ಅವರಿಬ್ಬರೂ ಪರಸ್ಪರ ಪ್ರೀತಿಸಿ ಮದ್ವೆ ಆಗಿದ್ದರು. ಜೊತೆಗೆ ತಾಯಿ-ತಂದೆ ಇಲ್ಲದ ಯುವತಿಗೆ ಚಿಕ್ಕಮ್ಮನೇ ಎಲ್ಲಾ ಆಗಿದ್ದಳು. ಪ್ರೀತಿಸಿದ ಇಬ್ಬರ ಜಾತಿಗಳೂ ಬೇರೆ ಆಗಿದ್ದರೂ ಮಗಳು ಪ್ರೀತಿಸಿದ್ದಾಳೆ (wife) ಎಂಬ ಒಂದೇ ಕಾರಣಕ್ಕೆ ಸಾಕಷ್ಟು ವರದಕ್ಷಿಣೆಯನ್ನೂ ಕೊಟ್ಟು ಮದ್ವೆ ಮಾಡಿಸಿ ಕೊಟ್ಟಿದ್ದಳು ಆ ಚಿಕ್ಕಮ್ಮ. ಮೊದಮೊದಲು ಅಕ್ಕರೆಯಿಂದ ಕಂಡ ಗಂಡನ (Husband) ಮನೆಯರು ನಂತರ ದೂರಾದೂರಾ ಅಂತಾದರು. ನಿತ್ಯ ಜಗಳ. ಅದೂ ವರ್ಷಕ್ಕೊಮ್ಮೆ ಬರುವ ಜಾತ್ರೆಯ (village fair) ದಿನವೇ ಆ ದುಷ್ಟ ಗಂಡ ಪ್ರೀತಿಸಿ ಕೈ ಹಿಡಿದವಳನ್ನ ಮುಗಿಸಿಯೇ ಬಿಟ್ಟಿದ್ದಾನೆ (murder). ಇಲ್ಲಿದೆ ನೋಡಿ ಮೋಸಗಾರ ಪತಿಯ ಸ್ಟೋರಿ ಇಲ್ಲಿದೆ.
ಗ್ರಾಮದಲ್ಲಿ ಐದು ವರ್ಷಗಳಿಗೊಮ್ಮೆ ಉಡಸಲಮ್ಮ ಕಟ್ಟಿದುರ್ಗಂಬಿಕಾ ದೇವಿ ಜಾತ್ರಾ ಮಹೋತ್ಸವ ನಡೆಯುತ್ತಿತ್ತು. ಗ್ರಾಮ ನೆಂಟ್ರು ಬೀಗರುಗಳಿಂದ ಕಿಕ್ಕಿರಿದಿತ್ತು. ಪರಸ್ಪರ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾ ಸಂಭ್ರಮಿಸುವ ಸಮಯ ಅದು. ಆದ್ರೆ ಕುಡಿತದ ಮತ್ತಿನಲ್ಲಿ ಗಂಡ ತನ್ನ ಹೆಂಡತಿಯ ಮೇಲೆ ಹಲ್ಲೆ ಮಾಡಿ ಸಾಯಿಸಿದ್ದಾನೆ. ಇದರಿಂದ ಗ್ರಾಮದಲ್ಲಿ ಸೂತಕದ ಛಾಯೆ ಮನೆ ಮಾಡಿದೆ.
