Delhi: ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ, ಹಸೆಮಣೆ ಏರಬೇಕಿದ್ದವನ ಬರ್ಬರ ಹತ್ಯೆ, ಇಬ್ಬರ ಬಂಧನ

|

Updated on: Jul 02, 2023 | 10:25 AM

ಸಂಭ್ರಮದ ಮನೆಯಲ್ಲಿ ಸೂತಕತ ಛಾಯೆ, ಜುಲೈ 3 ರಂದು ಹಸೆಮಣೆ ಏರಬೇಕಾದವನು ರಕ್ತಡ ಮಡುವಿನಲ್ಲಿ ಮಲಿಗಿದ್ದಾನೆ. ಹಳೆಯ ದ್ವೇಷಕ್ಕೆ 22 ವರ್ಷ ಯುವಕನನ್ನು ಇಬ್ಬರು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ದೆಹಲಿಯ ಕ್ಯಾಂಟ್ ಪ್ರದೇಶದ ಬಳಿ ನಡೆದಿದೆ.

Delhi: ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ, ಹಸೆಮಣೆ ಏರಬೇಕಿದ್ದವನ ಬರ್ಬರ ಹತ್ಯೆ, ಇಬ್ಬರ ಬಂಧನ
ಪೊಲೀಸ್
Follow us on

ಸಂಭ್ರಮದ ಮನೆಯಲ್ಲಿ ಸೂತಕತ ಛಾಯೆ, ಜುಲೈ 3 ರಂದು ಹಸೆಮಣೆ ಏರಬೇಕಾದವನು ರಕ್ತಡ ಮಡುವಿನಲ್ಲಿ ಮಲಿಗಿದ್ದಾನೆ.
ಹಳೆಯ ದ್ವೇಷಕ್ಕೆ 22 ವರ್ಷ ಯುವಕನನ್ನು ಇಬ್ಬರು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ದೆಹಲಿಯ ಕ್ಯಾಂಟ್ ಪ್ರದೇಶದ ಬಳಿ ನಡೆದಿದೆ. ಸಂಭ್ರಮದ ಮನೆಯಲ್ಲಿ ಶೋಕ ಮಡುಗಟ್ಟಿದೆ. ಜುಲೈ 3ರಂದು ಆಶಿಶ್ ವಿವಾಹ ನೆರವೇರಬೇಕಿತ್ತು ಅದಕ್ಕೂ ಮುನ್ನ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.

ಇದೀಗ ಕೊಲೆಯ ವಿಡಿಯೋ ವೈರಲ್ ಆಗುತ್ತಿದೆ, ಮಾಹಿತಿಯ ಪ್ರಕಾರ ಆರೋಪಿಗಳು ಆಶಿಶ್‌ನನ್ನು ಬಹಳ ಸಮಯದಿಂದ ಹಿಂಬಾಲಿಸುತ್ತಿದ್ದರು, ಮತ್ತು ಪ್ರತೀಕಾರ ತೀರಿಸಿಕೊಳ್ಳಲು ಬಯಸಿದ್ದರು. ವೀಡಿಯೋ ಆ್ಯಂಗಲ್ ನೋಡಿದಾಗ ಬಲಭಾಗದಲ್ಲಿರುವ ನಿವಾಸದಿಂದ ಈ ವಿಡಿಯೋ ಮಾಡಿರುವುದು ಗೊತ್ತಾಗಿದೆ. ಇದೀಗ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಒಂದು ಬದಿಯಲ್ಲಿ ಎತ್ತರದ ಗೋಡೆಗಳಿದ್ದು ಅದು ದೆಹಲಿ ಕ್ಯಾಂಟ್ ಪ್ರದೇಶವಾಗಿದೆ, ಇನ್ನೊಂದು ಬದಿಯಲ್ಲಿ ಪ್ರದೇಶವು ಜರೇಡಾ ಗ್ರಾಮದಲ್ಲಿದೆ ಎಂದು ತೋರುತ್ತದೆ. ಘಟನಾ ಸ್ಥಳದಲ್ಲಿ ತಡರಾತ್ರಿಯವರೆಗೂ ವಾಹನ ದಟ್ಟಣೆ ಉಂಟಾಗಿತ್ತು, ಆದರೆ ಸಂಜೆ ನಡೆದ ಈ ಘಟನೆಯನ್ನು ಯಾರೂ ಹೇಗೆ ನೋಡಲಿಲ್ಲ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಮತ್ತಷ್ಟು ಓದಿ: Bengaluru News: ಮಾಲೀಕರ ಮನೆಯನ್ನೇ ದೋಚಿದ ಬಾಡಿಗೆ ಮನೆಯಲ್ಲಿ ಲಿವಿಂಗ್ ಟುಗೆದರ್​​ನಲ್ಲಿದ್ದ ಜೋಡಿ

ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, 16 ವರ್ಷದ ಬಾಲಕಿಯನ್ನು ರಸ್ತೆಯಲ್ಲಿ ಇರಿದು ಬಾಲಕ ಪರಾರಿಯಾಗಿದ್ದಾನೆ, ಆದರೆ ಸುತ್ತಮುತ್ತಲಿನ ಜನರು ಸಹಾಯ ಮಾಡಲು ಮುಂದೆ ಬರಲಿಲ್ಲ. ಇಬ್ಬರು ಹುಡುಗರು ನನ್ನ ಅಣ್ಣನ ಶರ್ಟ್ ಎಳೆದು ಸ್ಕೂಟರ್ ಮೇಲೆ ಕೂರಿಸಿಕೊಂಡು ಕೊಲೆ ಮಾಡಿದ ಜಾಗಕ್ಕೆ ಕರೆದುಕೊಂಡು ಹೋಗಿರುವುದು ಸಿಸಿಟಿವಿಯಲ್ಲಿ ಗೋಚರಿಸುತ್ತಿದೆ ಎಂದು ಸಹೋದರಿ ತಮನ್ನಾ ಹೇಳಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಅರ್ಧ ಗಂಟೆಯವರೆಗೂ ಯಾರೂ ಸಹಾಯಕ್ಕೆ ಬರಲಿಲ್ಲ, ಜನರು ವೀಡಿಯೊಗಳನ್ನು ಮಾಡುತ್ತಿದ್ದಾರೆ. ಪೊಲೀಸರು ಕೋಲಿನಿಂದ ಅಲುಗಾಡಿಸುತ್ತಾ ನೋಡುತ್ತಿದ್ದಾರೆ, ಆದರೆ ಯಾರೂ ಆಶಿಶ್​ನನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