿಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಕೋಚ್ ಹಾಗೂ ಅವರ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. ಸೋನಿಪತ್​ನಲ್ಲಿರುವ ಸುಶೀಲ್ ಕುಮಾರ್ (Sushil Kumar) ಕುಸ್ತಿ ತರಬೇತಿ ಅಕಾಡೆಮಿಯಲ್ಲಿ ನಿಶಾ ದಹಿಯಾ ಮತ್ತು ಆಕೆಯ ಸಹೋದರ ಸೂರಜ್​ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಆದರೆ, ಈ ನಿಶಾ ದಹಿಯಾ ಹಾಗೂ ರಾಷ್ಟ್ರೀಯ ಮಟ್ಟದ ಕುಸ್ತಿಪಟು (Wrestler) ಹಾಗೂ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಕಂಚಿನ ಪದಕ ಗೆದ್ದ ನಿಶಾ ದಹಿಯಾಗೂ ಯಾವುದೇ ಸಂಬಂಧವಿಲ್ಲ. ಈ ನಿಶಾ ಬದಲು ಚಾಂಪಿಯನ್ ನಿಶಾ ದಹಿಯಾ ಅವರನ್ನು ಹತ್ಯೆ ಮಾಡಲಾಗಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಬಳಿಕ, ತಾವು ಸುರಕ್ಷಿತವಾಗಿರುವುದಾಗಿ ನಿಶಾ ದಹಿಯಾ ಸ್ಪಷ್ಟೀಕರಣ ನೀಡಿದ್ದರು.

ಕೋಚ್​ನಿಂದ ಹತ್ಯೆಯಾಗಿರುವ 20 ವರ್ಷದ ನಿಶಾ ದಹಿಯಾ ಕುಸ್ತಿಪಟುವಾಗಬೇಕೆಂಬ ಆಸೆಯಿಂದ ಟ್ರೈನಿಂಗ್ ಪಡೆಯುತ್ತಿದ್ದರು. ಆದರೆ, ಆಕೆಗೆ ಟ್ರೈನಿಂಗ್ ನೀಡುತ್ತಿದ್ದ ಕೋಚ್ ಪವನ್ ಅವರಿಂದಲೇ ಆಕೆ ಕೊಲೆಯಾಗಿದ್ದಾರೆ. ಶಾಲಾ ದಿನಗಳಿಂದಲೂ ಎಲ್ಲ ರೀತಿಯ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ನಿಶಾ ದಹಿಯಾ ಕುಸ್ತಿ ಅಕಾಡೆಮಿಯಲ್ಲಿ ಟ್ರೈನಿಂಗ್ ಪಡೆಯುತ್ತಿದ್ದರು. ತಮ್ಮ 18 ವರ್ಷದ ತಮ್ಮ ಸೂರಜ್​ನೊಂದಿಗೆ ಕುಸ್ತಿ ಅಕಾಡೆಮಿಯಿಂದ ಹೊರಡವಾಗ ಅವರಿಬ್ಬರನ್ನೂ ಅಟ್ಟಾಡಿಸಿಕೊಂಡು ಹೋಗಿದ್ದ ಕೋಚ್ ಪವನ್ ಅವರಿಬ್ಬರೂ ಶೂಟ್ ಮಾಡಿ ಹತ್ಯೆ ಮಾಡಿದ್ದ.

Nisha Dahiya Murder:

ನಿಶಾ ದಹಿಯಾ ಕೊಲೆ ಆರೋಪಿ ಪವನ್

ಈ ಘಟನೆಯನ್ನು ನಿಶಾ ದಹಿಯಾ ಅವರ ತಾಯಿಗೂ ಗಾಯಗಳಾಗಿತ್ತು. ಅವರ ಸ್ಥಿತಿ ಚಿಂತಾಜನಕವಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ. ನಂಗಲ್​ನಲ್ಲಿರುವ ಪವನ್​ನ ಕುಸ್ತಿ ಕೋಚಿಂಗ್ ಅಕಾಡೆಮಿಗೆ ಇತ್ತೀಚೆಗಷ್ಟೆ ಸೇರಿದ್ದ ನಿಶಾಗೆ ಪವನ್ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಆಕೆ 3 ತಿಂಗಳ ಹಿಂದಿನಿಂದಲೂ ಹಲವು ಬಾರಿ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಳು. ಆತ ನಿಶಾ ಮತ್ತು ಆಕೆಯ ಜೊತೆಗಿದ್ದವರ ಬ್ರೈನ್ ವಾಶ್ ಮಾಡಲು ಪ್ರಯತ್ನಿಸಿದ್ದ. ನಾನು ಒಂದೆರಡು ಬಾರಿ ಈ ಬಗ್ಗೆ ಆತನಿಗೆ ಎಚ್ಚರಿಕೆಯನ್ನೂ ಕೊಟ್ಟಿದ್ದೆ. ಆದರೆ, ನನ್ನ ಮಗಳ ಕೆರಿಯರ್​ ಸಲುವಾಗಿ ಆತನ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ. ಆದರೆ, ಆತ ನನ್ನ ಮಕ್ಕಳಿಬ್ಬರ ಪ್ರಾಣವನ್ನೇ ತೆಗೆದುಬಿಟ್ಟ ಎಂದು ನಿಶಾ ದಹಿಯಾಳ ತಂದೆ ದಯಾನಂದ್ ದಹಿಯಾ ಮಾಧ್ಯಮಗಳೊಂದಿಗೆ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