ಹೌದು ಈ ಘಟನೆ ನಡೆದಿರುವುದು ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿ ಗ್ರಾಮದಲ್ಲಿ, ಈ ಗ್ರಾಮದಲ್ಲಿ ಕಳೆದ ಐದು ದಿನಗಳಿಂದ ಉಡಸಲಮ್ಮ ಮತ್ತು ದುರ್ಗಂಬಿಕಾ ದೇವಿಯರ ಜಾತ್ರೆ ನಡೆಯುತ್ತಿತ್ತು, ಇದೆ ಸಮಯದಲ್ಲಿ ಅದೇ ಗ್ರಾಮದ ಹನುಮಂತ ರಾತ್ರಿ ಕಂಠಪೂರ್ತಿ ಕುಡಿದು ಮತ್ತಿನಲ್ಲಿ ತನ್ನ ಹೆಂಡತಿ ಅರ್ಪಿತಾ ಮೇಲೆ ಹಲ್ಲೆ ಮಾಡಿದ್ದಾನೆ, ಹಲ್ಲೆಯಿಂದ ಕಿವಿಯಲ್ಲಿ ರಕ್ತಸ್ರಾವವಾಗಿ ಮೃತ ಪಟ್ಟಿದ್ದಾಳೆ.
ಅವರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟು ಒಂದೂವರೆ ವರ್ಷ ಕಳೆದಿತ್ತು, ದಂಪತಿಗೆ ಮುದ್ದಾದ ಮಗು ಸಹ ಇತ್ತು, ಅದರೆ ಮದ್ಯ ವ್ಯಸನಿ ಗಂಡ ಮನೆಯಲ್ಲಿ ಪತ್ನಿಯೊಂದಿಗೆ ನಿತ್ಯ ಜಗಳವಾಡ್ತಿದ್ದ. ಇಡೀ ಊರಿಗೆ ಊರೇ ಗ್ರಾಮ ದೇವತೆಯ ಹಬ್ಬ ಆಚರಣೆ ಮಾಡ್ತಿದ್ರೇ ಇತ್ತಾ ಅ ಪಾಪಿ ಪತಿರಾಯ ಕುಡಿದ ಮತ್ತಿನಲ್ಲಿ ತನ್ನ ಪತ್ನಿಯ ಕಥೆ ಮುಗಿಸಿದ್ದಾನೆ. ಅಲ್ಲದೆ ಪತ್ನಿ ಸತ್ತಿದ್ದಾಳೆ ಎಂದು ಖಾತ್ರಿಪಡಿಸಿಕೊಂಡು ಮನೆಗೆ ಬೀಗ ಹಾಕಿ ಕಾಲ್ಕಿತ್ತಿದ್ದ ಪತಿರಾಯ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಈತ ಹೊಡೆದ ಹೊಡೆತಕ್ಕೆ ಕಿವಿಯಲ್ಲಿ ರಕ್ತಸ್ರಾವ ಆಗಿದೆ. ಇದರಿಂದ ಮೆದುಳಿಗೆ ತೊಂದರೆ ಆಗಿ ಅರ್ಪಿತಾ ಸಾವನ್ನಪ್ಪಿದ್ದಾಳೆ ಎಂದು ಕೊಲೆಯಾದ ಮಹಿಳೆಯ ಚಿಕ್ಕಮ್ಮ ಮಂಜಮ್ಮ ಹೇಳಿದ್ದಾರೆ.
ಇದನ್ನೂ ಓದಿ: ಮಣ್ಣಿನ ಮೋಹಕ್ಕೆ ಹೊಲದಲ್ಲಿ ಕೊಲೆಯಾದ ಮಹಿಳೆ, ಡೇಟ್ ಫಿಕ್ಸ್ ಮಾಡಿ ಹೊಡಿತೀನಿ ಎಂದಿದ್ದ ಹಂತಕ! ಯಾಕೆ?
