Hyderabad Crime: ಮಹಿಳೆಯನ್ನು ಕೊಂದು, ದೇಹದ ಭಾಗಗಳನ್ನು 6 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿಟ್ಟಿದ್ದ ವ್ಯಕ್ತಿಯ ಬಂಧನ
ಮಹಿಳೆಯೊಬ್ಬಳನ್ನು ಕೊಂದು ದೇಹದ ಭಾಗಗಳನ್ನು 6 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿಟ್ಟಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಘಟನೆ ಹೈದರಾಬಾದ್ನಲ್ಲಿ ನಡೆದಿದೆ, ವ್ಯಕ್ತಿ ಆ ಮಹಿಳೆ ಜತೆ ಅಕ್ರಮ ಸಂಬಂಧ ಹೊಂದಿದ್ದ ಎಂಬುದು ತಿಳಿದುಬಂದಿದೆ.

ಮಹಿಳೆಯೊಬ್ಬಳನ್ನು ಕೊಂದು ದೇಹದ ಭಾಗಗಳನ್ನು 6 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್ನಲ್ಲಿಟ್ಟಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಘಟನೆ ಹೈದರಾಬಾದ್ನಲ್ಲಿ ನಡೆದಿದೆ, ವ್ಯಕ್ತಿ ಆ ಮಹಿಳೆ ಜತೆ ಅಕ್ರಮ ಸಂಬಂಧ ಹೊಂದಿದ್ದ ಎಂಬುದು ತಿಳಿದುಬಂದಿದೆ. ಡಂಪಿಂಗ್ ಯಾರ್ಡ್‌ನಲ್ಲಿ 55 ವರ್ಷದ ಮಹಿಳೆಯ ಕತ್ತರಿಸಿದ ತಲೆ ಪತ್ತೆಯಾದ ನಂತರ 48 ವರ್ಷದ ವ್ಯಕ್ತಿಯನ್ನು ಒಂದು ವಾರದ ತನಿಖೆಯ ನಂತರ ಬಂಧಿಸಲಾಗಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಹಣಕ್ಕೋಸ್ಕರ ಕೊಲೆ ನಡೆದಿದೆ, ಆರೋಪು ಚಂದ್ರಮೋಹನ್ ಸಂತ್ರಸ್ತೆ ಅನುರಾಧಾ ರೆಡ್ಡಿಗೆ 7 ಲಕ್ಷ ರೂ ನೀಡಬೇಕಿತ್ತು, ಈ ವಿಚಾರವಾಗಿ ಅವರ ನಡುವೆ ಜಗಳ ನಡೆದಿದೆ ಎನ್ನಲಾಗಿದೆ.
ಚಂದ್ರಮೋಹನ್‌ಗೆ ಮದುವೆಯಾಗಿರಲಿಲ್ಲ, ಅನುರಾಧ ವಿಧವೆಯಾಗಿದ್ದು, ಹಲವು ವರ್ಷಗಳ ಹಿಂದೆ ಪತಿ ನಿಧನರಾದ ನಂತರ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು 15 ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದರು, 2018 ರಲ್ಲಿ ಅನುರಾಧ ಚಂದ್ರಮೋಹನ್‌ಗೆ 7 ಲಕ್ಷ ರೂಪಾಯಿ sಆಲ ನೀಡಿದ್ದರು, ಪದೇ ಪದೇ ಮನವಿ ಮಾಡಿದರೂ ಆ ಹಣವನ್ನು ಹಿಂದಿರುಗಿಸಿರಲಿಲ್ಲ.
ಹಣವನ್ನು ಹಿಂದಿರುಗಿಸುವಂತೆ ಸತತ ಒತ್ತಡದಿಂದ ಚಂದ್ರಮೋಹನ್ ಅನುರಾಧಾಳ ವರ್ತನೆಯಿಂದ ಕೋಪಗೊಂಡಿದ್ದ ಎಂಬುದು ತಿಳಿದುಬಂದಿದೆ. ಡೆಪ್ಯುಟಿ ಕಮಿಷನರ್ ಆಫ್ ಪೋಲೀಸ್ ಸಿ.ಎಚ್.ರೂಪೇಶ್ ಮಾತನಾಡಿ, ಸಾಲ ಮರುಪಾವತಿಗೆ ಮಹಿಳೆಯ ನಿರಂತರ ಬೇಡಿಕೆಯಿಂದಾಗಿ ಮೋಹನ್ ಹೆಚ್ಚು ಹತಾಶೆಗೊಂಡರು ಮತ್ತು ಮೇ 12 ರಂದು ಪರಿಸ್ಥಿತಿ ಉಲ್ಬಣಗೊಂಡಿತು. ಜಗಳದ ನಂತರ ಚಾಕುವಿನಿಂದ ಇರಿದು ಅನುರಾಧಾರನ್ನು ಹತ್ಯೆ ಮಾಡಿದ್ದ.
