ಪಕ್ಕದ ಆಂಧ್ರದಿಂದ ಬೆಂಗಳೂರಿಗೆ ಮಾದಕ ಸರಬರಾಜು, ಜಾಲದ ಮೂಲ ಬೆನ್ನುಹತ್ತಿದ ಸಿಸಿಬಿ ಪೊಲೀಸರಿಗೆ ಸಿಕ್ಕಿದ್ದು ನಾಲ್ವರು ಮಹಿಳೆಯರು

ಆಂಧ್ರ ಪ್ರದೇಶದ ಚಿಂತಲಪಲ್ಲಿಯ ಅರಣ್ಯ ಪ್ರದೇಶಗಳಲ್ಲಿ ಸಿಂಥೆಟಿಕ್ ಡ್ರಗ್ಸ್ ತಯಾರಿಯಾಗುತ್ತಿದ್ದು ಅಲ್ಲಿಂದ ವಿವಿಧ ಮಾದಕ ಪದಾರ್ಥಗಳನ್ನು ಪಡೆಯುತ್ತಿದ್ದ ಆರೋಪಿ ಮಹಿಳೆಯರು, ರೈಲ್ವೆ ಅಧಿಕಾರಿಗಳ ಕಣ್ತಪ್ಪಿಸಲು ಮದುವೆ ಸಮಾರಂಭಗಳಿಗೆ ಹೊರಟವರಂತೆ ರೆಡಿಯಾಗಿ ಮಾದಕ ಪದಾರ್ಥಗಳನ್ನು ಪಾತ್ರೆ, ಸರಂಜಾಮುಗಳ ನಡುವೆ ಅಡಗಿಸಿಡುತ್ತಿದ್ದರು.

ಪಕ್ಕದ ಆಂಧ್ರದಿಂದ ಬೆಂಗಳೂರಿಗೆ ಮಾದಕ ಸರಬರಾಜು, ಜಾಲದ ಮೂಲ ಬೆನ್ನುಹತ್ತಿದ ಸಿಸಿಬಿ ಪೊಲೀಸರಿಗೆ ಸಿಕ್ಕಿದ್ದು ನಾಲ್ವರು ಮಹಿಳೆಯರು
ಪಕ್ಕದ ಆಂಧ್ರದಿಂದ ಬೆಂಗಳೂರಿಗೆ ಮಾದಕ ಸರಬರಾಜು, ಜಾಲದ ಮೂಲ ಬೆನ್ನುಹತ್ತಿದ ಸಿಸಿಬಿ ಪೊಲೀಸರಿಗೆ ಸಿಕ್ಕಿದ್ದು ನಾಲ್ವರು ಮಹಿಳೆಯರು
Follow us
TV9 Web
| Updated By: ಸಾಧು ಶ್ರೀನಾಥ್​

Updated on: Sep 29, 2022 | 7:02 PM

ಬೆಂಗಳೂರು: ಬೆಂಗಳೂರಿಗೆ ಮಾದಕ ಸರಬರಾಜು ಆಗುವುದು ಇದು ಮೊದಲೇನಲ್ಲ. ಕಾಲೇಜು ಯುವಕರು, ಐಟಿ-ಬಿಟಿ ಉದ್ಯೋಗಿಗಳನ್ನ ಹೆಚ್ಚು ಹೆಚ್ಚು ತುಂಬಿಸಿಕೊಂಡು ಅಗಾಧವಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರವು ಮಾದಕ ದಂಧೆಕೋರರಿಗೆ ಹಾಟ್ ಸ್ಪಾಟ್ ಆಗಿಬಿಟ್ಟಿದೆ. ಪ್ರತಿನಿತ್ಯ ಮಾದಕ ಪದಾರ್ಥಗಳನ್ನ ಪೊಲೀಸರು ಜಪ್ತಿ ಮಾಡುತ್ತಲೇ ಇದ್ದರೂ ಸಹ ಅದು 10 % ಮಾತ್ರವೇ ಆಗಿದೆ. ಇನ್ನುಳಿದ 90 ಪ್ರತಿಶತ ಒಂದಿಲ್ಲೊಂದು ರೀತಿ ದಂಧೆಕೋರರ ಮೂಲಕ ವ್ಯಸನಿಗಳ ಕೈ ಸೇರುತ್ತಲೇ ಇದೆ.

ಈ ಬಾರಿ ಅದೇ ರೀತಿ ನಾಲ್ವರು ಮಾದಕ ದಂಧೆಕೋರರನ್ನ ( Drugs supply) ಪೊಲೀಸರು ಬಂಧಿಸಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಬಂಧಿತ ನಾಲ್ವರೂ ಸಹ ಮಹಿಳೆಯರು. ಅದರಲ್ಲಿಯೂ ನಮ್ಮ ನೆರೆಯ ರಾಜ್ಯದ ಅರಣ್ಯ ಪ್ರದೇಶದಿಂದ ಮಾದಕ ಪದಾರ್ಥಗಳಗಳನ್ನ ನೇರವಾಗಿ ದಂಧೆಕೋರರಿಗೆ ತಲುಪಿಸುತ್ತಿದ್ದವರು ಇವರು. ಆಂಧ್ರ ಪ್ರದೇಶದಿಂದ ಸರಬರಾಜಾಗುತ್ತಿದ್ದ ಮಾದಕದ ಮೂಲ ಬೆನ್ನತ್ತಿ ಹೊರಟ ಸಿಸಿಬಿ ಮಾದಕ ನಿಗ್ರಹ ದಳ ಆಂಧ್ರಪ್ರದೇಶ ಮೂಲದ ನಾಲ್ವರು ಮಹಿಳೆಯನ್ನು ಬಂಧಿಸಿದೆ. ಪುಷ್ಪಾ, ವಿಜಯಾ, ಪೊರನಮ್ಮ ಹಾಗೂ ದೇವಿ ಬಂಧಿತ ಆರೋಪಿಗಳು.

