Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಲ್ಕು ಬಾರಿ ಪತಿಯನ್ನು ಬಿಟ್ಟು ಓಡಿಹೋಗಿದ್ದ ಪತ್ನಿ ಇನ್​ಸ್ಟಾಗ್ರಾಮ್ ರೀಲ್ಸ್ ಬಾಯ್​ಫ್ರೆಂಡ್ ಜೊತೆ ಪರಾರಿ

ಪಬ್ಜಿ, ರೀಲ್ಸ್, ಟಿಕ್​ಟಾಕ್​ನಂತಹ ಮೋಜಿನ ವೇದಿಕೆಗಳು ಸಂಸಾರವನ್ನು ಒಡೆಯುತ್ತಿರುವ ಪ್ರಕರಣ ಅಲ್ಲೊಂದು ಇಲ್ಲೊಂದು ನಡೆಯುತ್ತಿದೆ. ಅಂತಹದ್ದೇ ಒಂದು ಘಟನೆ ನೆಲಮಂಗಲ ಉತ್ತರ ತಾಲೂಕಿನಲ್ಲಿ ನಡೆದಿದೆ.

ನಾಲ್ಕು ಬಾರಿ ಪತಿಯನ್ನು ಬಿಟ್ಟು ಓಡಿಹೋಗಿದ್ದ ಪತ್ನಿ ಇನ್​ಸ್ಟಾಗ್ರಾಮ್ ರೀಲ್ಸ್ ಬಾಯ್​ಫ್ರೆಂಡ್ ಜೊತೆ ಪರಾರಿ
ಮನೋಹರ್ ಮತ್ತು ಅರ್ಪಿತಾ (ಎಡಚಿತ್ರ), ಇನ್​ಸ್ಟಾಗ್ರಾಮ್ ರೀಲ್ಸ್ ಮಾಡಿಕೊಂಡಿದ್ದ ದಿನಕರ್ (ಬಲಚಿತ್ರ)
Follow us
TV9 Web
| Updated By: Digi Tech Desk

Updated on:Jul 21, 2023 | 6:14 PM

ನೆಲಮಂಗಲ, ಜುಲೈ 21: ಮಹಿಳೆಯೊಬ್ಬಳು ತನ್ನ ಪತಿಯನ್ನೇ ತೊರೆದು ಇನ್​ಸ್ಟಾಗ್ರಾಮ್ (Instagram) ರೀಲ್ಸ್ ಮಾಡಿಕೊಂಡಿದ್ದ ಬಾಯ್​ಫ್ರೆಂಡ್ ಜೊತೆ ಪರಾರಿಯಾದ ಘಟನೆ ನೆಲಮಂಗಲ (Nelamangala) ಉತ್ತರ ತಾಲೂಕಿನ ಸೋಲದೇವನಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಮಹಿಳೆಯ ಪತಿ ಠಾಣೆಗೆ ದೂರು ನೀಡಿದ್ದಾರೆ. ಅಷ್ಟಕ್ಕೂ ಈ ಮಹಿಳೆ ಪತಿಯನ್ನು ತೊರೆದು ಮತ್ತೊಬ್ಬರ ಜೊತೆ ಓಡಿಹೋಗಿದ್ದು ಇದೇ ಮೊದಲೇನಲ್ಲ. ಈ ಹಿಂದೆಯೂ ಇಂತಹದ್ದೇ ದುಸ್ಸಾಹಸ ನಡೆಸಿದ್ದಳು ಎಂದು ತಿಳಿದುಬಂದಿದೆ.

ಮಂಡ್ಯ ಮೂಲದ ಅರ್ಪಿತಾ (23) ಮತ್ತು ನೆಲಮಂಗಲ ಉತ್ತರ ತಾಲೂಕಿನ ಸೋಲದೇವನಹಳ್ಳಿ ಮನೋಹರ್​ಗೆ ಏಳು ವರ್ಷಗಳ ಹಿಂದೆ ಮದುವೆಯಾಗಿದೆ. ಇವರ ಸಂಸಾರಕ್ಕೆ ಸಾಕ್ಷಿಯಾಗಿ ಇಬ್ಬರು ಮಕ್ಕಳಿದ್ದಾರೆ. ಆದರೆ, ಅರ್ಪಿತಾ ಮಾತ್ರ ತನ್ನ ಗಂಡನ ಜೊತೆ ಸರಿಯಾಗಿ ಬಾಳ್ವೆ ನಡೆಸದೆ ನಾಲ್ಕು ಬಾರಿ ಇತರರೊಂದಿಗೆ ಓಡಿಹೋಗಿ ವಾಪಸ್ ಪತಿ ಮನೆ ಸೇರಿದ್ದಳು.

