ಗಂಡನ ಮೇಲಿನ ಸಿಟ್ಟಿಗೆ ಸ್ನೇಹಿತನ ಜತೆ ಸೇರಿ ಸ್ವಂತ ಮಗನನ್ನೇ ಕಿಡ್ನ್ಯಾಪ್ ಮಾಡಿದ ತಾಯಿ
ಗಂಡನ ಮೇಲಿನ ಸಿಟ್ಟಿಗೆ ತನ್ನ ಸ್ವಂತ ಮಗನನ್ನು ತಾಯಿ ಕಿಡ್ನ್ಯಾಪ್ ಮಾಡಿರುವಂತಹ ಘಟನೆ ಬೆಂಗಳೂರು ಹೊರವಲಯದ ಕೆ.ಆರ್ ಪುರಂನಲ್ಲಿ ನಡೆದಿದೆ. ಮಗುವಿನ ತಾಯಿ ಮತ್ತು ಆತನ ಸ್ನೇಹಿತನಿಂದ ಕಿಡ್ನ್ಯಾಪ್ ಮಾಡಲಾಗಿದೆ ಎಂದು ತಂದೆ ಆರೋಪಿಸಿದ್ದಾರೆ. ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು, ಆಗಸ್ಟ್ 2: ತಾಯಿಯಿಂದಲೇ ಮಗುವನ್ನು ಕಿಡ್ನ್ಯಾಪ್ (kidnapped) ಮಾಡಿರುವಂತಹ ಘಟನೆ ಇಂದು ಬೆಂಗಳೂರು ಹೊರವಲಯದ ಕೆಆರ್ ಪುರಂನಲ್ಲಿ ನಡೆದಿದೆ. ಮಗುವಿನ ತಾಯಿ (mother) ಅನುಪಮ ಮತ್ತು ಆತನ ಸ್ನೇಹಿತನಿಂದ ಕೃತ್ಯವೆಸಗಲಾಗಿದೆ ಎಂದು ಮಗುವಿನ ತಂದೆ ಆರೋಪಿಸಿದ್ದಾರೆ. ಮಗುವನ್ನು ಕಿಡ್ನ್ಯಾಪ್ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2014ರಲ್ಲಿ ವಿವಾಹವಾಗಿದ್ದ ಅನುಪಮ ಹಾಗೂ ಸಿದ್ಧಾರ್ಥ್. ಬಳಿಕ ಇಬ್ಬರ ಮಧ್ಯೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ದೂರಾಗಿದ್ದರು. ಈ ಬಗ್ಗೆ ಕೋರ್ಟ್ನಲ್ಲಿ ಪ್ರಕರಣ ಇದೆ. ಕೋರ್ಟ್ ಆರುವರೆ ವರ್ಷದ ಮಗುವನ್ನು ಪತಿ ಸಿದ್ಧಾರ್ಥ್ಗೆ ನೀಡಿ ಆದೇಶಿಸಿತ್ತು.
ಇದನ್ನೂ ಓದ: ಮಾನಸಿಕ ಅಸ್ವಸ್ಥ ಮಗನಿಂದ ತಾಯಿ ಮೇಲೆ ಕೊಡಲಿಯಿಂದ ಹಲ್ಲೆ, ಆರೋಪಿ ಹಿಡಿಯಲು ಪೊಲೀಸರಿಂದ ಹರಸಾಹಸ
ಇಂದು ಬೆಳಿಗ್ಗೆ ಸಿದ್ಧಾರ್ಥ್ ತಂದೆ ಮಗುವನ್ನು ಶಾಲೆಗೆ ಬಿಡಲು ಅಪಾರ್ಟ್ಮೆಂಟ್ ಮುಂಭಾಗದಲ್ಲಿ ಶಾಲಾ ಬಸ್ಗೆ ಕಾಯುತ್ತಿದ್ದರು. ಈ ವೇಳೆ ತನ್ನ ಸ್ನೇಹಿತನೊಂದಿಗೆ ಬಂದ ತಾಯಿ ಅನುಪಮ ಸಿದ್ಧಾರ್ಥ್ ತಂದೆಯಿಂದ ಮಗುವನ್ನು ಕಿತ್ತುಕೊಂಡು ಹೋಗಿರುವುದು ವಿಡಿಯೋಡಲ್ಲಿ ಸೆರೆ ಆಗಿದೆ.
ಕೆಎಸ್ಆರ್ಟಿಸಿ ಬಸ್ ಡಿಕ್ಕಿ: ಬೈಕ್ನಲ್ಲಿದ್ದ ವಿದ್ಯಾರ್ಥಿ ಸಾವು
ಕೋಲಾರ: ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಬೈಕ್ನಲ್ಲಿದ್ದ ವಿದ್ಯಾರ್ಥಿ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಬಳಿ ನಡೆದಿದೆ. ತಮಟಂಪಲ್ಲಿ ಗ್ರಾಮದ ಭಾರ್ಗವ್ ರೆಡ್ಡಿ(18) ಸ್ಥಳದಲ್ಲೇ ದುರ್ಮರಣ. ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಲಾರಿ ಹರಿದು 33 ಕುರಿಗಳು ಸಾವು: ಕುರಿಗಾಹಿಗೆ ಗಾಯ
ಬಾಗಲಕೋಟೆ: ಇಳಕಲ್ ಹೊರವಲಯದಲ್ಲಿ ಲಾರಿ ಹರಿದು 33 ಕುರಿಗಳು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೊಡಕೇಲ್ ಗ್ರಾಮದ ಕುರಿಗಾಹಿ ರಾಯಪ್ಪಗೆ ಗಾಯಗಳಾಗಿವೆ. ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಳಕಲ್ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮಾರುಕಟ್ಟೆಗೆ ಹೋದ ಯುವಕ ಶವವಾಗಿ ಪತ್ತೆ
ಆನೇಕಲ್: ಹಣ್ಣಿನ ಮಾರುಕಟ್ಟೆಗೆ ಹೋದ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ಹೊರವಲಯದ ಹುಸ್ಕೂರು ಹಣ್ಣಿನ ಮಾರುಕಟ್ಟೆಯಲ್ಲಿ ನಡೆದಿದೆ. ಮಧು (31) ಮೃತ ಯುವಕ. ಸಿಂಗೇನ ಅಗ್ರಹಾರದಲ್ಲಿರುವ ಅತಿ ದೊಡ್ಡ ಹುಸ್ಕೂರು ಹಣ್ಣಿನ ಮಾರುಕಟ್ಟೆಯಲ್ಲಿ ಇಂದು ಮಧು ಶವ ಪತ್ತೆ ಆಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.