ಮತ್ತಷ್ಟು ಓದಿ: Illicit Relationship: ವಿವಾಹಿತ ಮಹಿಳೆ ಜತೆ 27ರ ಯುವಕ ಲವ್ವಿಡವ್ವಿ: ಬಳಿಕ ನಡೆದಿದ್ದು ಘನಘೋರ ದುರಂತ
ದೇಹವನ್ನು ವಿಲೇವಾರಿ ಮಾಡಲು ಆತ ಎರಡು ಸಣ್ಣ ಕಲ್ಲು ಕತ್ತರಿಸುವ ಯಂತ್ರಗಳನ್ನು ಖರೀದಿಸಿದ್ದ, ತಲೆ ಕತ್ತರಿಸಿ ದೇಹವನ್ನು 6 ತುಂಡುಗಳಾಗಿ ಕತ್ತರಿಸಿದ್ದ. ಕಾಲುಗಳು ಮತ್ತು ಕೈಗಳನ್ನು ಬೇರ್ಪಡಿಸಿ ಅವರ ನಿವಾಸದಲ್ಲಿ ರೆಫ್ರಿಜರೇಟರ್‌ನಲ್ಲಿ ಇಟ್ಟಿದ್ದ. ಆದರೆ ದೇಹದ ಉಳಿದ ಭಾಗಗಳನ್ನು ಸೂಟ್‌ಕೇಸ್‌ನಲ್ಲಿ ತುಂಬಿದ್ದ.
ಮೇ 15 ರಂದು ಮೂಸಿ ನದಿಯ ಬಳಿ ಆಕೆಯ ತಲೆಯನ್ನು ಎಸೆದು ಬಂದಿದ್ದ, ದುರ್ವಾಸನೆ ಬರುವುದನ್ನು ತಡೆಯಲು ಅಗರಬತ್ತಿ, ಫಿನಾಯಿಲ್, ಮತ್ತು ಸುಗಂಧ ದ್ರವ್ಯಗಳನ್ನು ಹಾಕಿದ್ದ.
ಮತ್ತಷ್ಟು ಓದಿ: Shraddha Walker: ಶ್ರದ್ಧಾ ವಾಕರ್ ಹತ್ಯೆ ಪ್ರಕರಣ: ಅಫ್ತಾಬ್ ಪೂನಾವಾಲಾ ಮೇಲೆ ಕೊಲೆ, ಸಾಕ್ಷ್ಯ ನಾಶ ಆರೋಪ ಹೊರಿಸಿದ ದೆಹಲಿ ಕೋರ್ಟ್
ಮಹಿಳೆಯ ತುಂಡರಿಸಿದ ತಲೆ ಮೇ 17 ರಂದು ನಗರದ ಮೂಸಿ ನದಿಯ ಬಳಿ ಸ್ಥಳೀಯ ಕಾರ್ಮಿಕರಿಗೆ ಸಿಕ್ಕಿತ್ತು ಪತ್ತೆಯಾಗಿತ್ತು. ಮಲಕ್‌ಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿದ್ದರು.
ಪ್ರಕರಣ ದಾಖಲಾಗಿದ್ದು, ಕೊಲೆ ಪ್ರಕರಣದ ತನಿಖೆ ಮತ್ತು ಭೇದಿಸಲು ಪೊಲೀಸರು ಎಂಟು ವಿಶೇಷ ತಂಡಗಳನ್ನು ರಚಿಸಿದ್ದರು, ಆರೋಪಿಗಳನ್ನು ಹಿಡಿಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಅವರು ಪರಿಶೀಲಿಸಿದರು.
ದೆಹಲಿಯಲ್ಲಿ ಇತ್ತೀಚೆಗೆ ಅಫ್ತಾಬ್ ಪೂನಾವಾಲಾ ಎಂಬಾತ ತನ್ನ ಲಿವ್ಇನ್ ರಿಲೇಷನ್ಶಿಪ್ನಲ್ಲಿದ್ದ ಶ್ರದ್ಧಾಂ ಎಂಬುವಳನ್ನು ಹತ್ಯೆ ಮಾಡಿ ದೇಹವನ್ನು ಕತ್ತರಿಸಿ ವಿವಿಧ ಭಾಗಗಳನ್ನು ಫ್ರಿಡ್ಜ್ನಲ್ಲಿಟ್ಟಿರುವ ಘಟನೆ ಬೆಳಕಿಗೆ ಬಂದಿತ್ತು.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