ಸುಳ್ಳು ಹೇಳಿ ಹಿಂದೂ ಯುವತಿಯನ್ನ ಮದುವೆಯಾದ ಮುಸ್ಲಿಂ ಯುವಕ ನಿಧಿಗಾಗಿ ಮಗನನ್ನೇ ಕೊಲ್ಲಲು ಮುಂದಾದ

| Updated By: ವಿವೇಕ ಬಿರಾದಾರ

Updated on: Oct 29, 2024 | 12:03 PM

ಬೆಂಗಳೂರಿನಲ್ಲಿ, ತನ್ನ ಪತಿ ಸದ್ದಾಂ ಹುಸೇನ್ ಅಲಿಯಾಸ್ ಈಶ್ವರ್ ತಮ್ಮ ಮಗುವನ್ನು ನಿಧಿಗಾಗಿ ಬಲಿ ಕೊಡಲು ಯತ್ನಿಸಿದ್ದಾನೆ ಎಂದು ಪತ್ನಿ ವನಜಾಕ್ಷಿ ಆರೋಪಿಸಿದ್ದಾರೆ. ವಿವಾಹದ ನಂತರ ಸದ್ದಾಂ ಹುಸೇನ್​ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವಂತೆ ಕಿರುಕುಳ ನೀಡಿದ್ದಾನೆ ಎಂದು ವನಜಾಕ್ಷಿ ಬೆಂಗಳೂರು ನಗರ ಪೊಲೀಸ್​ ಆಯುಕ್ತರಿಗೆ ದೂರು ನೀಡಿದ್ದಾಳೆ.

ಸುಳ್ಳು ಹೇಳಿ ಹಿಂದೂ ಯುವತಿಯನ್ನ ಮದುವೆಯಾದ ಮುಸ್ಲಿಂ ಯುವಕ ನಿಧಿಗಾಗಿ ಮಗನನ್ನೇ ಕೊಲ್ಲಲು ಮುಂದಾದ
ಸದ್ದಾಂ ಹುಸೇನ್ ಅಲಿಯಾಸ್ ಈಶ್ವರ್
Follow us on

ಬೆಂಗಳೂರು, ಅಕ್ಟೋಬರ್​ 29: ನಿಧಿಗಾಗಿ (Wealth Gain) ಹೆತ್ತ ಮಗುವನ್ನು (Child) ಕೊಲ್ಲಲು ಮುಂದಾದ ಪತಿಯ ವಿರುದ್ಧ ಪತ್ನಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ (Bangalore City Police Commissioner) ದೂರು ನೀಡಿದ್ದಾರೆ. ​ಸದ್ದಾಂ ಹುಸೇನ್ ಅಲಿಯಾಸ್​ ಈಶ್ವರ್​ ಹೆತ್ತ ಮಗನನ್ನೇ ಕೊಲೆ ಮಾಡಲು ಮುಂದಾಗಿದ್ದನು. ಪತಿ ಸದ್ದಾಂ ಹುಸೇನ್​ ಅಲಿಯಾಸ್​ ಈಶ್ವರ್​​ ತನಗೆ ಕಿರುಕುಳ, ಜೀವ ಬೆದರಿಕೆ ಮತ್ತು ಮತಾಂತರಕ್ಕೆ ಯತ್ನಿಸಿದ್ದಾನೆ ಎಂದು ಪತ್ನಿ ವನಜಾಕ್ಷಿ ಎಂಬುವರು ದೂರು ನೀಡಿದ್ದಾರೆ. ಪತಿಯ ಸದ್ದಾಂ ಹುಸೇನ್​​ ಅಲಿಯಾಸ್​ ಈಶ್ವರ್​ ವಿರುದ್ಧ ಕೆಆರ್​ ಪುರಂ ಠಾಣೆ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂದು ವನಜಾಕ್ಷಿ ಆರೋಪಿಸಿದ್ದಾರೆ.

