ಅನೈತಿಕ ಸಂಬಂಧ ಆರೋಪ: ಪತ್ನಿಯನ್ನ ಚಾಕುವಿನಿಂದ ಬರ್ಬರವಾಗಿ ಹತ್ಯೆಗೈದ ಪತಿ!

ಬೆಂಗಳೂರು: ಅದೊಂದು ಪುಟ್ಟ ಮನೆ.. ಸುಖೀ ಸಂಸಾರ.. ಗಂಡ, ಹೆಂಡತಿ, ಮಕ್ಕಳು.. ಕಷ್ಟ ಅನ್ನೋದು ಇದ್ರೂ ಸಹ ಇಬ್ಬರೂ ದುಡಿದು ಜೀವನ ಮಾಡ್ತಿದ್ರು. ಆದ್ರೆ ಅದೊಂದು ಸಣ್ಣ ಕಾರಣಕ್ಕೆ ಜಗಳ ಶುರುವಾಗಿತ್ತು. ಆದ್ರೆ ಆಮೇಲೆ ಆಗಿದ್ದೇ ಘನಘೋರ ಘಟನೆ. ಅದು ಕಳೆದ ರಾತ್ರಿ ಸುಮಾರು 9 ಗಂಟೆ 30 ನಿಮಿಷ ಸಮಯ. ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರೋ ಲವಕುಶ ನಗರದ ಜನತೆ ಒಂದು ಕ್ಷಣ ಬೆಚ್ಚಿಬಿದ್ದಿದ್ರು. ಮನೆಯೊಳಗೆ ನಡೀತಿದ್ದ ಜಗಳ ಕ್ಷಣಕ್ಷಣಕ್ಕೂ ಜೋರಾಗ್ತಿತ್ತು. ಅಷ್ಟೇ ನೋಡ […]

ಅನೈತಿಕ ಸಂಬಂಧ ಆರೋಪ: ಪತ್ನಿಯನ್ನ ಚಾಕುವಿನಿಂದ ಬರ್ಬರವಾಗಿ ಹತ್ಯೆಗೈದ ಪತಿ!
ಸಾಧು ಶ್ರೀನಾಥ್​ Edited By: ಆಯೇಷಾ ಬಾನು

Updated on: Jul 01, 2020 | 11:51 AM

ಬೆಂಗಳೂರು: ಅದೊಂದು ಪುಟ್ಟ ಮನೆ.. ಸುಖೀ ಸಂಸಾರ.. ಗಂಡ, ಹೆಂಡತಿ, ಮಕ್ಕಳು.. ಕಷ್ಟ ಅನ್ನೋದು ಇದ್ರೂ ಸಹ ಇಬ್ಬರೂ ದುಡಿದು ಜೀವನ ಮಾಡ್ತಿದ್ರು. ಆದ್ರೆ ಅದೊಂದು ಸಣ್ಣ ಕಾರಣಕ್ಕೆ ಜಗಳ ಶುರುವಾಗಿತ್ತು. ಆದ್ರೆ ಆಮೇಲೆ ಆಗಿದ್ದೇ ಘನಘೋರ ಘಟನೆ.

ಅದು ಕಳೆದ ರಾತ್ರಿ ಸುಮಾರು 9 ಗಂಟೆ 30 ನಿಮಿಷ ಸಮಯ. ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರೋ ಲವಕುಶ ನಗರದ ಜನತೆ ಒಂದು ಕ್ಷಣ ಬೆಚ್ಚಿಬಿದ್ದಿದ್ರು. ಮನೆಯೊಳಗೆ ನಡೀತಿದ್ದ ಜಗಳ ಕ್ಷಣಕ್ಷಣಕ್ಕೂ ಜೋರಾಗ್ತಿತ್ತು. ಅಷ್ಟೇ ನೋಡ ನೋಡ್ತಿದ್ದಂತೆ ಮಹಿಳೆಯೊಬ್ಬಳು ಬೀದಿಗೆ ಓಡೋಡಿ ಬಂದಿದ್ಳು. ಆಕೆಯನ್ನ ವ್ಯಕ್ತಿಯೊಬ್ಬ ಅಟ್ಟಾಡಿಸಿಕೊಂಡು ಬಂದವನೇ ಏಕಾಏಕಿ ಚಾಕುವಿನಿಂದ ಅಟ್ಯಾಕ್ ಮಾಡೇಬಿಟ್ಟಿದ್ದ.

ಚಾಕು ಇರಿದು ತಲೆ ಮೇಲೆ ಕಲ್ಲು ಹಾಕಿದ ಕ್ರೂರಿ!
ಹೌದು ಅಷ್ಟಕ್ಕೂ ಕೊಲೆಯಾಗಿರೋ ಈಕೆ ಹೆಸ್ರು ಹೇಮ. ಇನ್ನು ಈತ ಮೃತ ಹೇಮಾಳ ಪತಿ ಮಂಜುನಾಥ್. ಇಬ್ಬರೂ ಹಲವು ವರ್ಷಗಳಿಂದ ನೆಮ್ಮದಿಯಾಗಿ ಜೀವನ ಸಾಗಿಸ್ತಿದ್ರು. ವೃತ್ತಿಯಲ್ಲಿ ಲಾರಿ ಚಾಲಕನಾಗಿದ್ದ ಮಂಜುನಾಥ್ ಮನೆಗೆ ಸರಿಯಾಗಿ ಬರ್ತಿರಲಿಲ್ಲವಂತೆ. ಜೊತೆಗೆ ಇತ್ತ ಹೇಮಾ ಕೂಡ ಮತ್ತೊಬ್ಬನ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು ಎನ್ನಲಾಗ್ತಿದೆ. ಅದೇ ರೀತಿ ಪತಿಯೂ ಕೂಡ ಬೇರೊಬ್ಬಳ ಜತೆ ಸಂಬಂಧ ಇರಿಸಿಕೊಂಡಿದ್ದನಂತೆ.

ಇದೇ ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳ ಕೂಡ ನಡೀತಿತ್ತು. ಆದ್ರೆ ನಿನ್ನೆ ರಾತ್ರಿ ಗಲಾಟೆ ತಾರಕಕ್ಕೇರಿದ್ದು ಪತ್ನಿಯನ್ನ ಬರ್ಬರವಾಗಿ ಹತ್ಯೆ ಮಾಡಿಬಿಟ್ಟಿದ್ದಾನೆ. ಚಾಕುವಿನಿಂದ ಇರಿದಿದ್ದಲ್ಲದೇ ತಲೆ ಮೇಲೆ ಕಲ್ಲು ಕೂಡ ಎತ್ತಿಹಾಕಿ ಎಸ್ಕೇಪ್ ಆಗಿದ್ದಾನೆ.

ಇನ್ನು ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ರಾಜಗೋಪಾಲನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಕೇಸ್ ದಾಖಲಿಸಿಕೊಂಡಿದ್ದಾರೆ. ಪರಾರಿಯಾಗಿರೋ ಕೊಲೆಗಾರ ಪತಿ ಮಂಜುನಾಥ್‌ಗಾಗಿ ಬಲೆ ಬೀಲಿಸಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us