ಘಟನಾ ಸ್ಥಳಕ್ಕೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ ಸಂತೋಷ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತಳ ಸಂಬಂಧಿಕರು ಪ್ರತಿಕ್ರಿಯೆ ನೀಡಿದ್ದು, ಅವರಿಬ್ಬರ ನಡುವೆ ಏನು ಆಗಿದೆ ನಮಗೆ ಗೊತ್ತಿಲ್ಲ, ಮೃತ ಅರ್ಪಿತಳಿಗೆ ಪೋಷಕರಿಲ್ಲದ್ದರಿಂದ ನಮ್ಮ ತಮ್ಮ ಸಾಕ್ತಿದ್ದ, ಹನುಮಂತನನ್ನು ಬಿಟ್ಟು ಬೇರೆ ಯಾರನ್ನೂ ಮದುವೆಯಾಗಲ್ಲ ಎಂದು ಮೃತ ಅರ್ಪಿತಾ ಹಠ ಹಿಡಿದ ಬೆನ್ನಲ್ಲೇ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾದ ಬಳಿಕ ಗಲಾಟೆ ಸಾಮಾನ್ಯವಾಗಿತ್ತು. ರಾಜಿ ಪಂಚಾಯತಿ ಕೂಡ ಮಾಡಿದ್ವೀ, ಅದ್ರೂ ಹೊಡೆದು ಈ ರೀತಿ ಮಾಡಿದ್ದಾನೆ, ಮದುವೆಯಾಗಿ ಒಂದುವರೆ ವರ್ಷ ಆಗಿದೆ ಅಷ್ಟೇ, ಅವನಿಗೆ ಶಿಕ್ಷೆ ಆಗ್ಬೇಕು, ನಮಗೆ ನ್ಯಾಯ ಸಿಗ್ಬೇಕು, ಇಡೀ ಊರಿಗೆ ಊರೇ ಹಬ್ಬ ಮಾಡ್ತಿದ್ರೇ, ಇತ್ತಾ ಕೊಲೆ ಮಾಡಿ ಮನೆಗೆ ಬೀಗ ಹಾಕಿಕೊಂಡು ಕಾಲ್ಕಿತ್ತಿದ್ದಾನೆ ಎಂದು ಕೊಲೆ ಆರೋಪಿಯ ಸಂಬಂಧಿ ರೇವಣಪ್ಪ ಹೇಳಿದ್ದಾರೆ.
ಕೊಲೆಯಾದ ಅರ್ಪಿತಾಗೆ ತಂದೆ ತಾಯಿ ಇಲ್ಲ. ಅವಳ ಚಿಕ್ಕಮ್ಮನ ಆಶ್ರಮದಲ್ಲಿ ದಾವಣಗೆರೆ ಕೆಟಿಜೆ ನಗರದಲ್ಲಿ ಬೆಳೆದಳು. ಹನಮಂತಪ್ಪ ಹಾಗೂ ಅರ್ಪಿತಾ ಪರಸ್ಪರ ಪ್ರೀತಿಸಿದ್ದರು. ಇಬ್ಬರು ಬೇರೆ ಬೇರೆ ಜಾತಿಗೆ ಸೇರಿದವರು. ಇವರಿಬ್ಬರು ಒಂದು ರೀತಿಯಲ್ಲಿ ಜನುಮದ ಜೋಡಿಯಂತೆ ಪ್ರೀತಿಸುತ್ತಿದ್ದರು. ಇದನ್ನ ನೋಡಿ ಸಂಬಂಧಿಕರು ಸಂಭ್ರಮದಿಂದ ಮದ್ವೆ ಮಾಡಿಸಿದ್ದರು. ಆದ್ರೆ ಮದ್ವೆಯಾದ ಬಳಿಕ ನಿತ್ಯ ಜಗಳವಾಡುತ್ತಿದ್ದ. ಒಂದು ಮಗು ಆಗಿತ್ತು. ಹೆರಿಗೆ ವೇಳೆ ಸಾವನ್ನಪ್ಪಿತ್ತು. ಮಕ್ಕಳಿಲ್ಲ. ಆದ್ರೆ ನಿತ್ಯ ಜಗಳ ಮಾಡಿ ಕೊನೆಗೆ ಪತ್ನಿಯನ್ನೆ ಬಲಿ ಪಡೆದಿದ್ದಾನೆ ದುಷ್ಟ ಪತಿ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