AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೂವರೆ ವರ್ಷದ ಮಗಳ ದೇಹ ಕತ್ತರಿಸಿ, ಲಿವರ್ ತಿಂದ ತಾಯಿ!

ಜಾರ್ಖಂಡ್​ನಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬಳು ತನ್ನ ಒಂದೂವರೆ ವರ್ಷದ ಮಗುವಿನ ದೇಹವನ್ನು ಕತ್ತರಿಸಿ, ಆ ಮಗುವಿನ ಲಿವರ್ ಅನ್ನು ತಿಂದಿದ್ದಾಳೆ. ಈ ಘಟನೆ ಭಾರೀ ಆಘಾತ ಉಂಟುಮಾಡಿದ್ದು, ಎಲ್ಲೆಡೆ ಚರ್ಚೆಗೊಳಗಾಗಿದೆ. ನರಬಲಿಗಾಗಿ ತನ್ನ ಪುಟ್ಟ ಕಂದಮ್ಮನನ್ನೇ ಬಲಿ ನೀಡಿದ ತಾಯಿಯ ಅಮಾನವೀಯ ಕತೆ ಎಂಥವರ ಕರುಳನ್ನೂ ಹಿಂಡುವಂತಿದೆ.

ಒಂದೂವರೆ ವರ್ಷದ ಮಗಳ ದೇಹ ಕತ್ತರಿಸಿ, ಲಿವರ್ ತಿಂದ ತಾಯಿ!
ಸಾಂದರ್ಭಿಕ ಚಿತ್ರ
ಸುಷ್ಮಾ ಚಕ್ರೆ
|

Updated on:Nov 15, 2024 | 7:20 PM

Share

ಪಲಾಮು: ಮೂಢನಂಬಿಕೆಗಳು ಇನ್ನೂ ನಮ್ಮ ಸಮಾಜದ ಒಂದು ಭಾಗವಾಗಿದೆ. ಅವುಗಳಲ್ಲಿ ಬಹಳಷ್ಟು ಕೇವಲ ನಂಬಿಕೆಗಳ ರೂಪದಲ್ಲಿ ನಮ್ಮಲ್ಲಿ ಚಾಲ್ತಿಯಲ್ಲಿದ್ದರೆ ಇನ್ನು ಕೆಲವು ಮಾಟಮಂತ್ರ ಸೇರಿದಂತೆ ಅತ್ಯಂತ ಅಪಾಯಕಾರಿ ರೂಪದಲ್ಲಿಯೂ ಚಾಲ್ತಿಯಲ್ಲಿವೆ. ಜಾರ್ಖಂಡ್​ನಲ್ಲಿ ನರಬಲಿಯ ಭೀಕರ ಪ್ರಕರಣವೊಂದರಲ್ಲಿ, ಜಾರ್ಖಂಡ್‌ನ ಪಲಾಮುದಲ್ಲಿ ಮಹಿಳೆಯೊಬ್ಬರು ತನ್ನ ಒಂದೂವರೆ ವರ್ಷದ ಮಗಳನ್ನು ‘ಬಲಿ’ ನೀಡಿ, ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿ ನಂತರ ಆಕೆಯ ಲಿವರ್ ತಿಂದಿದ್ದಾಳೆ.

ಈ ಘಟನೆಯು ಭಾರೀ ಆಘಾತ ಉಂಟುಮಾಡಿದೆ. ತನ್ನ ಸ್ವಂತ ಅಂಬೆಗಾಲಿಡುವ ಮಗಳ ಈ ಕ್ರೂರ ಹತ್ಯೆ ಮಾಡಿದ ಮಹಿಳೆಯನ್ನು ಬಂಧಿಸಲಾಗಿದೆ. ಜಾರ್ಖಂಡ್‌ನ ಪಲಾಮು ಜಿಲ್ಲೆಯ ನಿವಾಸಿ ಗೀತಾ ದೇವಿ ಎಂಬಾಕೆಯನ್ನು ‘ನರಬಲಿ’ಯ ಭಾಗವಾಗಿ ತನ್ನ ಸ್ವಂತ ಮಗಳನ್ನು ಕೊಂದು, ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿ ನಂತರ ಮಗುವಿನ ಲಿವರ್ ತಿಂದಿದ್ದಕ್ಕಾಗಿ ಬಂಧಿಸಲಾಗಿದೆ. ಪೊಲೀಸರ ವಶದಲ್ಲಿರುವ ಮಹಿಳೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಹುಸೇನಾಬಾದ್ ಠಾಣಾ ವ್ಯಾಪ್ತಿಯ ಖಾರದ್ ಗ್ರಾಮದಲ್ಲಿ ಈ ಅಮಾನುಷ ಘಟನೆ ನಡೆದಿದೆ.

ಆರೋಪಿ ಮಹಿಳೆ ಪೊಲೀಸರ ವಿಚಾರಣೆಯಲ್ಲಿ ತಾನು ಮಾಡಿದ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ತಾನು ಮೊದಲು ಹತ್ತಿರದ ಮಾರುಕಟ್ಟೆಗೆ ಹೋಗಿ ಅಲ್ಲಿಂದ ಬಳೆಗಳು, ಬಟ್ಟೆಗಳು ಮತ್ತು ಪೂಜೆಗೆ ಬೇಕಾದ ವಸ್ತುಗಳನ್ನು ಖರೀದಿಸಿದೆ ಎಂದು ಮಹಿಳೆ ಪೊಲೀಸರ ಮುಂದೆ ಬಹಿರಂಗಪಡಿಸಿದ್ದಾಳೆ. ಅದೇ ದಿನ ಸಂಜೆ, ಅವಳು ತನ್ನ ಒಂದೂವರೆ ವರ್ಷದ ಮಗಳೊಂದಿಗೆ ತನ್ನ ಮನೆಯಿಂದ ಒಂದೆರಡು ಕಿಲೋಮೀಟರ್ ದೂರದಲ್ಲಿರುವ ಸಿಕ್ನಿ ಬರ್ವಧೋರಾ ಕಾಡಿಗೆ ಹೋಗಿದ್ದಾಳೆ.

