ಬ್ಯಾಂಕ್ ಗ್ರಾಹಕರೊಂದಿಗೆ ಒಳ ಸಂಚು; ಒಂದೂವರೆ ಕೋಟಿ ರೂ. ನುಂಗಿ ನೀರು ಕುಡಿದ ಬ್ಯಾಂಕ್ ಮ್ಯಾನೇಜರ್ ಪರಾರಿ

ಬ್ಯಾಂಕಿನ ಸಿಸ್ಟಮ್ ಸಸ್ಪೆನ್ ಖಾತೆಗೆ ಖರ್ಚು ಹಾಕಿ ಗ್ರಾಹಕರ ಖಾತೆಗೆ ಹಣ ಜಮಾ ಮಾಡಿರುವ ಆರೋಪ ಮಾಡಲಾಗಿದೆ. ಘಟನೆಯ ಕುರಿತು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ಯಾಂಕ್ ಗ್ರಾಹಕರೊಂದಿಗೆ ಒಳ ಸಂಚು; ಒಂದೂವರೆ ಕೋಟಿ ರೂ. ನುಂಗಿ ನೀರು ಕುಡಿದ ಬ್ಯಾಂಕ್ ಮ್ಯಾನೇಜರ್ ಪರಾರಿ
ನ್ಯೂ ಇಂಗ್ಲೀಷ್ ಸ್ಕೂಲ್ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್
Updated By: ಗಂಗಾಧರ​ ಬ. ಸಾಬೋಜಿ

Updated on: Apr 23, 2022 | 6:48 PM

ಕಾರವಾರ: ಬ್ಯಾಂಕ್ (bank) ಗ್ರಾಹಕರೊಂದಿಗೆ ಒಳ ಸಂಚು ಮಾಡಿ ಸುಮಾರು ಒಂದೂವರೆ ಕೋಟಿ ರೂ. ಹಣ ದುರುಪಯೋಗ ಪಡಿಸಿಕೊಂಡು ಬ್ಯಾಂಕ್ ಮ್ಯಾನೇಜರ್ ಪರಾರಿಯಾಗಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ನಗರ ಭಾಗದ ನ್ಯೂ ಇಂಗ್ಲೀಷ್ ಸ್ಕೂಲ್ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್​ನಲ್ಲಿ ನಡೆದಿದೆ. ಆರೋಪಿಯನ್ನು ಮೂಲತಃ ಮಂಗಳೂರಿನ ಕಾವೂರು ಬೋಳಪು ಗುಡ್ಡೆ ನಿವಾಸಿ ಅನುಪ್ ಪೈ ಎಂಬ ಬ್ಯಾಂಕ್ ಮ್ಯಾನೇಜರ್​ ನಿಂದ ಹಣ ದುರಪಯೋಗ ಪಡಿಸಿಕೊಳ್ಳಲಾಗಿದೆ. ಬ್ಯಾಂಕಿನ ಸಿಸ್ಟಮ್ ಸಸ್ಪೆನ್ ಖಾತೆಗೆ ಖರ್ಚು ಹಾಕಿ ಗ್ರಾಹಕರ ಖಾತೆಗೆ ಹಣ ಜಮಾ ಮಾಡಿರುವ ಆರೋಪ ಮಾಡಲಾಗಿದೆ. ಘಟನೆಯ ಕುರಿತು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

ಮೊಬೈಲ್ ಕದ್ದು ಪರಾರಿ ಆಗುತ್ತಿದ್ದ ಆರೋಪಿಗೆ ಸಾರ್ವಜನಿಕರಿಂದ ಗೂಸಾ:

ಚಿತ್ರದುರ್ಗ: ಮೊಬೈಲ್ ಕದ್ದು ಪರಾರಿ ಆಗುತ್ತಿದ್ದ ಆರೋಪಿಗೆ ಸಾರ್ವಜನಿಕರು ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿರುವಂತಹ ಘಟನೆ ಜಿಲ್ಲೆ ಚಳ್ಳಕೆರೆ ಪಟ್ಟಣದಲ್ಲಿ ನಡೆದಿದೆ. ಪೊಲೀಸ್ ಠಾಣೆ ಬಳಿ ಕಂಪೌಂಡ್ ಹಾರಿ ತಪ್ಪಿಸಿಕೊಳ್ಳಲು ಆರೋಪಿ ಯತ್ನಿಸಿದ್ದು, ಮೊಬೈಲ್ ಕಳ್ಳನನ್ನು ಹಿಡಿದು ಜನರು ಪೊಲೀಸರಿಗೆ ಒಪ್ಪಿಸಿದ್ದಾರೆ. ಚಿತ್ರದುರ್ಗ‌ ತಾಲೂಕಿನ ಬೋವಿಹಟ್ಟಿ ಮೂಲದ ಆರೋಪಿ ಮೊಬೈಲ್ ಕಳ್ಳತನದ ಆರೋಪಿ ಜಗದೀಶ ಪೊಲೀಸರ ವಶವಾಗಿದ್ದಾನೆ. ಆರೋಪಿಯನ್ನು ಆಟೋಗೆ ಹತ್ತಿಸಿಕೊಂಡು ಪೊಲೀಸರು ಥಳಿಸಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ:

LSG vs MI Prediction Playing XI IPL 2022: ಲಕ್ನೋ ವಿರುದ್ದ ಗೆಲುವಿನ ನಿರೀಕ್ಷೆಯಲ್ಲಿ ಮುಂಬೈ: ಉಭಯ ತಂಡಗಳ ಪ್ಲೇಯಿಂಗ್ 11

Gold-Silver Rate: ಬೆಂಗಳೂರು, ಮುಂಬೈ, ದೆಹಲಿ ಸೇರಿ ದೇಶದ ಪ್ರಮುಖ ನಗರಗಳಲ್ಲಿ ಏಪ್ರಿಲ್ 23ರ ಚಿನ್ನ, ಬೆಳ್ಳಿ ದರದ ವಿವರ ಇಲ್ಲಿದೆ