AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲವ್ ಮಾಡುವಂತೆ ಪೀಡಿಸುತ್ತಿದ್ದ ಶಿಕ್ಷಕಿಯ ಮಗ: ಮನನೊಂದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಲವ್ ಮಾಡುವಂತೆ ಶಿಕ್ಷಕಿಯ ಮಗನಿಂದ ಕಿರುಕುಳ ಆರೋಪ ಮಾಡಿದ್ದು, ಕಿರುಕುಳದಿಂದ ಮನನೊಂದು SSLC ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಹೊಸಕೋಟೆಯ ಪಾರ್ವತಿಪುರದಲ್ಲಿ ನಡೆದಿದೆ.

ಲವ್ ಮಾಡುವಂತೆ ಪೀಡಿಸುತ್ತಿದ್ದ ಶಿಕ್ಷಕಿಯ ಮಗ: ಮನನೊಂದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ ಆತ್ಮಹತ್ಯೆ
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಸಾರಾ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Jul 02, 2023 | 4:50 PM

Share

ಬೆಂಗಳೂರು ಗ್ರಾಮಾಂತರ: ಲವ್ ಮಾಡುವಂತೆ ಶಿಕ್ಷಕಿಯ ಮಗನಿಂದ ಕಿರುಕುಳ ಆರೋಪ ಮಾಡಿದ್ದು, ಕಿರುಕುಳದಿಂದ ಮನನೊಂದು SSLC ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಹೊಸಕೋಟೆಯ ಪಾರ್ವತಿಪುರದಲ್ಲಿ ನಡೆದಿದೆ. ಸಾರಾ(16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಮಗಳ ಸಾವಿಗೆ ಶಿಕ್ಷಕಿ ಹಾಗೂ ಇತರರು ಕಾರಣ ಅಂತ ಹೊಸಕೋಟೆ ಠಾಣೆಗೆ ಮೃತ ವಿದ್ಯಾರ್ಥಿನಿ ಪೋಷಕರಿಂದ ದೂರು ನೀಡಲಾಗಿದೆ. ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರಿಂದ ತನಿಖೆ ನಡೆಸಲಾಗುತ್ತಿದೆ.

ಹೊಸಕೋಟೆಯ ಖಾಸಗಿ ಶಾಲೆಯಲ್ಲಿ ಮೃತ ಸಾರಾ ಓದುತ್ತಿದ್ದಳು. ಲವ್ ಮಾಡಲು ಒಪ್ಪದ ಕಾರಣ ಶಿಕ್ಷಕಿಯ ಮಗನಿಂದ ಲವ್ ಮಾಡುವಂತೆ ಕಿರುಕುಳ ನೀಡಲಾಗಿದೆ. ಬಾಲಕಿ ಸಾವಿನ ನಂತರ ವಿಚಾರ ಎಲ್ಲೂ ಬಾಯ್ಬಿಡದಂತೆ ಮೃತ ವಿದ್ಯಾರ್ಥಿನಿ ಸ್ನೇಹಿತರಿಗೆ ಶಿಕ್ಷಕಿಯಿಂದ ಧಮ್ಕಿ ಆರೋಪ ಮಾಡಲಾಗಿದೆ.

ಬಾಲಕಿ ಮೃತಪಟ್ಟು ವಾರದ ನಂತರ ಮೃತ ಸಾರಾ ಪೋಷಕರಿಗೆ ಸಹಪಾಠಿಗಳು ವಿಷಯ ತಿಳಿಸಿದ್ದಾರೆ. ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಪೋಷಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Bengaluru News: ಮಾಲೀಕರ ಮನೆಯನ್ನೇ ದೋಚಿದ ಲಿವಿಂಗ್ ಟುಗೆದರ್​​ನಲ್ಲಿದ್ದ ಜೋಡಿ

ಆಸ್ತಿಗಾಗಿ ತಮ್ಮನನ್ನೇ ಕೊಂದಿದ್ದ ಮೂವರು ಸಹೋದರರ ಬಂಧನ

ಗದಗ: ಆಸ್ತಿಗಾಗಿ ತಮ್ಮನನ್ನೇ ಕೊಂದಿದ್ದ ಮೂವರು ಸಹೋದರರನ್ನು ರೋಣ ಪೊಲೀಸರು ಬಂಧಿಸಿದ್ದಾರೆ. ಲೋಕಪ್ಪ, ರೇವಣಪ್ಪ, ಬಸಪ್ಪ ಬಂಧಿತರು. ಜಿಲ್ಲೆ ರೋಣ ಪಟ್ಟಣ ಬಳಿಯ ಜಮೀನಿನಲ್ಲಿ ಜೂ.30ರಂದು ಕೊಡಲಿಯಿಂದ ಕೊಚ್ಚಿ ಹತ್ಯೆಗೈದಿದ್ದರು. ಶೇಖಪ್ಪ ನವಲಗುಂದ(38) ಮೃತ ತಮ್ಮ. 2 ಎಕರೆ ಜಮೀನಿಗಾಗಿ ನಾಲ್ವರು ಸಹೋದರರ ನಡುವೆ ಕಲಹ ಉಂಟಾಗಿತ್ತು.

ಕೊಲೆಯಾದ ಶೇಖಪ್ಪ 2 ಎಕರೆ ಜಮೀನಿನಲ್ಲಿ ತನ್ನ ಪಾಲು ಕೇಳಿದ್ದ. ತನ್ನ ಪಾಲಿನ ಜಾಗದಲ್ಲಿ ಸೈಟ್ ಮಾಡುವ ವಿಚಾರ ಮಾಡಿದ್ದ. ಜಮೀನಿಗಾಗಿ ಗಲಾಟೆ ವೇಳೆ ಕೊಡಲಿಯಿಂದ ಕೊಚ್ಚಿ ಶೇಖಪ್ಪ ಹತ್ಯೆ ಮಾಡಲಾಗಿತ್ತು. ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: KSRTC ಬಸ್​ ಹಾಗೂ ಕಾರು ಮುಖಾಮುಖಿ ಡಿಕ್ಕಿ: ಕೊಡಗು ಮೂಲದ ದಂಪತಿ ಸಾವು

ಸಾಲಬಾದೆ ತಾಳದೆ ರೈತ ಆತ್ಮಹತ್ಯೆ

ಹಾವೇರಿ: ಬ್ಯಾಡಗಿ ತಾಲೂಕಿನ ಹೆಡಿಗ್ಗೊಂಡ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೇ ರೈತ ಶಿವನಗೌಡ ಭೀಮನಗೌಡ ಹೊಸಮನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುರುಬಗೊಂಡದ ಯೂನಿಯನ್ ಬ್ಯಾಂಕ್​ನಲ್ಲಿ 7 ಲಕ್ಷ ಸಾಲ, ಹಾವೇರಿಯ ಮಹೇಂದ್ರ ಫೈನಾನ್ಸ್​ನಲ್ಲಿ 7,50,000 ರೂ. ಸಾಲ ಮಾಡಿದ್ದರು. ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:33 pm, Sun, 2 July 23