ತಮಿಳುನಾಡು: ಮಹಿಳೆಯೊರ್ವರನ್ನು (woman) ಅವಾಚ್ಯ ಶಬ್ದಗಳಿಂದ ನಿಂದಿಸಿ ಮತ್ತು ಲೈಂಗಿಕ ಕಿರುಕುಳ ನೀಡುವುದಷ್ಟೇ ಅಲ್ಲದೇ ವಿದ್ಯುತ್ ಕಂಬಕ್ಕೆ ಕಟ್ಟಿ ಸಾರ್ವಜನಿಕವಾಗಿ ಹಲ್ಲೆ ಮಾಡಿರುವಂತಹ ದಾರುಣ ಘಟನೆ ತಮಿಳುನಾಡು ಜಿಲ್ಲೆಯ ಕನ್ಯಾಕುಮಾರಿಯ ಮೇಳ ಪಾಳಯಂ ಜಂಕ್ಷನ್ನಲ್ಲಿ ನಡೆದಿದೆ. ಮಹಿಳೆ ದೂರಿನನ್ವಯ ಪೊಲೀಸರು ಮೂವರು ಆಟೋಚಾಲಕರಾದ ಶಶಿ, ವಿನೋದ್, ವಿಜಯಕಾಂತ್ರನ್ನು ಬಂಧಿಸಿದ್ದು, ಇಬ್ಬರೂ ತಲೆಮರೆಸಿಕೊಂಡಿದ್ದಾರೆ. ಸಂತ್ರಸ್ತ ಮಹಿಳೆ ವಿಧವೆಯಾಗಿದ್ದು, 9 ವರ್ಷದ ಮಗುವನ್ನು ಸಹ ಹೊಂದಿದ್ದಾರೆ. ಪ್ರತಿನಿತ್ಯ ಮಹಿಳೆ ಕೆಲಸಕ್ಕೆಂದು ಮಸಾಜ್ ಸೆಂಟರ್ಗೆ ಹೋಗುವ ಮಾರ್ಗ ಮಧ್ಯೆ ಮೇಲಪಾಲಯಂ ಜಂಕ್ಷನ್ನಲ್ಲಿ ಆಟೋರಿಕ್ಷಾ ಚಾಲಕರಿಂದ ಪ್ರತಿದಿನ ಕಿರುಕುಳ ಎದುರಿಸುತ್ತಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರತಿನಿತ್ಯ ಕಿರುಕುಳ ಮುಂದುವರೆಯುತ್ತಿದ್ದಂತೆ ಮಹಿಳೆ ತನ್ನ ಸುರಕ್ಷತೆಗಾಗಿ ಬ್ಯಾಗ್ನಲ್ಲಿ ಚಿಲ್ಲಿ ಪೌಡರ್ ಮತ್ತು ಪೇಪರ್ ಪೌಡರ್ ಇಟ್ಟಿಕೊಂಡಿದ್ದಾರೆ. ಎಂದಿನಂತೆ ಕೂಡ ನಿನ್ನೆ ಶುಕ್ರವಾರ(ಮಾ. 10) ಮಹಿಳೆ ಕೆಲಸಕ್ಕೆಂದು ಮೇಳಪಾಲಯಂ ಜಂಕ್ಷನ್ನಲ್ಲಿ ನಡೆದುಕೊಂಡು ಹೋಗುವಾಗ ಅದೇ ಆಟೋಚಾಲಕರು ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾರೆ.
