ನಡತೆ ಸರಿಯಿಲ್ಲವೆಂದು ಪತ್ನಿಗೆ 30 ಬಾರಿ ಚಾಕುವಿನಿಂದ ಇರಿದ ಭೂಪ

ಕೊಡಗು: ನಡತೆ ಸರಿಯಿಲ್ಲವೆಂದು ಅನುಮಾನಿಸಿ ಪತ್ನಿಗೆ 30 ಬಾರಿ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಮಡಿಕೇರಿಯ ಹೊಸಬಡಾವಣೆಯಲ್ಲಿ ನಡೆದಿದೆ. ಪತ್ನಿ ಜುಬೈದಾ(25) ಕೊಲೆಯಾದ ಮಹಿಳೆ. 7 ವರ್ಷಗಳ ಹಿಂದೆ ಜುಬೈದಾ, ಷರೀಫ್​ ವಿವಾಹವಾಗಿದ್ದರು. ಶರೀಫ್ ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಆದ್ರೆ, ಇತ್ತೀಚೆಗೆ ಪತ್ನಿಯ ನಡತೆ ಸರಿಯಿಲ್ಲ ಎಂದು ಪದೇ ಪದೆ ಜಗಳವಾಡುತ್ತಿದ್ದ. ತಡರಾತ್ರಿ ಜಗಳ ತಾರಕಕ್ಕೇರಿ ಪತ್ನಿಗೆ 30ಕ್ಕೂ ಅಧಿಕ ಕಡೆ ಮನಬಂದಂತೆ ಇರಿದು ಹತ್ಯೆ ಮಾಡಿದ್ದಾನೆ. ಮಡಿಕೇರಿ ನಗರ ಪೊಲೀಸ್​ […]

ನಡತೆ ಸರಿಯಿಲ್ಲವೆಂದು ಪತ್ನಿಗೆ 30 ಬಾರಿ ಚಾಕುವಿನಿಂದ ಇರಿದ ಭೂಪ
ಸಾಧು ಶ್ರೀನಾಥ್​

Updated on: Nov 04, 2019 | 2:31 PM

ಕೊಡಗು: ನಡತೆ ಸರಿಯಿಲ್ಲವೆಂದು ಅನುಮಾನಿಸಿ ಪತ್ನಿಗೆ 30 ಬಾರಿ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಮಡಿಕೇರಿಯ ಹೊಸಬಡಾವಣೆಯಲ್ಲಿ ನಡೆದಿದೆ.

ಪತ್ನಿ ಜುಬೈದಾ(25) ಕೊಲೆಯಾದ ಮಹಿಳೆ. 7 ವರ್ಷಗಳ ಹಿಂದೆ ಜುಬೈದಾ, ಷರೀಫ್​ ವಿವಾಹವಾಗಿದ್ದರು. ಶರೀಫ್ ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಆದ್ರೆ, ಇತ್ತೀಚೆಗೆ ಪತ್ನಿಯ ನಡತೆ ಸರಿಯಿಲ್ಲ ಎಂದು ಪದೇ ಪದೆ ಜಗಳವಾಡುತ್ತಿದ್ದ. ತಡರಾತ್ರಿ ಜಗಳ ತಾರಕಕ್ಕೇರಿ ಪತ್ನಿಗೆ 30ಕ್ಕೂ ಅಧಿಕ ಕಡೆ ಮನಬಂದಂತೆ ಇರಿದು ಹತ್ಯೆ ಮಾಡಿದ್ದಾನೆ.

ಮಡಿಕೇರಿ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಶರೀಫ್​ನನ್ನು ವಶಕ್ಕೆ ಪಡೆದು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Published On - 11:54 am, Sun, 3 November 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us