Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru: ಸಿನಿಮೀಯ ರೀತಿಯಲ್ಲಿ ಸಾಕು ನಾಯಿ ಕದ್ದು ಪರಾರಿಯಾದ ಕಳ್ಳರು; ವಿಡಿಯೋ ವೈರಲ್​

ಫ್ರೇಜರ್ ಟೌನ್​ನಲ್ಲಿ ಬೈಕ್​ನಲ್ಲಿ ಬಂದ ಮೂವರು ಯುವಕರು ಜೋಯಿ ಎಂಬ ಹೆಸರಿನ ನಾಯಿಯನ್ನ ಕಳ್ಳತನ ಮಾಡಿದ್ದಾರಂತೆ. ಪೆಟ್ರೋಲ್ ಬಂಕ್ ಬಳಿ ಬರುತ್ತಿದ್ದ ನಾಯಿಯನ್ನ ಕಾಳಜಿ ಮಾಡುವ ರೀತಿ ಹಿಡಿದುಕೊಂಡು ಬಂದು ಸಿನಿಮೀಯ ಶೈಲಿಯಲ್ಲಿ ಸಾಕು ನಾಯಿಯನ್ನ ಕದ್ದು ಪರಾರಿಯಾಗಿದ್ದಾರೆ.

Bengaluru: ಸಿನಿಮೀಯ ರೀತಿಯಲ್ಲಿ ಸಾಕು ನಾಯಿ ಕದ್ದು ಪರಾರಿಯಾದ ಕಳ್ಳರು; ವಿಡಿಯೋ ವೈರಲ್​
ಸಾಕು ನಾಯಿ ಕದಿಯುವ ಕಳ್ಳರ ವಿಡಿಯೋ ವೈರಲ್​
Follow us
ಕಿರಣ್ ಹನುಮಂತ್​ ಮಾದಾರ್
|

Updated on: Mar 19, 2023 | 8:57 AM

ಬೆಂಗಳೂರು: ಮನೆಯಿಂದ ಹೊರಗಡೆ ನಾಯಿಯನ್ನ ಓಡಾಡಲು ಬಿಡುವ ಮುನ್ನ ಎಚ್ಚರವಾಗಿರುವುದು ಒಳ್ಳೆಯದು. ಹೌದು ಫ್ರೇಜರ್ ಟೌನ್​ನಲ್ಲಿ ಬೈಕ್​ನಲ್ಲಿ ಬಂದ ಮೂವರು ಯುವಕರು ಜೋಯಿ ಎಂಬ ಹೆಸರಿನ ನಾಯಿಯನ್ನ ಕಳ್ಳತನ ಮಾಡಿದ್ದಾರಂತೆ. ಪೆಟ್ರೋಲ್ ಬಂಕ್ ಬಳಿ ಬರುತ್ತಿದ್ದ ನಾಯಿಯನ್ನ ಕಾಳಜಿ ಮಾಡುವ ರೀತಿ ಹಿಡಿದುಕೊಂಡು ಬಂದು ಸಿನಿಮೀಯ ಶೈಲಿಯಲ್ಲಿ ಸಾಕು ನಾಯಿಯನ್ನ ಕದ್ದು ಪರಾರಿಯಾಗಿದ್ದಾರೆ. ಯುವಕರ ಖತರ್ನಾಕ್ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೈಯದ್ ಎಂಬುವರು ಟ್ವೀಟ್ ಮೂಲಕ ಜೋಯಿ ಎಂಬ ನಾಯಿಯ ಪೋಟೋ ಹಾಕಿ ಹುಡುಕಿಕೊಡುವಂತೆ ಹಾಗೂ ಯುವಕರು ಕಳ್ಳತನ ಮಾಡುವ ದೃಶ್ಯವನ್ನು ಸಹ ಟ್ವೀಟ್ ಮಾಡುವ ಮೂಲಕ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.

