Crime News: ಉತ್ತರ ಪ್ರದೇಶದಲ್ಲಿ ಪತ್ನಿಯನ್ನು ಸುಟ್ಟು ಕೊಂದ ಪತಿಗೆ 10 ವರ್ಷ, ಪೋಷಕರಿಗೆ 7 ವರ್ಷ ಜೈಲು ಶಿಕ್ಷೆ

|

Updated on: Aug 02, 2024 | 5:31 PM

ತನ್ನ ಹೆಂಡತಿಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು ಸುಟ್ಟುಹಾಕಿದ ಗಂಡನಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಆತನಿಗೆ ಸಹಾಯ ಮಾಡಿದ ಆತನ ಪೋಷಕರಿಗೆ 7 ವರ್ಷ ಜೈಲು ಶಿಕ್ಷೆ ನೀಡಲಾಗಿದೆ. ಉತ್ತರ ಪ್ರದೇಶದಲ್ಲಿ 2018ರಲ್ಲಿ ಈ ದುರ್ಘಟನೆ ನಡೆದಿತ್ತು.

Crime News: ಉತ್ತರ ಪ್ರದೇಶದಲ್ಲಿ ಪತ್ನಿಯನ್ನು ಸುಟ್ಟು ಕೊಂದ ಪತಿಗೆ 10 ವರ್ಷ, ಪೋಷಕರಿಗೆ 7 ವರ್ಷ ಜೈಲು ಶಿಕ್ಷೆ
ಸಾಂದರ್ಭಿಕ ಚಿತ್ರ
Follow us on

ಬಲ್ಲಿಯಾ: ವಿವಾಹವಾದ 6 ವರ್ಷಗಳ ನಂತರ 2018ರಲ್ಲಿ ವರದಕ್ಷಿಣೆಗಾಗಿ ತನ್ನ ಹೆಂಡತಿಯನ್ನು ಕೊಂದ ಆರೋಪದ ಮೇಲೆ ಬಂಧಿತನಾಗಿದ್ದ ವ್ಯಕ್ತಿ ಹಾಗೂ ಆತನ ಪೋಷಕರಿಗೆ ಇದೀಗ ಶಿಕ್ಷೆ ಪ್ರಕಟವಾಗಿದೆ. ಮೃತ ಮಹಿಳೆಯ ಗಂಡ, ಅತ್ತೆ, ಮಾವ ಅಪರಾಧಿಗಳೆಂದು ಸಾಬೀತಾಗಿದ್ದು, ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಈ ಘಟನೆ ನಡೆದಿದೆ.

ಬಲ್ಲಿಯಾದ ಸ್ಥಳೀಯ ನ್ಯಾಯಾಲಯವು ಹೆಂಡತಿಯನ್ನು ಕೊಂದ ವ್ಯಕ್ತಿಯೊಬ್ಬನಿಗೆ 10 ವರ್ಷ ಜೈಲು ಶಿಕ್ಷೆ, ಅವನ ತಾಯಿ ಮತ್ತು ತಂದೆಗೆ 7 ವರ್ಷ ಶಿಕ್ಷೆ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಮಹಿಳೆಯ ಪತಿ ಧರ್ಮೇಂದ್ರ ವರ್ಮಾ, ಅವರ ತಂದೆ ಬೆಚನ್ ಪ್ರಸಾದ್ ವರ್ಮಾ ಮತ್ತು ಅವರ ತಾಯಿ ಮಂಜು ದೇವಿ ಅವರು ಕೊಲೆಯ ಸಂಚು ರೂಪಿಸಿ ಈ ಕೃತ್ಯ ಎಸಗಿದ್ದರು ಎಂದು ಸಾಕ್ಷಿಗಳ ಮೂಲಕ ಸಾಬೀತಾಗಿದೆ. ಹೀಗಾಗಿ, ಅವರನ್ನು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ರವಿಕಿರಣ್ ಸಿಂಗ್ ಅವರ ನ್ಯಾಯಾಲಯವು ತಪ್ಪಿತಸ್ಥರೆಂದು ಘೋಷಿಸಿದೆ.

ಇದನ್ನೂ ಓದಿ: Crime News: ಮದುವೆಯಾಗಲು ಒಪ್ಪದ ಯುವತಿಯ ಕತ್ತು ಸೀಳಿ, ಕೊಚ್ಚಿ ಕೊಂದ ಯುವಕ; ಮಹಾರಾಷ್ಟ್ರದಲ್ಲಿ ಭೀಕರ ಕೊಲೆ

ಜೈಲು ಶಿಕ್ಷೆಯ ಜೊತೆಗೆ, ಪ್ರತಿ ಅಪರಾಧಿಗೆ 3,000 ರೂಪಾಯಿ ದಂಡ ವಿಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ಪ್ರಕರಣವನ್ನು ಬಿಹಾರದ ಬಕ್ಸರ್ ಜಿಲ್ಲೆಯ ನಿವಾಸಿ ಕೃಷ್ಣ ಸಿಂಗ್ ಆರಂಭಿಸಿದ್ದು, ಅವರ ಪುತ್ರಿ ಶಶಿಕಲಾ ಅವರನ್ನು ಫೆಬ್ರವರಿ 2012ರಲ್ಲಿ ಕೊಪ್ವಾ ​​ಬಹದ್ದೂರ್‌ಪುರ ಗ್ರಾಮದ ಧರ್ಮೇಂದ್ರ ವರ್ಮಾ ಅವರೊಂದಿಗೆ ಮದುವೆ ಮಾಡಲಾಗಿತ್ತು.

2018ರ ಸೆಪ್ಟೆಂಬರ್ 13-14ರ ಮಧ್ಯರಾತ್ರಿ, ವರದಕ್ಷಿಣೆ ಬೇಡಿಕೆಯ ಆರೋಪದ ಮೇಲೆ ಶಶಿಕಲಾ ಅವರನ್ನು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲಾಗಿತ್ತು. ಅದಾದ 5 ದಿನಗಳ ನಂತರ ಈ ಘಟನೆಯ ಬಗ್ಗೆ ಆಕೆಯ ಕುಟುಂಬಕ್ಕೆ ತಿಳಿಸಲಾಯಿತು.

ಈ ಪ್ರಕರಣದಲ್ಲಿ ತನಿಖೆಯನ್ನು ಪೂರ್ಣಗೊಳಿಸಿದ ನಂತರ, ಪೊಲೀಸರು ಮೂವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದರು. ಇಂದು ಅವರ ಅಪರಾಧಕ್ಕೆ ಶಿಕ್ಷೆ ಪ್ರಕಟವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