ಇದನ್ನೂ ಓದಿ: PUBG Love: ಭಾರತ-ಪಾಕಿಸ್ತಾನ ಪಬ್ಜಿ ಲವ್​ ಸ್ಟೋರಿ, ಭಾರತ ಈಗ ನನ್ನ ದೇಶ ಎಂದ ಪಾಕ್ ಮಹಿಳೆ

ಹೀಗೆ ಇನ್​ಸ್ಟಾಗ್ರಾಮ್​ನಲ್ಲಿ ಕಾಲಕಳೆಯುತ್ತಿದ್ದ ಅರ್ಪಿತಾಳಿಗೆ ರೀಲ್ಸ್​​ ಮಾಡಿಕೊಂಡಿದ್ದ ದಿನಕರ್​ ಎಂಬಾತನ ಸಂರ್ಪಕವಾಗಿದೆ. ಇವರಿಬ್ಬರ ಸ್ನೇಹ ಎರಡು ವರ್ಷಗಳ ಹಿಂದೆಯೇ ಆಗಿತ್ತು. ಹೀಗೆ ಇಬ್ಬರು ರೀಲ್ಸ್​ ಮಾಡಿಕೊಂಡಿದ್ದರು. ತಾನು ಎರಡು ಮಕ್ಕಳ ತಾಯಿ, ಸಂಸಾರಸ್ಥೆ ಎಂಬುದನ್ನೂ ಲೆಕ್ಕಿಸದೆ ಅರ್ಪಿತಾ ದಿನಕರ್​ನನ್ನು ಪ್ರೀತಿಸಲಾರಂಭಿಸಿದ್ದಾಳೆ.

ಅದರಂತೆ, ಜುಲೈ 18 ರಂದು ಸೋಲದೇವನಹಳ್ಳಿಯಿಂದ ಅರ್ಪಿತಾ ದಿನಕರ್​ ಜೊತೆ ಪರಾರಿಯಾಗಿದ್ದಾಳೆ. ಮಾಹಿತಿ ತಿಳಿಯುತ್ತಿದ್ದಂತೆ ಮಹಿಳೆಯ ಪತಿ ಮನೋಹರ್ ಸೋಲದೇವನಹಳ್ಳಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್​ಸ್ಟಾಗ್ರಾಮ್ ರೀಲ್ಸ್, ಪಬ್ಜಿ, ಟಿಕ್​ಟಾಕ್​ನಂತರ ಮೋಜಿನ ವೇದಿಕೆಗಳಲ್ಲಿ ಸಣ್ಣ ಮಕ್ಕಳು, ಯುವಕ ಯುವತಿಯರು ಮಾತ್ರವಲ್ಲದೆ ಹಿರಿಯರೂ ಕಾಲಕಳೆಯುತ್ತಿದ್ದಾರೆ. ಕೆಲವರು ಟೈಮ್ ಪಾಸ್​ಗಾಗಿ ಇದನ್ನು ಬಳಕೆ ಮಾಡುತ್ತಿದ್ದರೆ, ಇನ್ನು ಕೆಲವರು ಬಳಕೆ ಮಾಡುತ್ತಲೇ ತಪ್ಪುದಾರಿ ಹಿಡಿಯುತ್ತಿದ್ದಾರೆ. ಇದರಿಂದ ಸಂಸಾರಗಳು ಒಡೆಯುತ್ತಿವೆ. ಇತ್ತೀಚೆಗೆ ಪಬ್ಜಿ ಆಡುತ್ತಿದ್ದ ಭಾರತದ ಉತ್ತರ ಪ್ರದೇಶ ರಾಜ್ಯದ ಯುವಕನೊಂದಿಗೆ ಪ್ರೇಮಾಂಕುರವಾಗಿ ಪಾಕಿಸ್ತಾನದ ಮಹಿಳೆಯೊಬ್ಬಳು ಪ್ರಿಯತಮನನ್ನು ಅರಸಿಕೊಂಡು ರಾಜ್ಯಕ್ಕೆ ಆಗಮಿಸಿದ್ದಳು.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:39 pm, Fri, 21 July 23

‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಆಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಆಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