ಕೇರಳ: ನರಬಲಿ ಪ್ರಕರಣದ ಪ್ರಮುಖ ಆರೋಪಿ ಶಾಫಿ ವಿಕೃತ ಕಾಮಿ, ಕ್ರೌರ್ಯವೆಸಗಿ ಸಂತೋಷಪಡುತ್ತಿದ್ದ ಮನೋರೋಗಿ
ಪದ್ಮಾ ಅವರನ್ನು ಶಾಫಿ ಕತ್ತು ಹಿಸುಕಿ, ತಲೆ ಕಡಿದು 56 ತುಂಡುಗಳಾಗಿ ಕತ್ತರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನುಳಿದ ಅವಶೇಷಗಳನ್ನು ಬಕೆಟ್‌ನಲ್ಲಿ ಇರಿಸಲಾಗಿತ್ತು
ತಿರುವನಂತಪುರಂ: ಕೇರಳದಲ್ಲಿ (Kerala) ನಡೆದ ನರಬಲಿ (human sacrifice) ಪ್ರಕರಣದಲ್ಲಿ ಇಬ್ಬರು ಮಹಿಳೆಯರನ್ನು ಹತ್ಯೆಗೈದು ಮೃತದೇಹವನ್ನು ತುಂಡು ತುಂಡಾಗಿಸಿದ ಪ್ರಮುಖ ಆರೋಪಿ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಿದ್ದಿದೆ. ಈತ ಸಾಮಾಜಿಕ ಜಾಲತಾಣಗಳನ್ನು ಮಹಿಳೆಯರನ್ನು ಪುಸಲಾಯಿಸಿ ಹಂತಕ ದಂಪತಿಗಳ ಮನೆಗೆ ಕರೆತರುತ್ತಿದ್ದ ಎಂದು ಹೇಳಲಾಗಿದ. ಅರ್ಧದಲ್ಲೇ ಶಾಲಾ ಶಿಕ್ಷಣ ಕೈಬಿಟ್ಟಿದ್ದ ಮುಹಮ್ಮದ್ ಶಾಫಿ (52) (Muhammad Shafi)ಇಬ್ಬರು ಮಹಿಳೆಯರನ್ನು ಮಸಾಜ್ ಥೆರಪಿಸ್ಟ್ ದಂಪತಿಗಳಾದ ಭಗವಲ್ ಸಿಂಗ್ ಮತ್ತು ಅವರ ಪತ್ನಿ ಲೈಲಾ ಅವರಿಗೆ ಸರಬರಾಜು ಮಾಡಿದ “ಏಜೆಂಟ್”. 2020ರಲ್ಲಿ 75ರ ಹರೆಯದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಶಾಫಿ ಜಾಮೀನಿನ ಮೇಲೆ ಹೊರಗಿದ್ದ. ಶಾಫಿ, ಈಗ ಹತ್ಯೆಯಾಗಿರುವ ರೋಸ್ಲಿನ್ ಮತ್ತು ಪದ್ಮಾ ಅವರನ್ನು ಫೇಸ್‌ಬುಕ್‌ನಲ್ಲಿ ಕಂಡು ಅವರನ್ನು ಪತ್ತನಂತಿಟ್ಟದಲ್ಲಿರುವ ದಂಪತಿಗಳ ಮನೆಗೆ ಕರೆದುಕೊಂಡುಬಂದಿದ್ದ. ಈ ಹಿಂದೆಯೂ ಇತರ ಮಹಿಳೆಯರೊಂದಿಗೆ ಈ ಕೃತ್ಯ ಎಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ಶಾಫಿ ಪೋರ್ನ್ ಚಿತ್ರದಲ್ಲಿ ನಟಿಸಲು ಮಹಿಳೆಯರಿಗೆ ಹಣದ ಆಮಿಷವೊಡ್ಡಿದ್ದ ಎನ್ನಲಾಗಿದೆ. ಭಗವಲ್ ಸಿಂಗ್ ಮತ್ತು ಲೈಲಾ ಅವರ ಆರ್ಥಿಕ ತೊಂದರೆಗಳನ್ನು ಕೊನೆಗೊಳಿಸಲು ನರಬಲಿ ನೀಡಬೇಕು ಎಂದು ಸಲಹೆ ನೀಡಿದ್ದು ಕೂಡಾ ಈತನೇ.
