ಮಗಳ ಹಿಂದೆ ಬಿದ್ದಿದ್ದ ವಿದ್ಯಾರ್ಥಿಗೆ ಥಳಿಸಿ, ಚಿತ್ರಹಿಂಸೆ ನೀಡಿದ ವಕೀಲ

|

Updated on: Jun 29, 2024 | 7:03 PM

ಕಾನ್ಪುರದಲ್ಲಿ ಫಾರ್ಮಾ ವಿದ್ಯಾರ್ಥಿಯೊಬ್ಬ ತನ್ನ ಮಗಳೊಂದಿಗೆ ಅಲೆದಾಡುತ್ತಿರುವುದನ್ನು ನೋಡಿದ ವಕೀಲ ಆ ಯುವಕನನ್ನು ಅಪಹರಿಸಿ, ಥಳಿಸಿ, ಚಿತ್ರಹಿಂಸೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ವಿದ್ಯಾರ್ಥಿಯನ್ನು ಪೊಲೀಸರು ರಕ್ಷಿಸಿದ್ದು, ವಕೀಲನನ್ನು ಬಂಧಿಸಲಾಗಿದೆ. 8 ಜನರ ಗುಂಪು ವಿದ್ಯಾರ್ಥಿಯನ್ನು ಅಪಹರಿಸಿ, ತೀವ್ರವಾಗಿ ಥಳಿಸಿ, ಚಿತ್ರಹಿಂಸೆ ನೀಡಲಾಗಿತ್ತು.

ಮಗಳ ಹಿಂದೆ ಬಿದ್ದಿದ್ದ ವಿದ್ಯಾರ್ಥಿಗೆ ಥಳಿಸಿ, ಚಿತ್ರಹಿಂಸೆ ನೀಡಿದ ವಕೀಲ
ಸಾಂದರ್ಭಿಕ ಚಿತ್ರ
Follow us on

ಕಾನ್ಪುರ: ತನ್ನ ಮಗಳ ಕಾಲೇಜಿನಲ್ಲಿಯೇ ಓದುತ್ತಿದ್ದ ಯುವಕನೊಬ್ಬ ಆಕೆಯೊಂದಿಗೆ ಅಲೆದಾಡುತ್ತಿದ್ದ ವಿಷಯ ತಿಳಿದ ವಕೀಲನೊಬ್ಬ ಆತನನ್ನು ಕಿಡ್ನಾಪ್ ಮಾಡಿಸಿ, ಥಳಿಸಿ, ಚಿತ್ರಹಿಂಸೆ ನೀಡಿದ್ದಾನೆ. ಆತ ತನ್ನ ಮಗಳೊಂದಿಗೆ ತಿರುಗಾಡುತ್ತಿದ್ದಾಗ ಸಿಕ್ಕಿಬಿದ್ದ ನಂತರ ವಕೀಲ ಮತ್ತು ಅವರ ಸಹಾಯಕರು ಆತನನ್ನು ಅಮಾನುಷವಾಗಿ ಥಳಿಸಿದ್ದಾರೆ.

ಕಾನ್ಪುರದಲ್ಲಿ ಫಾರ್ಮಾ ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿ, ತನ್ನ ಮಗಳೊಂದಿಗೆ ತಿರುಗಾಡುತ್ತಿದ್ದಾಗ ಸಿಕ್ಕಿಬಿದ್ದ ನಂತರ ವಕೀಲರು ಮತ್ತು ಅವರ ಸಹಾಯಕರು ಅಮಾನುಷವಾಗಿ ಥಳಿಸಿದ್ದಾರೆ. ವಿದ್ಯಾರ್ಥಿಯನ್ನು ಪೊಲೀಸರು ರಕ್ಷಿಸಿದ್ದು, ವಕೀಲರನ್ನು ಬಂಧಿಸಲಾಗಿದೆ. ಎಂಟು ಜನರ ಗುಂಪು ವಿದ್ಯಾರ್ಥಿಯನ್ನು ಅಪಹರಿಸಿ, ತೀವ್ರವಾಗಿ ಥಳಿಸಿ, ಚಿತ್ರಹಿಂಸೆ ನೀಡಿದೆ.

ಇದನ್ನೂ ಓದಿ: Crime News: ದೆಹಲಿಯಲ್ಲಿ 10 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬರ್ಬರ ಹತ್ಯೆ

ಫಾರ್ಮಾ ವಿದ್ಯಾರ್ಥಿಯಾಗಿರುವ ಯುವಕ ತನ್ನ ಮಗಳೊಂದಿಗೆ ತಿರುಗಾಡುತ್ತಿರುವುದನ್ನು ಕಂಡು ವಕೀಲರ ಸಹಾಯಕರು ಆತನನ್ನು ಅಪಹರಿಸಿ ಥಳಿಸಿದ್ದಾರೆ. ಕಾರಿನಲ್ಲಿ ಬಂದ 8 ಜನರ ತಂಡವು ತನ್ನನ್ನು ಅಪಹರಿಸಿದೆ ಎಂದು ವಿದ್ಯಾರ್ಥಿ ಹೇಳಿದ್ದಾನೆ. ಆ ಗುಂಪು ಅವನನ್ನು ಕಾಡಿಗೆ ಕರೆದೊಯ್ದು ದೊಣ್ಣೆ, ಕಬ್ಬಿಣದ ರಾಡ್ ಮತ್ತು ಬೆಲ್ಟ್‌ನಿಂದ ಹೊಡೆದಿದೆ ಎಂದು ಆತ ಹೇಳಿದ್ದಾನೆ.

ಇದನ್ನೂ ಓದಿ: ರೋಗಿ ಸಾವು, ರೊಚ್ಚಿಗೆದ್ದ ಕುಟುಂಬಸ್ಥರಿಂದ ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ! ಆರು ಜನರ ವಿರುದ್ಧ ಎಫ್​ಐಆರ್ ದಾಖಲು

ವಕೀಲರ ಕಡೆಯ ಗುಂಪು ಆತನ ಉಗುರುಗಳನ್ನು ಎಳೆದು ಹಿಂಸೆ ಮಾಡಿತು. ಕಬ್ಬಿಣದ ರಾಡ್‌ಗಳಿಂದ ಪದೇಪದೆ ಆತನ ಕಿವಿಯ ಬಳಿ ಹೊಡೆಯಲಾಯಿತು. ಆ ಗುಂಪು ಆತನಿಗೆ ಅಮಾನುಷವಾಗಿ ಥಳಿಸಿದ ನಂತರ ನೀರಿನಲ್ಲಿ ಮುಳುಗಿಸಲಾಯಿತು. ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಗುಂಪು ಆತನನ್ನು ಕೊಂದು ಶವವನ್ನು ಗಂಗಾ ನದಿಗೆ ಎಸೆಯುವುದಾಗಿ ಬೆದರಿಕೆ ಹಾಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