“ನಾನು (ವನಜಾಕ್ಷಿ) 2020 ರಲ್ಲಿ ಬ್ಲೂಡಾರ್ಟ್‌ನಲ್ಲಿ ಉದ್ಯೋಗಿಯಾಗಿದ್ದಾಗ ಸದ್ದಾಂ ಹುಸೇನ್​​ ಅಲಿಯಾಸ್​ ಈಶ್ವರ್ ಪರಿಚಯವಾಗಿದ್ದಾನೆ. ಈ ವೇಳೆ ಸದ್ದಾಂ ಹುಸೇನ್​​ ಅಲಿಯಾಸ್​ ಈಶ್ವರ್ ಪ್ರೀತಿ ಪ್ರೀತಿ ಮಾಡು, ನಾನು ನಿನ್ನನ್ನು ಮದುವೆ ಆಗುತ್ತೇನೆ ಎಂದು ಹಿಂದೆ ಬಿದಿದ್ದನು. ಬಳಿಕ, ನಾವಿಬ್ಬರು ಹಿಂದೂ ಸಂಪ್ರದಾಯದಂತೆ ವಿವಾಹವಾದೇವು. ನಂತರ, ನವೆಂಬರ್ 2020ರಲ್ಲಿ ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗುವಂತೆ ಸದ್ದಾಂ ಹುಸೇನ್​​ ಅಲಿಯಾಸ್​ ಈಶ್ವರ್ ಒತ್ತಾಯಿಸಿದನು.”

“ಬಳಿಕ, ಸದ್ದಾಂ ಹುಸೇನ್​​ ಅಲಿಯಾಸ್​ ಈಶ್ವರ್ ನನ್ನನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದನು. ಅಲ್ಲಿ ಸದ್ದಾಂ ಹುಸೇನ್​​ ಅಲಿಯಾಸ್​ ಈಶ್ವರ್ ಮತ್ತು ಆತನ ಸಹಚರನಾದ ನಯಾಜ್‌, ಇಸ್ಲಾಂ ಧರ್ಮಕ್ಕೆ ಮತಾಂತರವಾಗವಂತೆ ನನಗೆ ಒತ್ತಾಯಿಸಿದರು. ಅಲ್ಲಿ ನನಗೆ ಸಾದಿಯಾ ಕೌಸರ್ ಎಂದು ಮರುನಾಮಕರಣ ಮಾಡಿದರು. ಮುಸ್ಲಿಂ ವಿವಾಹ ಪ್ರಮಾಣಪತ್ರಕ್ಕೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಹಾಕುವಂತೆ ಅವರು ನನಗೆ ಒತ್ತಡ ಹೇರಿದರು.”

“ಇದಾದ ಬಳಿಕ ನಾನು ಗರ್ಭವತಿಯಾದೆ. ಗರ್ಭಿಣಿಯಾದ ನನ್ನ ಮೇಲೆ ಸದ್ದಾಂ ಹುಸೇನ್​​ ಅಲಿಯಾಸ್​ ಈಶ್ವರ್ ನಿರಂತರವಾಗಿ ಹಲ್ಲೆ ಮಾಡಿದನು. ಅಲ್ಲದೇ ನನ್ನ ತಾಯಿಗೂ ಜೀವ ಬೆದರಿಕ ಹಾಕಿದನು. 2021ರ ಜುಲೈ 15 ನಾನು ಗಂಡು ಮಗುವಿಗೆ ಜನ್ಮ ನೀಡಿದೆ. ಮಗನಿಗೆ ಕರಣ್ ರಾಜ್ ಎಂದು ನಾಮಕರಣ ಮಾಡಿದೆ.”