ಜೂನ್‌ನಲ್ಲಿ ರೋಸ್ಲಿನ್ ಮತ್ತು ಸೆಪ್ಟೆಂಬರ್‌ನಲ್ಲಿ ಪದ್ಮಾ ನಾಪತ್ತೆಯಾಗಿದ್ದಾರೆ. ಅವರಿಬ್ಬರೂ ಎರ್ನಾಕುಲಂನಲ್ಲಿ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದರು. ಪದ್ಮಾ ಅವರನ್ನು ಶಾಫಿ ಕತ್ತು ಹಿಸುಕಿ, ತಲೆ ಕಡಿದು 56 ತುಂಡುಗಳಾಗಿ ಕತ್ತರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನುಳಿದ ಅವಶೇಷಗಳನ್ನು ಬಕೆಟ್‌ನಲ್ಲಿ ಇರಿಸಲಾಗಿತ್ತು.ರೋಸ್ಲಿನ್ ಅನ್ನು ಲೈಲಾ ಕತ್ತು ಹಿಸುಕಿದ್ದು ಆಕೆಯ ಸ್ತನಗಳನ್ನು ಕತ್ತರಿಸಲಾಯಿತು.
#WATCH: 'Human sacrifice' in Kerala | All three accused being brought out of Ernakulam District Sessions Court. All of them have been remanded to judicial custody till October 26.
The three accused had allegedly killed two women as 'human sacrifices' pic.twitter.com/UI6SDvbDCC
— ANI (@ANI) October 12, 2022
ಶಾಫಿ ಮಹಿಳೆಯರ ಮೇಲೆ ಲೈಂಗಿಕ ವಿಕೃತ ಕೃತ್ಯ ಎಸಗಿದ್ದು, ನರಬಲಿ ಮತ್ತು ನರಭಕ್ಷಣೆಗಾಗಿ ಮಹಿಳೆಯರನ್ನು ಗ್ರಾಹಕರಿಗೆ ಪೂರೈಸುತ್ತಿದ್ದರು ಎಂದು ಕೊಚ್ಚಿ ಪೊಲೀಸ್ ಮುಖ್ಯಸ್ಥ ಸಿ.ಎಚ್.ನಾಗರಾಜು ತಿಳಿಸಿದ್ದಾರೆ. ಮಹಿಳೆಯೊಬ್ಬರಿಗೆ ಚಾಕುವಿನಿಂದ ಚಿತ್ರಹಿಂಸೆ ನೀಡಿರುವುದು ತನಿಖೆಯಿಂದ ತಿಳಿದು ಬಂದಿದೆ. ಮಾನವ ಮಾಂಸವನ್ನು ಸೇವಿಸಿದಂತಿದೆ ಎಂದು ನಾಗರಾಜು ಹೇಳಿದರು. ಶಾಫಿ “ಲೈಂಗಿಕ ವಿಕೃತಿಗೆ ವ್ಯಸನಿಯಾಗಿದ್ದ, ಕ್ರೌರ್ಯದಲ್ಲಿ ಸಂತೋಷಪಡುತ್ತಿದ್ದ ಮನೋರೋಗಿಯಾಗಿದ್ದ ಎಂದು ಅವರು ಹೇಳಿದ್ದಾರೆ. ಹೆಚ್ಚು ಆರೋಪಿಗಳು ಇದ್ದಾರೆಯೇ ಮತ್ತು ಅಂತಹ ಹೆಚ್ಚಿನ ಪ್ರಕರಣಗಳು ನಡೆದಿದೆಯೇ ಎಂಬುದರ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಪದ್ಮಾ ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾಗ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ. ಮಹಿಳೆಯರ ಫೋನ್ ವಿವರಗಳು ಶಾಫಿಯತ್ತ ಕರೆದೊಯ್ದಿತು. ಸೆಕ್ಯುರಿಟಿ ಫೂಟೇಜ್ ಮತ್ತು ಆತ ಬಿಟ್ಟು ಹೋಗಿದ್ದ ಸ್ಕಾರ್ಪಿಯೋ ಕಾರಿನ ಸಹಾಯದಿಂದ ಆತನನ್ನು ಪತ್ತೆ ಹಚ್ಚಲಾಯಿತು. ತನಿಖೆಯ ನಂತರ ಪೊಲೀಸರು ಪತ್ತನಂತಿಟ್ಟದ ಮನೆಗೆ ಕರೆದೊಯ್ದರು, ಅಲ್ಲಿ ದಂಪತಿಗಳು ತಪ್ಪೊಪ್ಪಿಕೊಂಡರು.
ವಯಸ್ಸಾದ ಮಹಿಳೆಯ ಮೇಲೆ ಅತ್ಯಾಚಾರ ಮಾಡಲು ಶಾಫಿ ಯತ್ನಿಸಿದ ಆರೋಪವನ್ನು ಸಹ ಪೊಲೀಸ್ ಆಯುಕ್ತರು ಉಲ್ಲೇಖಿಸಿದ್ದಾರೆ. ಆಕೆಯ ಮೇಲೆಯೂ ಈತ ವಿಕೃತ ಕಾಮವೆಸಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
Published On - 7:24 pm, Wed, 12 October 22