ಇದನ್ನೂ ಓದಿ: Fact Check: ಇದು ವಕ್ಫ್ ಮಸೂದೆ ವಿರುದ್ಧ ಕಾಂಗ್ರೆಸ್ ಆಯೋಜಿಸಿರುವ ಕಾರ್ಯಕ್ರಮ ಎಂದು ಫೇಕ್ ವಿಡಿಯೋ ವೈರಲ್

ಆ ಮಹಿಳೆ ತನ್ನ ಮತ್ತು ಮಗಳ ಬಟ್ಟೆಗಳನ್ನು ತೆಗೆದು ‘ಪೂಜೆ’ ಮಾಡಿ ನಂತರ ಬೆತ್ತಲೆ ಸ್ಥಿತಿಯಲ್ಲಿ ಸ್ವಲ್ಪ ಕಾಲ ನೃತ್ಯ ಮಾಡಿದ್ದಾಳೆ. ಇದರ ನಂತರ, ಆಕೆ ತನ್ನ ಒಂದೂವರೆ ವರ್ಷದ ಮಗಳನ್ನು ಚಾಕುವಿನಿಂದ ಕತ್ತು ಸೀಳಿ ಕೊಂದಿದ್ದಾಳೆ. ಅವಳು ಅದೇ ಚಾಕುವಿನಿಂದ ತನ್ನ ಮಗಳ ದೇಹವನ್ನು ತುಂಡುಗಳಾಗಿ ಕತ್ತರಿಸಿ ನಂತರ ಆ ದೇಹದ ಭಾಗಗಳ ಮೇಲೆ ಕುಳಿತು ತನ್ನ ಮಗಳ ಲಿವರ್ ಕಚ್ಚಿ ತಿಂದಿದ್ದಾಳೆ.

ನಂತರ ಆಕೆ ಮಗಳ ದೇಹದ ಭಾಗಗಳನ್ನು ನೆಲದಲ್ಲಿ ಹೂತು ಬೆತ್ತಲೆಯಾಗಿ ಮನೆಗೆ ಹೋಗಿದ್ದಾಳೆ. ಆಕೆಯನ್ನು ಆ ಸ್ಥಿತಿಯಲ್ಲಿ ನೋಡಿದ ಸುತ್ತಮುತ್ತಲಿನವರು ಆಕೆಯ ಸಂಬಂಧಿಕರಿಗೆ ಮಾಹಿತಿ ನೀಡಿದರು. ಆ ಮಹಿಳೆಯ ಅತ್ತೆ ತನ್ನ ಮೊಮ್ಮಗಳ ಬಗ್ಗೆ ಕೇಳಿದಾಗ, ಅವಳು ತಾನೇ ತನ್ನ ಮಗಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಆ ಮಹಿಳೆಯ ಪತಿ ನವದೆಹಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆ ಮಹಿಳೆ ನರಬಲಿ ನೀಡಿದ್ದು, ಬ್ಲ್ಯಾಕ್ ಮ್ಯಾಜಿಕ್ ಕಲಿಯುವುತ್ತಿರುವುದನ್ನು ಒಪ್ಪಿಕೊಂಡಿದ್ದಾಳೆ.

ಇದನ್ನೂ ಓದಿ: ಮಡಿಕೇರಿ: ಗೋವಾದಲ್ಲಿ ಸಫಿಯಾ ಕೊಲೆ ಪ್ರಕರಣ, 18 ವರ್ಷಗಳ ಬಳಿಕ ಬಾಲಕಿ ಅಂತ್ಯ ಸಂಸ್ಕಾರ

ಕೂಡಲೇ ಆಕೆಯ ಅತ್ತೆ ಪೊಲೀಸರಿಗೆ ಹಾಗೂ ತನ್ನ ಮಗನಿಗೆ ಈ ವಿಷಯ ತಿಳಿಸಿದರು. ನಂತರ ಮಹಿಳೆಯನ್ನು ಬಂಧಿಸಲಾಯಿತು ಮತ್ತು ಅಪರಾಧದ ಸ್ಥಳಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಚಿಕ್ಕ ಮಗುವಿನ ವಿರೂಪಗೊಂಡ ದೇಹವನ್ನು ಬೆತ್ತಲೆ ಸ್ಥಿತಿಯಲ್ಲಿ ಹೂತುಹಾಕಿರುವುದು ಪತ್ತೆಯಾಗಿದೆ.

ತಾನು ಮಾಟ-ಮಂತ್ರವನ್ನು ಕಲಿತಿರುವುದಾಗಿ ಆಕೆ ತಪ್ಪೊಪ್ಪಿಕೊಂಡಿದ್ದಾಳೆ. ಅದಕ್ಕಾಗಿ ತನ್ನ ಮಗಳು ಅಥವಾ ಗಂಡನ ಪ್ರಾಣತ್ಯಾಗ ಮಾಡಿದರೆ ಮಂತ್ರವನ್ನು ಸಾಧಿಸುವ ಕನಸುಗಳನ್ನು ಹೊಂದಿದ್ದಳು ಎಂದು ಹೇಳಿದ್ದಾಳೆ. ಹೀಗಾಗಿ, ಮಗಳನ್ನು ಬಲಿ ಕೊಡಲು ಆಕೆ ನಿರ್ಧರಿಸಿದ್ದಳು ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:17 pm, Fri, 15 November 24