ಪತ್ನಿಯ ಶೀಲ ಶಂಕಿಸಿ ಐವರ ಹತ್ಯೆ ಮಾಡಿದ್ದ ಪಾಪಿಗೆ ಗಲ್ಲು ಶಿಕ್ಷೆ ಪ್ರಕಟ
ಬಳ್ಳಾರಿ: ಶೀಲ ಶಂಕಿಸಿ ಪತ್ನಿ, ನಾದಿನಿ ಮತ್ತು 3 ಮಕ್ಕಳನ್ನು ಕೊಂದಿದ್ದ ಬೈಲೂರು ತಿಪ್ಪಯ್ಯಗೆ ಹೊಸಪೇಟೆಯ 3ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಗಲ್ಲು ಶಿಕ್ಷೆ ಪ್ರಕಟಿಸಿದೆ. ಬಳ್ಳಾರಿ ಜಿಲ್ಲೆ ಕಂಪ್ಲಿ ಪಟ್ಟಣದ ಚಪ್ಪರಹಳ್ಳಿಯಲ್ಲಿ ಬೈಲೂರು ತಿಪ್ಪಯ್ಯ 2017ರ ಫೆಬ್ರವರಿ 25ರಂದು ಐವರ ಹತ್ಯೆ ಮಾಡಿದ್ದ. ಪತ್ನಿಯ ಶೀಲ ಶಂಕಿಸಿ ಅಪರಾಧಿ ತಿಪ್ಪಯ್ಯ ಸದಾ ಜಗಳವಾಡುತ್ತಿದ್ದ. ಪತ್ನಿ ಫಕೀರಮ್ಮ, ನಾದಿನಿ ಗಂಗಮ್ಮ, ಮಕ್ಕಳಾದ ನಾಗರಾಜ, ಪವಿತ್ರಾ, ಬಸಮ್ಮಳನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದಿದ್ದ. ಸರ್ಕಾರದ ಪರವಾಗಿ ಅಭಿಯೋಜಕ ಎಂ.ಬಿ.ಸುಂಕಣ್ಣ ವಾದ […]
ಬಳ್ಳಾರಿ: ಶೀಲ ಶಂಕಿಸಿ ಪತ್ನಿ, ನಾದಿನಿ ಮತ್ತು 3 ಮಕ್ಕಳನ್ನು ಕೊಂದಿದ್ದ ಬೈಲೂರು ತಿಪ್ಪಯ್ಯಗೆ ಹೊಸಪೇಟೆಯ 3ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಗಲ್ಲು ಶಿಕ್ಷೆ ಪ್ರಕಟಿಸಿದೆ.
ಬಳ್ಳಾರಿ ಜಿಲ್ಲೆ ಕಂಪ್ಲಿ ಪಟ್ಟಣದ ಚಪ್ಪರಹಳ್ಳಿಯಲ್ಲಿ ಬೈಲೂರು ತಿಪ್ಪಯ್ಯ 2017ರ ಫೆಬ್ರವರಿ 25ರಂದು ಐವರ ಹತ್ಯೆ ಮಾಡಿದ್ದ. ಪತ್ನಿಯ ಶೀಲ ಶಂಕಿಸಿ ಅಪರಾಧಿ ತಿಪ್ಪಯ್ಯ ಸದಾ ಜಗಳವಾಡುತ್ತಿದ್ದ. ಪತ್ನಿ ಫಕೀರಮ್ಮ, ನಾದಿನಿ ಗಂಗಮ್ಮ, ಮಕ್ಕಳಾದ ನಾಗರಾಜ, ಪವಿತ್ರಾ, ಬಸಮ್ಮಳನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದಿದ್ದ. ಸರ್ಕಾರದ ಪರವಾಗಿ ಅಭಿಯೋಜಕ ಎಂ.ಬಿ.ಸುಂಕಣ್ಣ ವಾದ ಮಂಡಿಸಿದ್ದರು.
Published On - 4:37 pm, Wed, 4 December 19