ಉತ್ತರ ಪ್ರದೇಶ: ತಂಗಿಯ ಶಿರಚ್ಛೇದ ಮಾಡಿ, ಆಕೆಯ ತಲೆಯೊಂದಿಗೆ ಬೀದಿಯಲ್ಲಿ ತಿರುಗಾಡಿದ ಅಣ್ಣ

ಮಿತ್ವಾರಾ ಗ್ರಾಮದಲ್ಲಿ, 24 ವರ್ಷದ ರಿಯಾಜ್ ಎಂಬ ವ್ಯಕ್ತಿ ತನ್ನ ಸಹೋದರಿಯ ಶಿರಚ್ಛೇದ ಮಾಡಿದ್ದಾನೆ. ಆಕೆ ತನ್ನ ಗ್ರಾಮದ ಅದೇ ಸಮುದಾಯದ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು. ಆಕೆ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿದ್ದಳು. ಈ ಸಂಬಂಧ ಯುವತಿಯ ತಂದೆ ದೂರು  ದಾಖಲಿಸಿದ್ದರು.

ಉತ್ತರ ಪ್ರದೇಶ: ತಂಗಿಯ ಶಿರಚ್ಛೇದ ಮಾಡಿ, ಆಕೆಯ ತಲೆಯೊಂದಿಗೆ ಬೀದಿಯಲ್ಲಿ ತಿರುಗಾಡಿದ ಅಣ್ಣ
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on:Jul 21, 2023 | 6:05 PM

ಅಲಹಾಬಾದ್ ಜುಲೈ 21 : ಉತ್ತರ ಪ್ರದೇಶದ (Uttar pradesh) ಬಾರಾಬಂಕಿ (Barabanki) ಜಿಲ್ಲೆಯ ಹಳ್ಳಿಯೊಂದರಲ್ಲಿ 24 ವರ್ಷದ ಯುವಕನೊಬ್ಬ ತನ್ನ ಸಹೋದರಿಯ ಶಿರಚ್ಛೇದ ಮಾಡಿದ ಪ್ರಕರಣ ವರದಿ ಆಗಿದೆ. ತಂಗಿಯ ಪ್ರೇಮ ಸಂಬಂಧವನ್ನು ವಿರೋಧಿಸಿ ಈ ಕೃತ್ಯ ಎಸಗಿದ್ದು ಈತನನ್ನು ಬಂಧಿಸಲಾಗಿದ. ಮಿತ್ವಾರಾ ಗ್ರಾಮದಲ್ಲಿ, 24 ವರ್ಷದ ರಿಯಾಜ್ ಎಂಬ ವ್ಯಕ್ತಿ ತನ್ನ ಸಹೋದರಿಯ ಶಿರಚ್ಛೇದ ಮಾಡಿದ್ದಾನೆ. ಆಕೆ ತನ್ನ ಗ್ರಾಮದ ಅದೇ ಸಮುದಾಯದ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು. ಆಕೆ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿದ್ದಳು. ಈ ಸಂಬಂಧ ಯುವತಿಯ ತಂದೆ ದೂರು  ದಾಖಲಿಸಿದ್ದರು. ತಂಗಿಯ ಪ್ರೇಮದ ಬಗ್ಗೆ  ಕೋಪಗೊಂಡ ರಿಯಾಜ್ ಆಕೆಯ ಶಿರಚ್ಛೇದ ಮಾಡಿದ್ದಾನೆ. ಪೊಲೀಸರು ಗ್ರಾಮವನ್ನು ತಲುಪಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ-ಉತ್ತರ) ಅಶುತೋಷ್ ಮಿಶ್ರಾ ತಿಳಿಸಿದ್ದಾರೆ.

ಏನಿದು ಪ್ರಕರಣ?

ಫತೇಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಮಿತ್ವಾರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಿಯಾಜ್ ಎಂದು ಗುರುತಿಸಲಾದ ಆರೋಪಿಯು ತನ್ನ ಸಹೋದರಿ ಆಶಿಫಾಳ ಶಿರಚ್ಛೇದ ಮಾಡಿದ್ದಾನೆ. ಗ್ರಾಮದ ಚಾಂದ್ ಬಾಬು ಎಂಬಾತನ ಜೊತೆ ಆಶಿಫಾಗೆ ಇದ್ದ ಪ್ರೇಮ ಸಂಬಂಧವೇ ವಾದಕ್ಕೆ ಕಾರಣ. ಹಲವು ದಿನಗಳ ಹಿಂದೆ, ಚಾಂದ್ ಬಾಬು ಆಶಿಫಾಳನ್ನು ಕರೆದುಕೊಂಡು ಹೋಗಿದ್ದರು. ಆಕೆಯ ಕುಟುಂಬವು ಪೋಲಿಸ್ ದೂರು ದಾಖಲಿಸಿತ್ತು.

ಆಶಿಫಾಳ ಸಹೋದರ ರಿಯಾಜ್​​ಗೆ ತನ್ನ ಸಹೋದರಿ ಚಾಂದ್ ಬಾಬು ಜೊತೆಗಿನ ಪ್ರೇಮ ಸಂಬಂಧದ ಬಗ್ಗೆ ತೀವ್ರ ಸಿಟ್ಟಿತ್ತು. ಈ ಪ್ರೇಮ ಸಂಬಂಧದಿಂದ ಇವರಿಬ್ಬರ ನಡುವೆ ಜಗಳವಾಗಿತ್ತು. ಶುಕ್ರವಾರ ಮಧ್ಯಾಹ್ನ ಅಣ್ಣ ಮತ್ತು ತಂಗಿ ನಡುವೆ ವಾಗ್ವಾದ ನಡೆದಿದ್ದು, ಸಿಟ್ಟಿನ ಭರದಲ್ಲಿ ರಿಯಾಜ್ ಹರಿತವಾದ ಆಯುಧದಿಂದ ತಂಗಿಯ ತಲೆ ಕಡಿದಿದ್ದಾನೆ. ಕೃತ್ಯವೆಸಗಿದ ನಂತರ ಸಹೋದರಿಯ ಕತ್ತರಿಸಿದ ತಲೆಯನ್ನು ಕೈಯಲ್ಲಿ ಹಿಡಿದು ಮನೆಯಿಂದ ಹೊರಗೆ ಹೋಗಿದ್ದಾನೆ.

ಇದನ್ನೂ ಓದಿ: ಬಂಧಿತರಿಗೆ ಜೈಲಿನಲ್ಲೇ ಉಗ್ರ ತರಬೇತಿ ನೀಡಿದ್ದು ಹೇಗೆ ನಜೀರ್? ತನಿಖೆಗೆ ಆದೇಶಿಸಿದ ಎಡಿಜಿಪಿ

ಭಯಭೀತರಾದ ಗ್ರಾಮಸ್ಥರು ಕೂಡಲೇ ಫತೇಪುರ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಕ್ಷಿಪ್ರವಾಗಿ ಪ್ರತಿಕ್ರಿಯಿಸಿದ್ದು, ಆಶಿಫಾಳ ತಲೆಯನ್ನು ಹಿಡಿದುಕೊಂಡಿದ್ದ ಆತನನ್ನು ಸ್ಥಳದಲ್ಲೇ ಬಂಧಿಸಲಾಯಿತು.

ಪೊಲೀಸರು ಆಶಿಫಾಳ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಘಟನೆಯ ಉದ್ದೇಶ ಮತ್ತು ಸಂದರ್ಭಗಳ ಬಗ್ಗೆ ತನಿಖೆ ನಡೆಯುತ್ತಿದೆ. ರಿಯಾಜ್ ನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಭೀಕರ ಅಪರಾಧಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:50 pm, Fri, 21 July 23

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