Bengaluru News: ಮಾಲೀಕರ ಮನೆಯನ್ನೇ ದೋಚಿದ ಲಿವಿಂಗ್ ಟುಗೆದರ್​​ನಲ್ಲಿದ್ದ ಜೋಡಿ

ಬಾಡಿಗೆ ಮನೆಯಲ್ಲಿ ಲಿವಿಂಗ್ ಟುಗೆದರ್​​ನಲ್ಲಿದ್ದ ಜೋಡಿ ಮಾಲೀಕರ ಮನೆಯನ್ನೇ ದೋಚಿರುವ ಘಟನೆ ನಗರದ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಎಜಿಎಸ್ ಲೇಔಟ್​​​ನಲ್ಲಿ ನಡೆದಿದೆ.

Bengaluru News: ಮಾಲೀಕರ ಮನೆಯನ್ನೇ ದೋಚಿದ ಲಿವಿಂಗ್ ಟುಗೆದರ್​​ನಲ್ಲಿದ್ದ ಜೋಡಿ
ಬಂಧಿತ ಆರೋಪಿಗಳು
Follow us
Shivaprasad
| Updated By: ವಿವೇಕ ಬಿರಾದಾರ

Updated on:Jul 02, 2023 | 10:30 AM

ಬೆಂಗಳೂರು: ಬಾಡಿಗೆ ಮನೆಯಲ್ಲಿ ಲಿವಿಂಗ್ ಟುಗೆದರ್​​ನಲ್ಲಿದ್ದ (Living together) ಜೋಡಿ ಮಾಲೀಕರ ಮನೆಯನ್ನೇ ದೋಚಿರುವ ಘಟನೆ ನಗರದ ಸುಬ್ರಮಣ್ಯಪುರ ಪೊಲೀಸ್ (Police) ಠಾಣಾ ವ್ಯಾಪ್ತಿಯ ಎಜಿಎಸ್ ಲೇಔಟ್​​​ನಲ್ಲಿ ನಡೆದಿದೆ. ಸದ್ಯ ಖತರ್ನಾಕ್ ಜೋಡಿಯನ್ನು (Couple) ಸುಬ್ರಮಣ್ಯವಪುರ ಪೊಲೀಸರು ಬಂಧಿಸಿದ್ದಾರೆ. ಲಿಖಿತ ಹಾಗೂ ಸುಮಂತಾ ಬಂಧಿತ ಆರೋಪಿಗಳು.

ನಗರದ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಎಜಿಎಸ್ ಲೇಔಟ್​​​ನ ಪ್ರೇಮಲತ ಎಂಬುವವರ ಮನೆಯಲ್ಲಿ ಲಿಖಿತ ಹಾಗೂ ಸುಮಂತ್ ಬಾಡಿಗೆಗೆ ಇದ್ದರು. ಜೋಡಿ ಕಳ್ಳತನ ಮಾಡಲು ನಾಲ್ಕು ತಿಂಗಳು ಮನೆ ಬಾಡಿಗೆಗೆ ಪಡೆದಿತ್ತು. ಈ ಇಬ್ಬರು ನಾಲ್ಕು ತಿಂಗಳು ಮನೆ ಮಾಲೀಕರ ಚಲನ-ವಲನ ಗಮನಿಸಿದ್ದರು.

ಜೋಡಿ ಇತ್ತೀಚೆಗೆ ಮನೆ ಖಾಲಿ ಮಾಡಿದೆ. ಮನೆ ಖಾಲಿ ಮಾಡಿದ ಕೆಲವೇ ದಿನಗಳಲ್ಲಿ ಮಾಲೀಕರ ಮನೆಯಲ್ಲಿ ಕಳ್ಳತನ ಮಾಡಿದೆ. ಆರೋಪಿಗಳು ಮನೆಯಲ್ಲಿದ್ದ 4 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದಾರೆ. ಆರೋಪಿಗಳ ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು.

ಇದನ್ನೂ ಓದಿ: ನಿತ್ಯ ಕುಡಿದು ಬಂದು ಕಿರುಕುಳ ಕೊಡುತ್ತಿದ್ದ ಮಗನ ಕೈ ಕಾಲು ಕಟ್ಟಿ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ ತಂದೆ

ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರು, ಇಬ್ಬರಿಗಾಗಿ ಬಲೆ ಬೀಸಿದ್ದರು. ಆರೋಪಿಗಳು ಕದ್ದ ಚಿನ್ನದ ಒಡವೆಗಳನ್ನು ಮಾರಿ ಶಿವಮೊಗ್ಗದಲ್ಲಿ ಸೆಟಲ್ ಆಗಿದ್ದಾರೆ. ಎಂಬ ಮಾಹಿತಿ ತಿಳಿದ ಕೂಡಲೆ ಸುಬ್ರಮಣ್ಯಪುರ ಠಾಣಾ ಪೊಲೀಸರು ಖದೀಮರನ್ನು ಬಂಧಿಸಿ ಕರೆತಂದಿದ್ದಾರೆ.

ಹೀಗೆ ಕದ್ದ ಹಣ ಖಾಲಿಯಾದ ಹಿನ್ನಲೆ ಮತ್ತೊಂದು ಕೃತ್ಯವೆಸಗಲು ಆರೋಪಿಗಳು ಸಿದ್ದವಾಗಿದ್ದರೆಂಬುವುದು ವಿಚಾರಣೆ ವೇಳೆ ತಿಳಿದುಬಂದಿದೆ. ಇನ್ನು ಪೊಲೀಸರು ಆರೋಪಿಗಳನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:52 am, Sun, 2 July 23