ಮಧ್ಯ ಪ್ರದೇಶ: ಮದುವೆಗೆ ನಿರಾಕರಿಸಿದ್ದಕ್ಕೆ ಗರ್ಲ್​​​ಫ್ರೆಂಡ್​​ಗೆ ರಸ್ತೆಯಲ್ಲಿ ಅಮಾನುಷವಾಗಿ ಹಲ್ಲೆ ನಡೆಸಿದ ಯುವಕ; ಕೃತ್ಯ ವಿಡಿಯೊದಲ್ಲಿ ಸೆರೆ

ವಿಡಿಯೊದಲ್ಲಿ ಈ ಜೋಡಿ ಕೈ ಹಿಡಿದುಕೊಂಡು ನಡೆಯುತ್ತಿರುವುದು ಕಾಣುತ್ತದೆ. ಇದ್ದಕ್ಕಿದ್ದಂತೆ ಆತ ಪ್ರೇಯಸಿಯ ಕೆನ್ನೆಗೆ ಬಾರಿಸುತ್ತಾನ. ನಂತರ ಆಕೆಯ ಕೂದಲು ಹಿಡಿದೆಳೆದು ನೆಲಕ್ಕೆ ಬೀಳಿಸುತ್ತಾನೆ. ಆಮೇಲೆ ನಿರ್ದಯವಾಗಿ ಅವಳ ಮುಖದ ಮೇಲೆ, ದೇಹದ ಮೇಲೆ ತುಳಿಯುತ್ತಿರುವುದು ಕಾಣುತ್ತದೆ.

ಮಧ್ಯ ಪ್ರದೇಶ: ಮದುವೆಗೆ ನಿರಾಕರಿಸಿದ್ದಕ್ಕೆ ಗರ್ಲ್​​​ಫ್ರೆಂಡ್​​ಗೆ ರಸ್ತೆಯಲ್ಲಿ ಅಮಾನುಷವಾಗಿ ಹಲ್ಲೆ ನಡೆಸಿದ ಯುವಕ; ಕೃತ್ಯ ವಿಡಿಯೊದಲ್ಲಿ ಸೆರೆ
ಮಧ್ಯಪ್ರದೇಶದಲ್ಲಿ ಯುವತಿ ಮೇಲೆ ಹಲ್ಲೆ ನಡೆಸುತ್ತಿರುವ ಯುವಕ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Dec 26, 2022 | 1:47 PM

ಭೋಪಾಲ್: ಮಧ್ಯಪ್ರದೇಶದ(Madhya Pradesh) ರೇವಾ ಜಿಲ್ಲೆಯಲ್ಲಿ  24 ವರ್ಷದ ಯುವಕ ತನ್ನ 19 ವರ್ಷದ ಯುವತಿಗೆ ಅಮಾನುಷವಾಗಿ ಹಲ್ಲೆ ನಡೆಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್(Viral Video) ಆಗಿದೆ. ವಿವಾಹಕ್ಕೆ ಒಲ್ಲೆ ಎಂದಿದ್ದಕ್ಕೆ ಯುವಕ, ತನ್ನ ಪ್ರೇಯಸಿ ಮೇಲೆ ಈ ರೀತಿ ಹಲ್ಲೆ ನಡೆಸಿದ್ದಾನೆ. ವಿಡಿಯೊದಲ್ಲಿ ಈ ಜೋಡಿ ಕೈ ಹಿಡಿದುಕೊಂಡು ನಡೆಯುತ್ತಿರುವುದು ಕಾಣುತ್ತದೆ. ಇದ್ದಕ್ಕಿದ್ದಂತೆ ಆತ ಪ್ರೇಯಸಿಯ ಕೆನ್ನೆಗೆ ಬಾರಿಸುತ್ತಾನ. ನಂತರ ಆಕೆಯ ಕೂದಲು ಹಿಡಿದೆಳೆದು ನೆಲಕ್ಕೆ ಬೀಳಿಸುತ್ತಾನೆ. ಆಮೇಲೆ ನಿರ್ದಯವಾಗಿ ಅವಳ ಮುಖದ ಮೇಲೆ, ದೇಹದ ಮೇಲೆ ತುಳಿಯುತ್ತಿರುವುದು ಕಾಣುತ್ತದೆ. ರೇವಾದ ಮೌಗಂಜ್ ಪ್ರದೇಶದಲ್ಲಿ ಬುಧವಾರ ಈ ವಿಡಿಯೊ ಚಿತ್ರೀಕರಿಸಲಾಗಿದೆ. ಪೊಲೀಸರು ಇಬ್ಬರ ವಿರುದ್ಧ ಐಟಿ ಕಾಯ್ದೆ ಸೇರಿದಂತೆ ಕಾನೂನಿನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಪಂಕಜ್ ತ್ರಿಪಾಠಿ ಮತ್ತು ವಿಡಿಯೊ ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಪಂಕಜ್ ತ್ರಿಪಾಠಿ ದಿನಗಟ್ಟಲೆ ಪರಾರಿಯಾಗಿದ್ದ ನಂತರ ಉತ್ತರ ಪ್ರದೇಶದ(Uttar Pradesh) ಮಿರ್ಜಾಪುರದಿಂದ ಸಿಕ್ಕಿಬಿದ್ದಿದ್ದಾನೆ.

ಇದೀಗ ಪೊಲೀಸರು ಇಬ್ಬರನ್ನೂ ವಿಚಾರಣೆ ನಡೆಸುತ್ತಿದ್ದಾರೆ. ಕುಟುಂಬದವರು ಮದುವೆಗೆ ಒಪ್ಪುತ್ತಿಲ್ಲ ಎಂದು ಮದುವೆಗೆ ನಿರಾಕರಿಸಿದ್ದಕ್ಕಾಗಿ ಪಂಕಜ್ ಕೋಪಗೊಂಡು ಹಲ್ಲೆ ನಡೆಸಿದ್ದ. ರಸ್ತೆ ಬದಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಮೌಗಂಜ್ ಪಟ್ಟಣದ ಧೇರಾ ಗ್ರಾಮದ ನಿವಾಸಿಯಾಗಿದ್ದು, ಹುಡುಗಿ ಬೇರೆ ಗ್ರಾಮದವರಾಗಿದ್ದಾರೆ ಎಂದು ರೇವಾದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಸೋನ್ಕರ್ ಹೇಳಿದ್ದಾರೆ.

ಇಬ್ಬರ ನಡುವೆ ಯಾವುದೋ ವಿಷಯಕ್ಕೆ ಜಗಳವಾಗಿದ್ದು, ವ್ಯಕ್ತಿ ಮಹಿಳೆಗೆ ಥಳಿಸಿದ್ದಾರೆ. ಸ್ಥಳದಲ್ಲಿದ್ದ ಜನರು ಪೊಲೀಸರಿಗೆ ಮಾಹಿತಿ ನೀಡಿದರು, ನಂತರ ನಾವು ಸ್ಥಳಕ್ಕೆ ತಲುಪಿ ಯುವ ಜೋಡಿಯನ್ನು ಕರೆತಂದಿದ್ದೇವೆ. ನಂತರ ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಸೋಂಕರ್ ಹೇಳಿದ್ದಾರೆ. ಪೊಲೀಸ್ ಠಾಣೆಗೆ ತಲುಪಿದ ಮಹಿಳೆಯ ತಾಯಿ ಯಾವುದೇ ದೂರು ನೀಡಿಲ್ಲ.

ಇದನ್ನೂ ಓದಿ: ಮೇಕಪ್​ಗೆ ಹಣ ಕೊಡದ ಪತಿಯೇ ಬೇಡವೆಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತ್ನಿ

ವೈರಲ್ ಆಗಿರುವ ವಿಡಿಯೊ ಆಧರಿಸಿ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಡಿಯೊ ಚಿತ್ರೀಕರಿಸಿ ಪ್ರಸಾರ ಮಾಡಿದ ವ್ಯಕ್ತಿಯ ವಿರುದ್ಧ ಸಂತ್ರಸ್ತೆ ದೂರು ದಾಖಲಿಸಿದ್ದು, ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಮತ್ತಷ್ಟು ಅಪರಾಧ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:58 pm, Sun, 25 December 22