ಅಕ್ರಮ ಸಂಬಂಧ ಶಂಕೆ: ಕತ್ತು ಹಿಸುಕಿ ಪತ್ನಿಯನ್ನೇ ಕೊಂದ ಪಾಪಿ

ನೆಲಮಂಗಲ: ಅಕ್ರಮ ಸಂಬಂಧವನ್ನು ಶಂಕಿಸಿ ಪತ್ನಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನೆಲಮಂಗಲ ತಾಲೂಕಿನ ಅರಿಶಿನಕುಂಟೆಯಲ್ಲಿ ನಡೆದಿದೆ. 23 ವರ್ಷದ ರಮ್ಯಾರನ್ನು ಆರೋಪಿ ಪತಿ ಬೋರ ಶೆಟ್ಟಿ ಕೊಲೆ ಮಾಡಿದ್ದಾನೆ. ಮಧುಗಿರಿ ಮೂಲದ ಸಿದ್ದಪುರದ ರಮ್ಯಾ 2 ವರ್ಷದ ಹಿಂದೆ ಮಂಡ್ಯ ಮೂಲದ ಬೋರ ಶೆಟ್ಟಿಯನ್ನ ಪ್ರೀತಿಸಿ ಮದುವೆಯಾಗಿದ್ದರು. ವಿವಾಹವಾದ ಬಳಿಕ ಅರಿಶಿನಕುಂಟೆಯಲ್ಲಿ ದಂಪತಿ ವಾಸವಿದ್ರು. ತಡರಾತ್ರಿ ರಮ್ಯಾರನ್ನ ಕೊಲೆ ಮಾಡಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಪೋಷಕರ ಬಳಿ ನಾಟಕವಾಡಿದ್ದ. ಪೋಷಕರಿಗೆ ಅನುಮಾನ ಬಂದು ನೆಲಮಂಗಲ ನಗರ […]

ಅಕ್ರಮ ಸಂಬಂಧ ಶಂಕೆ: ಕತ್ತು ಹಿಸುಕಿ ಪತ್ನಿಯನ್ನೇ ಕೊಂದ ಪಾಪಿ
ಸಾಧು ಶ್ರೀನಾಥ್​ Edited By:

Updated on: May 30, 2020 | 9:26 AM

ನೆಲಮಂಗಲ: ಅಕ್ರಮ ಸಂಬಂಧವನ್ನು ಶಂಕಿಸಿ ಪತ್ನಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನೆಲಮಂಗಲ ತಾಲೂಕಿನ ಅರಿಶಿನಕುಂಟೆಯಲ್ಲಿ ನಡೆದಿದೆ. 23 ವರ್ಷದ ರಮ್ಯಾರನ್ನು ಆರೋಪಿ ಪತಿ ಬೋರ ಶೆಟ್ಟಿ ಕೊಲೆ ಮಾಡಿದ್ದಾನೆ.

ಮಧುಗಿರಿ ಮೂಲದ ಸಿದ್ದಪುರದ ರಮ್ಯಾ 2 ವರ್ಷದ ಹಿಂದೆ ಮಂಡ್ಯ ಮೂಲದ ಬೋರ ಶೆಟ್ಟಿಯನ್ನ ಪ್ರೀತಿಸಿ ಮದುವೆಯಾಗಿದ್ದರು. ವಿವಾಹವಾದ ಬಳಿಕ ಅರಿಶಿನಕುಂಟೆಯಲ್ಲಿ ದಂಪತಿ ವಾಸವಿದ್ರು. ತಡರಾತ್ರಿ ರಮ್ಯಾರನ್ನ ಕೊಲೆ ಮಾಡಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಪೋಷಕರ ಬಳಿ ನಾಟಕವಾಡಿದ್ದ.

ಪೋಷಕರಿಗೆ ಅನುಮಾನ ಬಂದು ನೆಲಮಂಗಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ರು. ಪೊಲೀಸರ ವಿಚಾರಣೆ ವೇಳೆ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಆರೋಪಿ ಬೋರ ಶೆಟ್ಟಿ ತಪ್ಪೊಪ್ಪಿಕೊಂಡಿದ್ದಾನೆ.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us