ಕಲಬುರಗಿ, ಜನವರಿ 12: ತೆಲಂಗಾಣ ರಾಜ್ಯಪಾಲನಾಗಿದ್ದೇನೆಂದು ಹೇಳಿ 3.8 ಲಕ್ಷ ರೂ. ವಂಚನೆ (Fraud) ಮಾಡಿರುವಂತಹ ಘಟನೆ ನಡೆದಿದ್ದು, ನಗರದ ಬಜಾರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಕಲಬುರಗಿಯ ಶಾಸ್ತ್ರಿನಗರ ನಿವಾಸಿ ಪ್ರೇಮಲತಾ ವಿಶ್ವನಾಥ್ಗೆ ಕಲಬುರಗಿಯ ಎಂ.ಬಿ.ನಗರ ನಿವಾಸಿ ಶಾಂತಕುಮಾರ್ ಜೆಟ್ಟೂರು ವಂಚನೆ ಮಾಡಲಾಗಿದೆ. ಪ್ರೇಮಲತಾ ಕುಟುಂಬಕ್ಕೆ ಮೊದಲಿನಿಂದಲೂ ವಂಚಕ ಶಾಂತಕುಮಾರ್ ಜೆಟ್ಟೂರು ಪರಿಚಯವಿದ್ದ. ಇತ್ತಿಚೆಗೆ ಸರ್ಕಾರಿ ಪಾಸಿಂಗ್ ವಾಹನದಲ್ಲಿ ಮನೆಗೆ ಬಂದು ನಂಬಿಕೆ ಬರುವಂತೆ ಮಾಡಿದ್ದ. ತೆಲಂಗಾಣ ರಾಜ್ಯಪಾಲನಾಗಿದ್ದೇನೆ. ಹಣದ ಅವಶ್ಯಕತೆ ಇದೆ ಎಂದು 3.8 ಲಕ್ಷ ರೂ. ಹಣವನ್ನು ಪಡೆದು ಬಳಿಕ ಕೊಡದೆ ವಂಚನೆ ಮಾಡಿದ್ದಾನೆ.
ದೇವನಹಳ್ಳಿ: ಬ್ಯಾಂಕ್ನಲ್ಲಿಟ್ಟಿದ್ದ ಸಾವಿರಾರು ರೂ. ಹಣ ರಾತ್ರೋ ರಾತ್ರಿ ಮಾಯವಾಗಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮದಲ್ಲಿ ನಡೆದಿದೆ. ಯೂನಿಯನ್ ಬ್ಯಾಂಕ್ ಖಾತೆಯಲ್ಲಿಟ್ಟಿದ್ದ ಹಣ ಇದ್ದಕ್ಕಿದ್ದಂತೆ ಮಾಯವಾಗಿದೆ ಎಂದು ಹತ್ತಾರು ಜನರು ಇದೇ ರೀತಿ ಆರೋಪ ಮಾಡಿದ್ದಾರೆ. ಖಾತೆಯಲ್ಲಿದ್ದ ಉಳಿತಾಯ ಹಣ ಕಳೆದುಕೊಂಡು ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಏಳು ಜನ ಡ್ರಗ್ ಪೆಡ್ಲರ್ಗಳನ್ನ ಬಂಧಿಸಿದ ಸಿಸಿಬಿ ಪೊಲೀಸರು
ಯಾವ ಕಾರಣಕ್ಕೆ ಹಣ ಕಟ್ ಆಗಿದೆ ಮತ್ತು ಬ್ಯಾಂಕ್ ಸಿಬ್ಬಂದಿಗಳು ಸಮರ್ಪಕ ಉತ್ತರ ಕೊಡುತ್ತಿಲ್ಲ ಅಂತ ಆಕ್ರೋಶ ಹೊರಹಾಕಿದ್ದಾರೆ. ಕೆಲ ರೈತರು ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ಗೆ ಥಂಬ್ ನೀಡಿ ಬಂದ ನಂತರ ಖಾತೆಯಲ್ಲಿದ್ದ ಹಣ ಮಾಯವಾಗಿದೆ. ಯಾರು ಯಾವ ಖಾತೆಗೆ ಹಣ ವರ್ಗಾವಣೆಯಾಗಿದೆ ಅಂತ ತಿಳಿಸುವಂತೆ ಒತ್ತಾಯಿಸಿದ್ದಾರೆ.
ಬೆಂಗಳೂರು: ಮನೆಗಳ್ಳತನ ಮಾಡಿ ಎಸ್ಕೇಪ್ ಆಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಣಿಕಂಠ, ಸಂಜಯ್ ಬಂಧಿತ ಆರೋಪಿಗಳು. ಬಂಧಿತರಿಂದ 7 ಲಕ್ಷ ಮೌಲ್ಯದ 121 ಗ್ರಾಂ.ಚಿನ್ನ, 1 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ. ಸದ್ಯ ರಾಜಗೋಪಾಲನಗರ ಪೊಲೀಸರು ತನಿಖೆ ನಡೆಸಿದ್ದಾರೆ. ರಾಜಗೋಪಾಲನಗರದ ಮನೆಯೊಂದರ ಹಳ್ಳಿಯಲ್ಲಿ ಕೃತ್ಯ ಎಸಗಿದ್ದರು. ಮನೆಯಲ್ಲಿದ್ದ ಚಿನ್ನಾಭರಣ, ನಗದು ಕದ್ದು ಪರಾರಿಯಾಗಿದ್ದರು.
ಇದನ್ನೂ ಓದಿ: ಐಎಎಸ್, ಐಪಿಎಸ್ ಕನಸು ಕಂಡವ ಮಾಡಿದ್ದು ಉದ್ಯಮಿಯ ಕಿಡ್ನಾಪ್! ಇಬ್ಬರು ಅರೆಸ್ಟ್
ಈ ಹಿಂದೆ ನಾಲ್ವರನ್ನು ಬಂಧನ ಮಾಡಿದ್ದ ಪೊಲೀಸರು, ಬಳಿಕ ಇಂದು ಪ್ರಕರಣದ ಪ್ರಮುಖ ಆರೋಪಿ ಮಣಿಕಂಠನನ್ನು ಬಂಧಿಸಿದ್ದರು. ರಾಜಗೋಪಾಲನಗರದ ರೌಡಿಶೀಟ್ ಸಹ ಹೊಂದಿದ್ದು, ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಹಲವು ಭಾರಿ ಬಂಧನವಾದರೂ ಮತ್ತದೆ ಕೃತ್ಯ ಎಸಗುತ್ತಿದ್ದ.
ಮತ್ತಷ್ಟ ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:16 pm, Fri, 12 January 24