ಜೂನ್‌ನಲ್ಲಿ ವಿವೇಕ ನಗರ ಠಾಣಾ ಪೊಲೀಸರು ಮಾದಕ ವಸ್ತು ಸರಬರಾಜಿನಲ್ಲಿ ಸಕ್ರಿಯನಾಗಿದ್ದ ವಿದೇಶಿ ಮೂಲದ ಡಿಜೆ ಒಬ್ಬನನ್ನು ಬಂಧಿಸಿದ್ದರು. ಬಳಿಕ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು. ಆರೋಪಿಗೆ ಮಾದಕ ಪದಾರ್ಥಗಳ ಪೂರೈಕೆ ಆಂಧ್ರ ಪ್ರದೇಶದಿಂದ ಆಗುತ್ತಿರುವುದರ ಮೂಲ ಹುಡುಕಿ ಹೊರಟ ಸಿಸಿಬಿ ಪೊಲೀಸರು (Central Crime Branch-CCB Bengaluru) ವಿಶೇಷ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನ ಹೆಡೆಮುರಿಕಟ್ಟಿದ್ದಾರೆ. ಪ್ರಶಾಂತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬಂದು ಪುಟ್ಟಪರ್ತಿ ಬಳಿ ಬೆಂಗಳೂರು ಮೂಲದ ಪೆಡ್ಲರ್ಸ್​ಗೆ ಗಾಂಜಾ ಪೂರೈಸುವ ಕೆಲಸ ಮಾಡುತ್ತಿದ್ದ ನಾಲ್ವರು ಮಹಿಳೆಯರನ್ನು ಬಂಧಿಸಿದ್ದಾರೆ.

ಆಂಧ್ರ ಪ್ರದೇಶದ ಚಿಂತಲಪಲ್ಲಿಯ ಅರಣ್ಯ ಪ್ರದೇಶಗಳಲ್ಲಿ ಸಿಂಥೆಟಿಕ್ ಡ್ರಗ್ಸ್ ತಯಾರಿಯಾಗುತ್ತಿದ್ದು ಅಲ್ಲಿಂದ ವಿವಿಧ ಮಾದಕ ಪದಾರ್ಥಗಳನ್ನು ಪಡೆಯುತ್ತಿದ್ದ ಆರೋಪಿ ಮಹಿಳೆಯರು, ರೈಲ್ವೆ ಅಧಿಕಾರಿಗಳ ಕಣ್ತಪ್ಪಿಸಲು ಮದುವೆ ಸಮಾರಂಭಗಳಿಗೆ ಹೊರಟವರಂತೆ ರೆಡಿಯಾಗಿ ಮಾದಕ ಪದಾರ್ಥಗಳನ್ನು ಪಾತ್ರೆ, ಸರಂಜಾಮುಗಳ ನಡುವೆ ಅಡಗಿಸಿಡುತ್ತಿದ್ದರು. ನಂತರ ರೈಲಿನಲ್ಲಿ ಅವುಗಳನ್ನು ಸಾಗಿಸಿ ನಿಗದಿಯಾದ ಸ್ಥಳಗಳಲ್ಲಿ ಬೆಂಗಳೂರು ಮೂಲದ ವ್ಯಕ್ತಿಗಳಿಗೆ ಡಿಲೆವರಿ ನೀಡಿ ವಾಪಸಾಗುತ್ತಿದ್ದರು.

ವಿವೇಕನಗರ ಠಾಣಾ ಪೊಲೀಸರಿಂದ ಬಂಧಿತನಾಗಿದ್ದ ವಿದೇಶಿ ಮೂಲದ ಡಿಜೆಯನ್ನು ವಿಚಾರಣೆ ನಡೆಸಿ, ಕಾರ್ಯಾಚರಣೆ ನಡೆಸಿದ ಸಿಸಿಬಿ‌ ಪೊಲೀಸರು, ಬರೋಬ್ಬರಿ 7 ಕೋಟಿ 80 ಲಕ್ಷ ಮೌಲ್ಯದ 1 ಕೆ. ಜಿ 4 ಗ್ರಾಂ ಮಾದಕ ಮಾತ್ರೆ, 8 ಕೆಜಿ ಹ್ಯಾಶಿಸ್​ ಆಯಿಲ್, 10 ಕೆಜಿ ಗಾಂಜಾ ಸಹಿತ ಆರೋಪಿ ಮಹಿಳೆಯರನ್ನ ಬಂಧಿಸಿದ್ದಾರೆ. ಆದರೆ ಚಿಂತಪಲ್ಲಿ ಅರಣ್ಯ ಪ್ರದೇಶದಲ್ಲಿ ಕುಳಿತು ಇಡೀ ಜಾಲ ನಡೆಸುತ್ತಿದ್ದ ಪ್ರಮುಖ ಆರೋಪಿ ನಾಪತ್ತೆಯಾಗಿದ್ದು, ಆತನ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆಸಲಾಗಿದೆ. (ವರದಿ: ವಿನಯ್)

ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು