ಹಂತಕನಾದ ಸೋಮಾರಿ, ದುಡಿಯಲು ಹೋಗು ಅಂದಿದ್ದಕ್ಕೆ ಪ್ರಾಣಿಯಂತೆ ಪತ್ನಿಯ ಕತ್ತು ಕತ್ತರಿಸಿ, ಸೀರೆಯಿಂದ ತಾನೂ ಆತ್ಮಹತ್ಯೆಗೆ ಶರಣಾದ

ಹುಬ್ಬಳ್ಳಿ ನಗರದ ಕಟುಕರ ಓಣಿಯಲ್ಲಿ ದುಡಿಯಲು ಹೋಗು ಅಂದಿದ್ದಕ್ಕೆ ಪ್ರಾಣಿಯಂತೆ ಪತ್ನಿಯ ಕತ್ತು ಕತ್ತರಿಸಿ ಗಂಡ, ಸೀರೆಯಿಂದ ತಾನೂ ಆತ್ಮಹತ್ಯೆಗೆ ಶರಣಾದ. ಗಂಡ ಮಲಿಕ್​ಗೆ ಇದು ಮೊದಲನೇ ಮದುವೆಯಾಗಿದ್ದರೆ, ಪತ್ನಿ ಸಾಹಿಕ್ತಾಳಿಗೆ ಇದು ಎರಡನೇ ಮದುವೆಯಂತೆ.

ಹಂತಕನಾದ ಸೋಮಾರಿ, ದುಡಿಯಲು ಹೋಗು ಅಂದಿದ್ದಕ್ಕೆ ಪ್ರಾಣಿಯಂತೆ ಪತ್ನಿಯ ಕತ್ತು ಕತ್ತರಿಸಿ, ಸೀರೆಯಿಂದ ತಾನೂ ಆತ್ಮಹತ್ಯೆಗೆ ಶರಣಾದ
ಪ್ರಾಣಿಯಂತೆ ಪತ್ನಿಯ ಕತ್ತು ಕತ್ತರಿಸಿ, ಸೀರೆಯಿಂದ ತಾನೂ ಆತ್ಮಹತ್ಯೆಗೆ ಶರಣಾದ
Edited By: ಸಾಧು ಶ್ರೀನಾಥ್​

Updated on: Dec 09, 2023 | 10:10 AM

ಆತನಿಗೆ (husband) ಅದು ಮೊದಲನೇ ಮದುವೆ. ಆದರೆ ಆಕೆಗೆ ಅದು ಎರಡನೇ ಮದುವೆ. ಇಬ್ಬರದ್ದೂ ಸುಂದರ ಜೋಡಿ. ಆದರೆ ಪತಿ ಮಾತ್ರ ಪರಮ ಸೋಮಾರಿ. ಯಾವತ್ತೂ ಮನೆಯಲ್ಲಿಯೇ ಕೂತು ಕಾಲಹರಣ ಮಾಡುತ್ತಿದ್ದ. ಇದರಿಂದಾಗಿ ಪತ್ನಿ ( wife) ಬೇಸತ್ತು ಹೋಗಿದ್ದಳು. ಬದುಕು ನಡೆಸಲಿಕ್ಕಾದರೂ ದುಡಿಮೆ ಬೇಕಲ್ಲವೇ? ದುಡಿಯಲು ಹೋಗು ಅಂತಾ ಪತ್ನಿ ಹೇಳಿದ್ದೇ ಮುಳುವಾಗಿ ಹೋಯಿತು. ಅಷ್ಟಕ್ಕೂ ಪತ್ನಿಯ ತಿಳಿವಳಿಕೆಯಿಂದ ನಡೆದ ಅನಾಹುತವಾದರೂ (murder) ಏನು? ಇಲ್ಲಿದೆ ನೋಡಿ. ವಿಭಿನ್ನ ಬಗೆಯಲ್ಲಿ ಹೀಗೆ ಪೋಸ್ ನೀಡುತ್ತಿರೋ ಈ ಜೋಡಿಯ ಹೆಸರು ಮಲಿಕ್-ಸಾಹಿಕ್ತಾ. ನೋಡಲು ಇಷ್ಟು ಖುಷಿ ಖುಷಿಯಾಗಿದ್ದರೂ ಬದುಕಿನಲ್ಲಿ ಇಬ್ಬರೂ ಅಷ್ಟೊಂದು ಚೆನ್ನಾಗಿರಲಿಲ್ಲ ಅನ್ನೋದು ಇತ್ತಿಚಿಗಷ್ಟೇ ಗೊತ್ತಾಗಿತ್ತು. ಹುಬ್ಬಳ್ಳಿ (Hubballi) ನಗರದ ಕಟುಕರ ಓಣಿಯ ಇವರದ್ದು ಕಳೆದ ವರ್ಷವಷ್ಟೇ ಇವರ ಮದುವೆಯಾಗಿತ್ತು.

ಮಲಿಕ್​ಗೆ ಇದು ಮೊದಲನೇ ಮದುವೆಯಾಗಿದ್ದರೆ, ಸಾಹಿಕ್ತಾಳಿಗೆ ಅದು ಎರಡನೇ ಮದುವೆಯಂತೆ. ಇದಕ್ಕೆ ಕಾರಣ ಸಾಹಿಕ್ತಾಳ ಮೊದಲನೇ ಪತಿ ಮೃತಪಟ್ಟಿದ್ದು. ಅದಾಗಲೇ ಎರಡು ಮಕ್ಕಳಿರೋ ಸಾಹಿಕ್ತಾಳನ್ನು ಮಲಿಕ್ ಮೊದಲಿನಿಂದಲೂ ಇಷ್ಟಪಡುತ್ತಿದ್ದನಂತೆ. ಸಾಹಿಕ್ತಾಳ ಪತಿ ತೀರಿಕೊಂಡ ಬಳಿಕ ತನ್ನ ಮನಸ್ಸಿನಲ್ಲಿ ಆಸೆಯನ್ನು ಹೇಳಿಕೊಂಡಿದ್ದಕ್ಕೆ ಎಲ್ಲರೂ ಸೇರಿ ಈ ಮದುವೆ ಮಾಡಿದ್ದಾರೆ.

ಆರಂಭದಲ್ಲಿ ಇಬ್ಬರೂ ಚೆನ್ನಾಗಿಯೇ ಇದ್ದರು. ಮಲಿಕ್ ಹಾಗೂ ಆತನ ಅಣ್ಣ ಒಂದೇ ಮನೆಯಲ್ಲಿ ವಾಸವಾಗಿದ್ದರು. ಅಣ್ಣನಿಗೂ ಎರಡು ಮಕ್ಕಳು. ಹೀಗಾಗಿ ಕುಟುಂಬವನ್ನು ನಿರ್ವಹಿಸೋದು ತುಂಬಾನೇ ಕಷ್ಟಕರವಾಗಿತ್ತು. ಅಲ್ಲದೇ ಮಲಿಕ್ ಆರಂಭದಲ್ಲಿ ಮನೆ ನಿರ್ಮಾಣ ಕೆಲಸ ಮಾಡುತ್ತಿದ್ದ. ಇತ್ತೀಚಿನ ದಿನಗಳಲ್ಲಿ ಮಾಂಸದಂಗಡಿಯಲ್ಲಿ ಕೆಲಸ ಮಾಡುತ್ತಿದ್ದ.

ಇತ್ತೀಚಿನ ದಿನಗಳಲ್ಲಿ ಪತಿ-ಪತ್ನಿಗೆ ನಿತ್ಯ ಜಗಳ ಶುರುವಾಗಿತ್ತು. ಏಕೆಂದರೆ ಮಲಿಕ್ ಅದೆಂಥ ಸೋಮಾರಿಯಾಗಿಬಿಟ್ಟನೆಂದರೆ ಮನೆ ಬಿಟ್ಟು ಹೊರಗೆ ಹೋಗುತ್ತಲೇ ಇರಲಿಲ್ಲ. ಇದರಿಂದಾಗಿ ಆದಾಯವೆಲ್ಲ ನಿಂತು ಎಲ್ಲರೂ ಸಂಕಷ್ಟಕ್ಕೆ ಸಿಲುಕುವಂತಾಗಿತ್ತು. ಹೀಗಾಗಿ ಅದೆಷ್ಟು ದಿನಾ ಅಂತಾ ಹೀಗೆಯೇ ಕಾಲ ಕಳೀತೀರಿ ಅಂತಾ ಆಗಾಗ ಪತ್ನಿ ಸಾಹಿಕ್ತಾ ಪತಿಗೆ ಕೇಳುತ್ತಲೇ ಇದ್ದಳು. ಆಕೆಯ ಪ್ರಶ್ನೆಯೇ ಪತಿ ಮಲಿಕ್ ಗೆ ಸಿಟ್ಟು ಬರುವಂತೆ ಮಾಡುತ್ತಿತ್ತಂತೆ.