ಇದನ್ನೂ ಓದಿ: Maharashtra: ಯೂಟ್ಯೂಬ್ ನೋಡಿ ಶಿಶುವಿಗೆ ಜನ್ಮ ನೀಡಿ, ಬಳಿಕ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ ಅಪ್ರಾಪ್ತ ಬಾಲಕಿ
ಮಹಿಳೆ ಅವರನ್ನು ಪ್ರಶ್ನಿಸಿದ್ದು, ಆಟೋಚಾಲಕರು ಸಡನ್ ಆಗಿ ಮಹಿಳೆ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಇದರಿಂದ ಗಾಬರಿಗೊಂಡ ಮಹಿಳೆ ಬ್ಯಾಗ್ನಲ್ಲಿದ್ದ ಚಿಲ್ಲಿ ಪೌಡರ್ ಮತ್ತು ಪೇಪರ್ ಪೌಡರ್ನ್ನು ಅವರ ಮೇಲೆ ಎರಚಿದ್ದಾಳೆ. ಮತ್ತಷ್ಟು ಕೋಪಗೊಂಡ ಚಾಲಕರು ಅವಳನ್ನು ಬಲವಂತವಾಗಿ ಹಿಡಿದು, ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದಾರೆ.
ಸುಮಾರು ಒಂದುವರೆ ಗಂಟೆಗಳ ಕಾಲ ಮಹಿಳೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಲಾಗಿದ್ದು, ಸಾರ್ವಜನಿಕರು ಯಾರೂ ಕೂಡ ನನ್ನ ರಕ್ಷಣೆಗೆ ಬರಲಿಲ್ಲ. ಆದರೆ ಕೃತ್ಯವನ್ನು ಮೊಬೈಲ್ಗಳಲ್ಲಿ ಸೆರೆ ಹಿಡಿದಿದ್ದಾರೆ ಎಂದು ಸಂತ್ರಸ್ತ ಮಹಿಳೆ ತನ್ನ ದೂರಿನಲ್ಲಿ ದಾಖಲಿಸಿದ್ದಾರೆ.
ಛತ್ತೀಸ್ಗಢದ ಬಿಲಾಸ್ಪುರದಲ್ಲಿ ಶ್ರದ್ಧಾ ವಾಕರ್ ರೀತಿಯ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಹತ್ಯೆ ಮಾಡಿ, ದೇಹವನ್ನು ತುಂಡು ತುಂಡಾಗಿ ಕತ್ತರಿಸಿ 2 ತಿಂಗಳುಗಳ ಕಾಲ ನೀರಿನ ಟ್ಯಾಂಕ್ನಲ್ಲಿಟ್ಟಿದ್ದ ಘಟನೆ ನಡೆದಿದೆ. ಪತ್ನಿ ಯಾರೊಂದಿಗೋ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ ಪತಿ ಆಕೆಯನ್ನು ಹತ್ಯೆ ಮಾಡಿದ್ದ, ಕೊಲೆ ಮಾಡಿದ ನಂತರ ಆರೋಪಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ನೀರಿನ ತೊಟ್ಟಿಗೆ ಎಸೆದಿದ್ದ.
ಇದನ್ನೂ ಓದಿ: ಶಿವಮೊಗ್ಗ: ಸ್ನೇಹಿತರ ಜೊತೆ ಪಾರ್ಟಿಗೆ ಹೋಗಿದ್ದ ಯುವಕ ಅನುಮಾನಸ್ಪದ ರೀತಿಯಲ್ಲಿ ಸಾವು
ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದಾಗ, ದೇಹದ ಭಾಗಗಳಿದ್ದ ಚೀಲ ದೊರೆತಿತ್ತು. ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆ ವೇಳೆ ಆರೋಪಿ ಪತಿ ಪತ್ನಿಯ ಮೇಲೆ ಅನುಮಾನ ವ್ಯಕ್ತಪಡಿಸಿ, ಹೆಂಡತಿ ಯಾರೊಂದಿಗೋ ಅನೈತಿಕ ಸಂಬಂಧ ಹೊಂದಿದ್ದಾಳೆ ಎನ್ನುವ ಭಾವನೆ ಮೂಡಿ ಆಕೆಯನ್ನು ಹತ್ಯೆಗೈದಿದ್ದ ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:20 pm, Sat, 11 March 23