ಕಲಬುರಗಿ: ಮಾನಸಿಕ ಅಸ್ವಸ್ಥ ರೋಗಿಯ ಮೇಲೆ ಅತ್ಯಾಚಾರ; ಕಾಮುಕನನ್ನ ಬಂಧಿಸಿದ ಪೊಲೀಸರು

|

Updated on: Mar 19, 2023 | 12:24 PM

ಇದು ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಹೇಯ ಕೃತ್ಯ. ಯಾಕೆಂದರೆ ಆ ಮಹಿಳೆಗೆ ದಿಕ್ಕಿಲ್ಲ, ಮಾತು ಕೂಡ ಬರೋದಿಲ್ಲ. ಕಳೆದ ಏಳು ತಿಂಗಳಿಂದ ಆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಕಳೆದ ರಾತ್ರಿ ಆ ಮಹಿಳೆ ಮೇಲೆ ದುರುಳನೋರ್ವ ಅತ್ಯಾಚಾರ ನಡೆಸಿದ್ದಾನೆ. ಇದೀಗ ಕಾಮುಕನನ್ನು ವ್ಯಕ್ತಿಯೋರ್ವ ಹಿಡಿದು ಪೊಲೀಸರಿಗೊಪ್ಪಿಸಿದ್ದಾನೆ.

ಕಲಬುರಗಿ: ಮಾನಸಿಕ ಅಸ್ವಸ್ಥ ರೋಗಿಯ ಮೇಲೆ ಅತ್ಯಾಚಾರ; ಕಾಮುಕನನ್ನ ಬಂಧಿಸಿದ ಪೊಲೀಸರು
ಆರೋಪಿ ಮಹಬೂಬ್ ಪಾಶಾ
Follow us on

ಕಲಬುರಗಿ: ನಗರದ ಜಿಮ್ಸ್ ಆಸ್ಪತ್ರೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾಸ್ಪತ್ರೆಯಲ್ಲಿ ಮಾ.17 ರ ರಾತ್ರಿ ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ. ಕಳೆದ ಏಳು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿರುವ ಮಹಿಳಾ ರೋಗಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಹೌದು ಕಳೆದ ಏಳು ತಿಂಗಳಿಂದ ಆಸ್ಪತ್ರೆಯಲ್ಲಿ ಮಾನಸಿಕ ಅಸ್ವಸ್ಥೆಯಾಗಿರುವ ಮೂವತ್ತಾರು ವರ್ಷದ ಮಹಿಳೆಯೊಬ್ಬಳು ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆಗೆ ಮಾತನಾಡಲು ಕೂಡ ಬರೋದಿಲ್ಲವಂತೆ. ಜೊತೆಗೆ ಆಕೆಗೆ ಯಾರು ಇಲ್ಲವಂತೆ. ಮಹಿಳೆಯನ್ನು ಕೆರದುಕೊಂಡು ಹೋಗಲು ಯಾರು ಬಂದಿಲ್ಲ. ಆದರೂ ಕೂಡ ಆಸ್ಪತ್ರೆಯ ಸಿಬ್ಬಂದಿ ಕಳೆದ ಏಳು ತಿಂಗಳಿಂದ ಮಹಿಳೆಗೆ ಚಿಕಿತ್ಸೆ ಕೊಡುತ್ತಿದ್ದಾರೆ. ಆದರೆ ಕಳೆದ ರಾತ್ರಿ ಹನ್ನೆರಡು ಗಂಟೆ ಸಮಯದಲ್ಲಿ ಆಸ್ಪತ್ರೆಗೆ ಬಂದಿದ್ದ ನಲವತ್ತು ವರ್ಷದ ಮಹಬೂಬ್ ಪಾಶಾ ಎನ್ನುವ ವ್ಯಕ್ತಿ, ಮಹಿಳೆಯ ಮೇಲೆ ಅತ್ಯಾಚಾರವೆಸಗುತ್ತಿದ್ದ. ಇದೇ ಆಸ್ಪತ್ರೆಯಲ್ಲಿ ಮಹಿಳಾ ರೋಗಿಯ ಆರೈಕೆಯಲ್ಲಿದ್ದ ವಿಜಯಪುರ ಮೂಲದ ವ್ಯಕ್ತಿಯೋರ್ವ ಅದನ್ನ ನೋಡಿ, ಆತನನ್ನು ಹಿಡಿದು, ಆಸ್ಪತ್ರೆಯ ಸ್ಟಾಪ್ ನರ್ಸ್​ಗೆ ಒಪ್ಪಿಸಿದ್ದ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇನ್ನು ಆಸ್ಪತ್ರೆಯಲ್ಲಿ ಒಳರೋಗಿಗಳನ್ನು ನೋಡಲು, ಸಂಬಂಧಿಕರನ್ನು ಹೊರತು ಪಡಿಸಿ ಬೇರೆಯವರನ್ನು ಬಿಡೋದಿಲ್ಲ. ಆದರೆ ಜಿಲ್ಲಾ ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಆಸ್ಪತ್ರೆಗೆ ಬಂದಿದ್ದಲ್ಲದೆ, ಮಾನಸಿಕ ಅಸ್ವಸ್ಥ ಮಹಿಳಾ ರೋಗಿ ಮೇಲೆ ಅತ್ಯಾಚಾರ ಕೂಡ ನಡೆಸಿದ್ದಾನೆ. ಇನ್ನು ಅತ್ಯಾಚಾರನ ನಡೆಸಿರುವ ಮೆಹಬೂಬ್ ಪಾಶಾ, ಕಲಬುರಗಿ ನಗರದ ಇಸ್ಲಾಂಬಾದ್ ಕಾಲೂನಿ ನಿವಾಸಿಯಾಗಿದ್ದು, ನಗರದಲ್ಲಿಯೇ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಾನಂತೆ. ಆಸ್ಪತ್ರೆಯಲ್ಲಿ ಆತನ ಸಂಬಂಧಿಗಳು, ಪರಿಚಿತರು ಯಾರು ಕೂಡ ದಾಖಲಾಗಿರಲಿಲ್ಲ. ಆದರೂ ಆಸ್ಪತ್ರೆಗೆ ರಾತ್ರಿ ಸಮಯದಲ್ಲಿ ಸುಮ್ಮನೇ ಬಂದಿದ್ದ ಮೆಹಬೂಬ್ ಪಾಶಾ, ಒಳ ರೋಗಿಗಳು ಇರುವ ವಾರ್ಡ್​ಗೆ ಹೋಗಿ ಮಹಿಳಾ ರೋಗಿಯ ಮೇಲೆ ಅತ್ಯಾಚಾರ ಕೂಡ ನಡೆಸಿದ್ದಾನೆ.