ನಿನ್ನೆ ಶುಕ್ರವಾರವೂ ಅದೇ ಆಗಿದೆ. ಬೆಳಿಗ್ಗೆ ಹತ್ತು ಗಂಟೆ ಹೊತ್ತಿಗೆ ಕೆಲಸಕ್ಕೆ ಹೋಗುವಂತೆ ಹಾಗೂ ದುಡಿದು ತರುವಂತೆ ಸಾಹಿಕ್ತಾ ಪತಿ ಮಲಿಕ್ ಗೆ ಹೇಳಿದ್ದಾಳೆ. ಇಬ್ಬರ ನಡುವೆ ಜಗಳವಾಗಿದೆ. ಅಣ್ಣನ ಕುಟುಂಬ ಕೆಳಗಡೆ ಮನೆಯಲ್ಲಿ ವಾಸಿಸುತ್ತಿದ್ದರೆ ಮಲಿಕ್ ಮೇಲಿನ ಮನೆಯಲ್ಲಿ ವಾಸಿಸುತ್ತಿದ್ದ. ಕೆಳಗಿನ ಮನೆಯಲ್ಲಿ ಜಗಳ ಹೆಚ್ಚಾಗುತ್ತಿದ್ದಂತೆಯೇ ಮಲಿಕ್ ಸಾಹಿಕ್ತಾಳನ್ನು ಮೇಲೆ ಕರೆದೊಯ್ದಿದ್ದಾನೆ.

Also Read: ಕಲಬುರಗಿ -ಆಡಳಿತ ಮಂಡಳಿ ಕಿರುಕುಳಕ್ಕೆ ಬೇಸತ್ತು ಎಎಸಿ ಸಿಮೆಂಟ್​ ಕಾರ್ಖಾನೆ ಡೆಪ್ಯುಟಿ ಮ್ಯಾನೇಜರ್​ ಆತ್ಮಹತ್ಯೆ

ಅಲ್ಲಿಗೆ ಜಗಳ ನಿಂತಿದೆ. ಇಬ್ಬರ ಮಧ್ಯೆ ಜಗಳ ನಿಂತಿದೆ ಅಂತಾ ಕೆಳಗಡೆ ಇದ್ದವರು ಸುಮ್ಮನಾಗಿದ್ದಾರೆ. ಎಷ್ಟೊತ್ತಾದರೂ ಮೇಲಿಂದ ಯಾವುದೇ ಸದ್ದೇ ಬಾರದೇ ಇದ್ದಾಗ ಮೇಲೆ ಹೋಗಿ ನೋಡಿದರೆ ಅಲ್ಲಿ ಭೀಕರ ದೃಶ್ಯ ಕಂಡು ಬಂದಿದೆ. ಮಲಿಕ್ ಪತ್ನಿಯನ್ನು ಅಕ್ಷರಶಃ ಪ್ರಾಣಿಯ ಕತ್ತನ್ನು ಕತ್ತರಿಸುವಂತೆ ಕೊಲೆಗೈದು ಆಕೆಯ ಸೀರೆಯಿಂದ ತಾನು ಕೂಡ ಪಕ್ಕದಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಘಟನೆ ಬಳಿಕ ಸ್ಥಳಕ್ಕೆ ಕಸಬಾ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕೇಸು ದಾಖಲಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಎರಡು ಮಕ್ಕಳಿರೋ ಮಹಿಳೆಯನ್ನು ಇಷ್ಟಪಟ್ಟು ಮದುವೆಯಾಗಿ, ಕೊನೆಗೆ ಈ ರೀತಿಯ ಅಂತ್ಯ ಕಂಡಿದ್ದು ದುರಂತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Narasimha Murti Pyati

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More
Follow Us