“ಬಳಿಕ, ಸದ್ದಾಂ ಹುಸೇನ್​​ ಅಲಿಯಾಸ್​ ಈಶ್ವರ್ ನಿಧಿಗಾಗಿ “ಕುಟ್ಟಿ ಪೂಜೆ” ಎಂಬ ಮಾಟಮಂತ್ರ ಮಾಡಲು ತಯಾರಿ ನಡೆಸಿದನು. ಈ ಮಾಟಮಂತ್ರಕ್ಕೆ ಮಗನನ್ನು ಬಲಿಕೊಡುವುದಾಗಿ ಹೇಳಿದನು. ಸದ್ದಾಂ ಹುಸೇನ್​​ ಅಲಿಯಾಸ್​ ಈಶ್ವರ್ ಮಾಟಮಂತ್ರ ಮಾಡುವುದನ್ನು ಕಲಿತಿದ್ದು, ಕೇರಳದವರ ಜೊತೆಗೂಡಿ ಮಾಟಮಂತ್ರ ಮಾಡುತ್ತಿದ್ದನು. ಅಲ್ಲದೇ, ಸದ್ದಾಂ ಹುಸೇನ್​​ ಅಲಿಯಾಸ್​ ಈಶ್ವರ್ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನನ್ನ ತಾಯಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು.”

ಇದನ್ನೂ ಓದಿ: ಬೆಂಗಳೂರಿನಲ್ಲಿ 2ನೇ ಪತ್ನಿಯೊಂದಿಗೆ ಅಕ್ರಮವಾಗಿ ವಾಸವಿದ್ದ ಬಾಂಗ್ಲಾದೇಶ ಪ್ರಜೆಯ ಬಂಧನ

“ಬಳಿಕ, ಇದೇ ವರ್ಷ ಅಕ್ಟೋಬರ್​ 13 ರಂದು ಸದ್ದಾಂ ಹುಸೇನ್​​ ಅಲಿಯಾಸ್​ ಈಶ್ವರ್ ಮತ್ತು ಆತನ ಸಹಚರನಾದ ನಯಾಜ್‌ ತುಮಕೂರಿನ ನನ್ನ ನಿವಾಸದ ಬಳಿ ಬಂದು, ನನ್ನ ಮಗನನ್ನು ಅಪಹರಿಸಲು ಯತ್ನಿಸಿದರು. ಆದರೆ, ಪಕ್ಕದಲ್ಲಿದ್ದ ಮನೆಯವರ ಸಹಾಯದಿಂದ ನಾನು ಮತ್ತು ನನ್ನ ಮಗ ತಪ್ಪಿಸಿಕೊಂಡಿದ್ದೇವೆ. ಈ ಘಟನೆಯ ನಂತರ ನಾನು ಭಯಗೊಂಡು, ತಲೆಮರಿಸಿಕೊಂಡಿದ್ದೇನೆ.”

“ಈ ಬಗ್ಗೆ ಕೆಆರ್ ಪುರಂ ಠಾಣೆಗೆ ದೂರು ನೀಡಿದರೂ ಪೊಲೀಸರು ನನ್ನ ದೂರನ್ನು ಸ್ವೀಕರಿಸಿಲ್ಲ. ಆದ್ದರಿಂದ, ಕೂಡಲೇ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿ ಸದ್ದಾಂ ಹುಸೇನ್​​ ಅಲಿಯಾಸ್​ ಈಶ್ವರ್ ಮತ್ತು ಆತನ ಸಹಚರನಾದ ನಯಾಜ್‌ ವಿರುದ್ಧ ಕ್ರಮ ಕೈಗೊಳ್ಳಬೇಕು. ನನ್ನ ಕುಟುಂಬಕ್ಕೆ ಪೊಲೀಸ್​ ರಕ್ಷಣೆ ನೀಡಬೇಕು.ನಮಗೆ ಯಾವುದೇ ಹಾನಿಯುಂಟಾದರೆ, ಅದಕ್ಕೆ ಸದ್ದಾಂ ಹುಸೇನ್​​ ಅಲಿಯಾಸ್​ ಈಶ್ವರ್ ಕಾರಣನಾಗಿರುತ್ತಾನೆ” ಎಂದು ವನಜಾಕ್ಷಿ ದೂರು ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