AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kalaburagi News: ಮರ್ಮಾಂಗ ಕತ್ತರಿಸಿ ಜೆಡಿಎಸ್ ಮಾಜಿ ಕಾರ್ಯಕರ್ತನ ಬರ್ಬರ ಹತ್ಯೆ

ಜೆಡಿಎಸ್ ಮಾಜಿ ಕಾರ್ಯಕರ್ತರೊಬ್ಬರನ್ನು ಮರ್ಮಾಂಗ ಕತ್ತರಿಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.

Kalaburagi News: ಮರ್ಮಾಂಗ ಕತ್ತರಿಸಿ ಜೆಡಿಎಸ್ ಮಾಜಿ ಕಾರ್ಯಕರ್ತನ ಬರ್ಬರ ಹತ್ಯೆ
ಜೆಡಿಎಸ್ ಮಾಜಿ ಕಾರ್ಯಕರ್ತನ ಬರ್ಬರ ಹತ್ಯೆImage Credit source: HT Photo
TV9 Web
| Updated By: Digi Tech Desk|

Updated on:Nov 17, 2022 | 2:39 PM

Share

ಕಲಬುರಗಿ: ಜನತಾದಳ (ಜಾತ್ಯತೀತ) ಮಾಜಿ ಕಾರ್ಯಕರ್ತ ಮಲ್ಲಿಕಾರ್ಜುನ್ ಮುತ್ಯಾಲ್ (64) ಎಂಬವರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಬುಧವಾರ ನಡೆದಿದೆ. ಪೊಲೀಸರ ಪ್ರಕಾರ, ದಾಳಿಕೋರರು ಮಲ್ಲಿಕಾರ್ಜಯನ್ ಅವರ ಜನನಾಂಗವನ್ನು ಕತ್ತರಿಸಿ ಅವರ ತಲೆಗೆ ಕಲ್ಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಮುತ್ಯಾಲ್ ಅವರು ತಮ್ಮ ಎಲೆಕ್ಟ್ರಿಕಲ್ ಅಂಗಡಿಗೆ ಹೋಗಿದ್ದರು. ರಾತ್ರಿ ತಮ್ಮದೇ ಅಂಗಡಿಯಲ್ಲಿ ಮಲಗಿದ್ದ ಮುತ್ಯಾಲ್, ಬೆಳಗ್ಗೆ ಮನೆಗೆ ವಾಪಸ್ ಬಂದಿರಲಿಲ್ಲ. ಅನುಮಾನಗೊಂಡ ಅವರ ಮಗ ಶ್ರೀನಿವಾಸ್ ಹುಡುಕಲು ಹೋದಾಗ ಅವರ ಅಂಗಡಿಯ ಹಿಂಭಾಗದ ತೆರೆದ ಸ್ಥಳದಲ್ಲಿ ರಕ್ತದ ಮಡುವಿನಲ್ಲಿ ತಂದೆಯ ಶವ ಪತ್ತೆಯಾಗಿದೆ. ಈ ಬಗ್ಗೆ ಶ್ರೀನಿವಾಸ್ ಅವರು ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಸೇಡಂ ಪೊಲೀಸರು ಪರಿಶೀಲನೆ ನಡೆಸಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಕಲಬುರಗಿ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್, ನಾವು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಯಾರು ಕೃತ್ಯ ಎಸಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗುವುದು. ನಮ್ಮಲ್ಲಿರುವ ಕೆಲವು ನಿರ್ದಿಷ್ಟ ಸುಳಿವುಗಳನ್ನು ಆಧರಿಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಗುವುದು. ಪ್ರಾಥಮಿಕ ತನಿಖೆ ವೇಳೆ ಇದು ರಾಜಕೀಯ ಕೊಲೆ ಎಂದು ತೋರುತ್ತಿಲ್ಲ. ಆದರೆ ನಾವು ಎಲ್ಲಾ ಕೋನಗಳಿಂದ ಪ್ರಕರಣವನ್ನು ತನಿಖೆ ಮಾಡುತ್ತಿದ್ದೇವೆ ಎಂದರು.

ಸೇಡಂನ ಕೋಲಿ ಕಬ್ಬಲಿಗ ಸಮುದಾಯದ ಮುಖಂಡರಾಗಿದ್ದ ಮುತ್ಯಾಲ್ ಅವರು ಸೋಮವಾರ ಕಲಬುರಗಿಯಲ್ಲಿ ನಡೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆದರೆ, ಕಾರಣಾಂತರಗಳಿಂದ ಅವರು ಪಕ್ಷಕ್ಕೆ ಸೇರಲು ಸಾಧ್ಯವಾಗಲಿಲ್ಲ ಎಂದು ಬಲ್ಲ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಸಂತ್ರಸ್ತೆಯ ಪುತ್ರ ಶ್ರೀನಿವಾಸ್ ಸುದ್ದಿಗಾರರೊಂದಿಗೆ ಮಾತನಾಡಿ, ಒಂದು ವರ್ಷದ ಹಿಂದೆ ನಮ್ಮ ಅಂಗಡಿಯಲ್ಲಿ ದರೋಡೆ ನಡೆದಿತ್ತು, ಅಂದಿನಿಂದ ಮುತ್ಯಾಲ್ ಅಂಗಡಿಯಲ್ಲಿ ಮಲಗುತ್ತಿದ್ದರು. ದರೋಡೆಕೋರರು ಇದರ ಹಿಂದೆ ಇರಬೇಕೆಂದು ನಾವು ಅನುಮಾನಿಸುತ್ತೇವೆ. ನಮಗೆ ತಿಳಿದಿರುವಂತೆ ತಂದೆಗೆ ಯಾವುದೇ ಶತ್ರುಗಳಿಲ್ಲ. ಅವರು ಯಾರಿಗೂ ಹೆದರುತ್ತಿರಲಿಲ್ಲ. ಅವರು ಮಲಗಿದ್ದಾಗ ಅವರ ಮೇಲೆ ದಾಳಿ ಮಾಡಿ ಹಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿರುವ ಶಂಕೆ ಇದೆ ಎಂದು ಹೇಳಿದರು.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:38 pm, Thu, 17 November 22