ಎಂದಿನಂತೆ ಬುಧವಾರವೂ ಬೆಳಗ್ಗೆ 8 ಗಂಟೆಗೆ ನಿಶಾ ದಹಿಯಾ ಸುಶೀಲ್ ಕುಮಾರ್ ಟ್ರೈನಿಂಗ್ ಅಕಾಡೆಮಿಗೆ ತರಬೇತಿಗೆ ಹೋಗಿದ್ದಳು. ಮಧ್ಯಾಹ್ನ 1 ಗಂಟೆಗೆ ಅಲ್ಲಿಂದ ವಾಪಾಸ್ ಬಂದಳು. ಬಳಿಕ ಮತ್ತೆ ಅಲ್ಲಿಗೆ ಹೋದಳು. ಅದಾಗಿ ಅರ್ಧ ಗಂಟೆಯಲ್ಲಿ ಆಕೆಯ ಕೋಚ್ ಪವನ್ ನಿಶಾಳ ತಮ್ಮ ಸೂರಜ್​ಗೆ ಫೋನ್ ಮಾಡಿ ನಿನ್ನ ಅಕ್ಕನಿಗೆ ಹುಷಾರಿಲ್ಲ, ಬಂದು ಕರೆದುಕೊಂಡು ಹೋಗು ಎಂದು ಹೇಳಿದ್ದ. ಹೀಗಾಗಿ, ಸೂರಜ್ ಮತ್ತು ಆತನ ತಾಯಿ ನಿಶಾಳನ್ನು ಮನೆಗೆ ಕರೆದುಕೊಂಡು ಬರಲು ಅಕಾಡೆಮಿಗೆ ಹೋಗಿದ್ದರು. ಆಗ ಪವನ್ ಹಾಗೂ ಆತನ ಒಂದಿಬ್ಬರು ಗೆಳೆಯರು ನಿಶಾಳಿಗೆ ಶೂಟ್ ಮಾಡಿ ಸೂರಜ್​ಗೆ ಕೂಡ ಗುಂಡು ಹಾರಿಸಿ ಕೊಲೆ ಮಾಡಿದ್ದರು. ಅದನ್ನು ತಡೆಯಲು ಬಂದ ನಿಶಾಳ ತಾಯಿಗೂ ಗುಂಡೇಟಿನಿಂದ ಪೆಟ್ಟಾಗಿತ್ತು. ತನ್ನ ಮೇಲಾಗುತ್ತಿರುವ ಕಿರುಕುಳವನ್ನು ಎಲ್ಲರಿಗೂ ಹೇಳಿದ್ದಾಳೆಂಬ ಕೋಪದಿಂದ ಪವನ್ ನಿಶಾಳನ್ನು ಕೊಲೆ ಮಾಡಿದ್ದ. ಆತನಿಗೆ ಆತನ ಹೆಂಡತಿ ಕೂಡ ಸಹಾಯ ಮಾಡಿದ್ದಳು.

ನಿಶಾ ದಹಿಯಾಳಿಗೆ ಗುಂಡು ಹಾರಿಸಿ, ಕೊಲೆ ಮಾಡಲಾಗಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಎಲ್ಲರೂ ಅದು ರಾಷ್ಟ್ರೀಯ ಮಟ್ಟದ ಕಂಚಿನ ಪದಕ ವಿಜೇತೆ ನಿಶಾ ದಹಿಯಾ ಎಂದುಕೊಂಡು ಸುಶೀಲ್ ಕುಮಾರ್ ಅಕಾಡೆಮಿಗೆ ಬೆಂಕಿ ಹಚ್ಚಿ ಗಲಾಟೆಯೆಬ್ಬಿಸಿದ್ದರು. ಪವನ್ ಹಾಗೂ ಸುಶೀಲ್ ಕುಮಾರ್ ಒಟ್ಟಿಗೇ ಇರುವ ಹಲವು ಫೋಟೋಗಳು ಅಕಾಡೆಮಿಯ ಗೋಡೆಯಲ್ಲಿವೆ. ಈ ಘಟನೆಯ ಬಳಿಕ ನಿಶಾ ದಹಿಯಾ ತಾನು ಸುರಕ್ಷಿತವಾಗಿ ಗೂಂಡಾ ಜಿಲ್ಲೆಯಲ್ಲಿರುವುದಾಗಿ ಸ್ಪಷ್ಟನೆ ನೀಡಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಪವನ್, ಆತನ ಪತ್ನಿ ಸುಜಾತಾ, ಆತನ ಗೆಳೆಯ ಅಮಿತ್​ನನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳನ್ನು ಹಿಡಿಯಲು 4 ಪೊಲೀಸ್ ತಂಡಗಳನ್ನು ರಚಿಸಲಾಗಿದೆ.

ಇದನ್ನೂ ಓದಿ: Nisha Dahiya: ನನಗೆ ಯಾರೂ ಶೂಟ್ ಮಾಡಿಲ್ಲ, ಸುರಕ್ಷಿತವಾಗಿದ್ದೇನೆ; ರಾಷ್ಟ್ರಮಟ್ಟದ ಕುಸ್ತಿಪಟು ನಿಶಾ ದಹಿಯಾ ಸ್ಪಷ್ಟನೆ

Chhatrasal Stadium Murder Case ಕೊಲೆ ಪ್ರಕರಣದಲ್ಲಿ ಒಲಿಂಪಿಕ್ ಕುಸ್ತಿಪಟು ಸುಶೀಲ್ ಕುಮಾರ್‌ಗೆ ಜಾಮೀನು ನಿರಾಕರಣೆ

Follow us on

Related Stories

Most Read Stories

Click on your DTH Provider to Add TV9 Kannada