ಇದನ್ನೂ ಓದಿ:Ramanagara: ಮನೆಗೆ ಕರೆದೊಯ್ದು ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನ, ಆಟೋ ಡ್ರೈವರ್ ಅರೆಸ್ಟ್

ಆತ ಒಳಹೋಗಿ ಅತ್ಯಾಚಾರ ನಡೆಸಿದ್ರು ಕೂಡ ಆಸ್ಪತ್ರೆಯ ಯಾವ ಸಿಬ್ಬಂದಿ ಕೂಡ ಗಮನಿಸದೇ ಇರೋದು, ಆಸ್ಪತ್ರೆಯ ಭದ್ರತಾ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತಿದೆ. ಈ ಬಗ್ಗೆ ಆಸ್ಪತ್ರೆಯ ಜಿಲ್ಲಾ ಸರ್ಜನ್ ಯಾವುದೇ ಪ್ರತಿಕ್ರಿಯೇ ನೀಡಿಲ್ಲ. ಆದರೆ ಜಿಮ್ಸ್ ಆಸ್ಪತ್ರೆಯ ಮುಖ್ಯಸ್ಥರು, ಈ ಬಗ್ಗೆ ವರದಿಯನ್ನು ರಾಜ್ಯ ಆರೋಗ್ಯ ಇಲಾಖೆಗೆ ನೀಡಿದ್ದಾರಂತೆ. ಇನ್ನು ಭದ್ರತಾ ಲೋಪದ ಬಗ್ಗೆ ಆಂತರಿಕ ತನಿಖೆ ಕೂಡ ನಡೆಯುತ್ತಿದೆಯಂತೆ. ಇನ್ನೊಂದೆಡೆ ಆಸ್ಪತ್ರೆಯ ಭದ್ರತೆ ಬಗ್ಗೆ ಪೊಲೀಸರು ಕೂಡ ಇಲಾಖೆಗೆ ಮಾಹಿತಿ ನೀಡಲು ಇದೀಗ ಮುಂದಾಗಿದೆ.

ಇನ್ನು ಆರೋಪಿಯನ್ನ ಬ್ರಹ್ಮಪುರ ಠಾಣೆಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಾನಸಿಕ ಅಸ್ವಸ್ಥ ಮಹಿಳೆ ಮೇಲೆ ಅತ್ಯಾಚಾರ ಮಾಡಿದ್ದು ಮಾತ್ರ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.

ವರದಿ: ಸಂಜಯ್ ಟಿವಿ9 ಕಲಬುರಗಿ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:23 pm, Sun, 19 March 23