ಕುಡಿದ ಮತ್ತಿನಲ್ಲಿ ಸ್ನೇಹಿತರ ಗಲಾಟೆ, ಕೊಲೆಯಲ್ಲಿ ಅಂತ್ಯ

ರಾಮನಗರ: ಕುಡಿದ ಮತ್ತಿನಲ್ಲಿ‌ ಸ್ನೇಹಿತರ ನಡುವೆ ಮಾತಿನ ಚಕಮಕಿ ನಡೆದು, ತಲೆಯ ಮೇಲೆ ಕತ್ತು ಎತ್ತಿ ಹಾಕಿ‌ ಯುವಕನನ್ನ ಬರ್ಬರವಾಗಿ ಹತ್ಯೆ ಮಾಡಲಾಗಿರುವ ಘಟನೆ ಚನ್ನಪಟ್ಟಣದ ಲಾಳಾಘಟ್ಟ ಕ್ರಾಸ್ ಬಳಿ ನಡೆದಿದೆ. ಚನ್ನಪಟ್ಟಣದ ಅಂಬೇಡ್ಕರ್ ನಗರ ನಿವಾಸಿ ಪ್ರಮೋದ್ (33) ಎಂಬಾತ ಮೃತ ಯುವಕ. ಇನ್ನು ಈ ಕುರಿತು ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ.

ವಿದ್ಯುತ್​ ಪ್ರವಹಿಸಿ ತಾಯಿ ಸೇರಿ ಇಬ್ಬರು ಮಕ್ಕಳು ಸಾವು

ಕಲಬುರಗಿ: ಚಿಂಚೋಳಿ ಪಟ್ಟಣದ ದನಗರ ಗಲ್ಲಿಯಲ್ಲಿ ವಿದ್ಯುತ್​ ಪ್ರವಹಿಸಿ ತಾಯಿ ಝರಣಮ್ಮ ಅಂಬಣ್ಣ(44), ಮಕ್ಕಳಾದ ಸುರೇಶ್​​(16), ಮಹೇಶ್​(18) ಸಾವನ್ನಪ್ಪಿದ್ದಾರೆ. ನಿನ್ನೆ(ಮಾ.18) ರಾತ್ರಿ ಚಿಂಚೋಳಿಯಲ್ಲಿ ಧಾರಾಕಾರ ಮಳೆ ಸುರಿದಿದೆ. ಈ ಹಿನ್ನೆಲೆಯಲ್ಲಿ ಸಹೋದರರು ದನಗಳಿಗೆ ಸಂಗ್ರಹಿಸಿದ್ದ ಮೇವು ಮುಚ್ಚಲು ಹೋಗಿದ್ದರು. ಈ ವೇಳೆ ಸರ್ವಿಸ್ ವೈಯರ್​ ತುಂಡಾಗಿ ನೀರಲ್ಲಿ ಬಿದ್ದಿದೆ. ಇದನ್ನ ಗಮನಿಸದೇ ಒಬ್ಬರ ಹಿಂದೆ ಒಬ್ಬರು ಏನಾಗಿದೆ ಎಂದು ನೊಡಲು ಬಂದಾಗ ಕರೆಂಟ್​ ಹೊಡೆದು ತಾಯಿ ಹಾಗೂ 2 ಮಕ್ಕಳು ಸಾವನ್ನಪ್ಪಿದ್ದಾರೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಲ್ಲರ ಮೃತದೇಹವನ್ನ ಸರಕಾರಿ ಆಸ್ಪತ್ರೆ ತಂದಿರುತ್ತಾರೆ.

ಗುಡುಗು ಸಹಿತ ಮಳೆಯಿಂದ ಮರ ಬಿದ್ದು ಕುರಿಗಾಹಿ ಸಾವು

ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನ ಹಾಡ್ಲಿ ಗ್ರಾಮದಲ್ಲಿ ಗುಡುಗು ಸಹಿತ ಮಳೆಯಿಂದ ಮರ ಬಿದ್ದು ಕುರಿಗಾಹಿ ಶಿವಲಿಂಗೇಗೌಡ(48) ಎಂಬಾತ ಸಾವನ್ನಪ್ಪಿದ್ದಾನೆ. ಜೊತೆಗೆ ಹಸು, 18ಕ್ಕೂ ಹೆಚ್ಚು ಕುರಿ, 5 ಮೇಕೆ ಸಹ ಸಾವನಪ್ಪಿದೆ. ಕುರಿ, ಮೇಕೆ ಮೇಯಿಸುತ್ತಿದ್ದಾಗ ಮಳೆಯಿಂದ ಮರ ಬಿದ್ದಿದೆ. ಈ ವೇಳೆ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಶಿವಲಿಂಗೇಗೌಡ ಕೊನೆಯುಸಿರೆಳದಿದ್ದಾನೆ. ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