ಬೆಂಗಳೂರು: ನಾಲ್ಕು ಮದುವೆಯಾಗಿ ವಂಚಿಸಿದ್ದ ಆರೋಪಿ ಮೇಲೆ ಮತ್ತೊಂದು ಆರೋಪ, ಠಾಣೆ ಮೆಟ್ಟಿಲೇರಿದ ಮತ್ತೋರ್ವ ಮಹಿಳೆ
ಕೆಲ ವರ್ಷಗಳ ಹಿಂದೆ ನಾಲ್ಕು ಮದುವೆಯಾಗಿ ವಂಚಿಸಿ ಸುದ್ದಿಯಾಗಿದ್ದ ವಂಚಕ ವಜೀರ್ ಈಗ ಐದನೇ ಪತ್ನಿಗೂ ಕಿರುಕುಳ ನೀಡಿ ಮತ್ತೆ ಸುದ್ದಿಯಾಗಿದ್ದಾನೆ. ಸಂತ್ರಸ್ತ ಮಹಿಳೆ ಠಾಣೆ ಮೆಟ್ಟಿಲೇರಿದ್ದಾರೆ.
ಬೆಂಗಳೂರು: ಈ ಹಿಂದೆ ನಾಲ್ಕು ಮದುವೆಯಾಗಿ ವಂಚಿಸಿ ಸುದ್ದಿಯಾಗಿದ್ದ ವಂಚಕ ಈಗ ಐದನೇ ಪತ್ನಿಗೂ ಕಿರುಕುಳ ನೀಡಿ ಬರೋಬ್ಬರಿ 6 ವರ್ಷದ ಬಳಿಕ ಮತ್ತೆ ಸುದ್ದಿಯಾಗಿದ್ದಾನೆ. ಆರ್.ಟಿ.ನಗರದ ವಜೀರ್ ಅಹಮದ್ ಎಂಬಾತ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ತಂದೆ ಮನೆಯಿಂದ ವರದಕ್ಷಿಣೆ ತರದಿದ್ದಕ್ಕೆ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ರ್ಯಾಡೋ ವಾಚ್ ತರದಿದ್ದಕ್ಕೆ ಪತ್ನಿ ಮುಖಕ್ಕೆ ಗುದ್ದಿ ಹಲ್ಲೆ ನಡೆಸಿ ಮಧ್ಯರಾತ್ರಿ ನಡುರಸ್ತೆಯಲ್ಲಿ ಬಿಟ್ಟು ಹೋಗಿದ್ದಾನೆ.
ಕಳೆದ ಮೂರು ವರ್ಷಗಳ ಹಿಂದೆ ದುಬೈನಲ್ಲಿ ಕೆಲಸಕ್ಕೆ ಸೇರ್ತೀನಿ ಎಂದು ಹೇಳಿ ವಂಚಿಸಿ ಸಂತ್ರಸ್ಥೆಯನ್ನ ಮದುವೆಯಾಗಿದ್ದ ಆರೋಪಿ ವಜೀರ್, ಮದುವೆ ನಂತರ ಯಾವುದೇ ಕೆಲಸ ಮಾಡದೆ ಓಡಾಡಿಕೊಂಡಿದ್ದ. ಪತ್ನಿಗೆ ತಂದೆ ಮನೆಯಿಂದ ರ್ಯಾಡೋ ವಾಚ್, ಹಣ ಸೇರಿ ಪ್ರತಿ ಹಬ್ಬಕ್ಕೆ ವರದಕ್ಷಿಣೆಗೆ ಡಿಮ್ಯಾಂಡ್ ಮಾಡುತ್ತಿದ್ದ. ಅಲ್ಲದೇ ವಜೀರ್ ನನಗೆ ತಿಳಿಯದಂತೆ ನಾಲ್ಕೈದು ಮದುವೆ ಆಗಿದ್ದಾನೆ. ಈ ಬಗ್ಗೆ ನಾನು ಪ್ರಶ್ನಿಸಿದಾಗ ಹಲ್ಲೆ ಮಾಡಿ ಮನೆಯಿಂದ ಹೊರ ಹಾಕಿದ್ದಾನೆ ಎಂದು ಸಂತ್ರಸ್ತ ಮಹಿಳೆ ಕಣ್ಣೀರು ಹಾಕಿದ್ದಾರೆ.
ಸದ್ಯ ಸಂತ್ರಸ್ತ ಪತ್ನಿಯಿಂದ ಪತಿ ವಜೀರ್ ಹಾಗೂ ಕುಟುಂಬಸ್ಥರ ವಿರುದ್ದ ಆರ್.ಟಿ.ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನನ್ವಯ ಐಪಿಸಿ 498A ವರದಕ್ಷಿಣೆ ಕಿರುಕುಳ, 506 ಜೀವಬೆದರಿಕೆ, 323 ಮಾರಣಾಂತಿಕ ಹಲ್ಲೆಯಡಿ ದೂರು ದಾಖಲಿಸಲಾಗಿದೆ. ನಾಲ್ಕು ಮದುವೆಯಾಗಿ ವಜೀರ್ ಈ ಹಿಂದೆಯೂ ಸುದ್ದಿಯಾಗಿದ್ದ.
ಇದನ್ನೂ ಓದಿ: ನಿಷೇಧಿತ ಜಿಲೆಟಿನ್ ಕಡ್ಡಿ ಬಳಸಿ ಬೆಂಗಳೂರಿನಲ್ಲಿ ಬಂಡೆ ಸ್ಫೋಟ, ಬಿರುಕು ಬಿಟ್ಟ ಮನೆಗಳು
ಶಿವಮೊಗ್ಗ: ಸ್ನೇಹಿತರ ಜೊತೆ ಪಾರ್ಟಿಗೆ ಹೋಗಿದ್ದ ಯುವಕ ಅನುಮಾನಸ್ಪದ ರೀತಿಯಲ್ಲಿ ಸಾವು
ಶಿವಮೊಗ್ಗ: ಪಾರ್ಟಿಗೆಂದು ಹೋಗಿದ್ದ ಸುರೇಶ್(22) ಎನ್ನುವ ಯುವಕ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಶಿವಮೊಗ್ಗ ನಗರದ ರೈಲ್ವೆ ಪ್ಲೈ ಓವರ್ ಬಳಿಯ ಸಂಗೊಳ್ಳಿ ರಾಯಣ್ಣ ವೃತ್ತದ ಸಮೀಪದಲ್ಲಿ ಸ್ನೇಹಿತರಿಬ್ಬರು ಎಣ್ಣೆ ಪಾರ್ಟಿ ಮಾಡಿದ್ದರು. ಹೀಗೆ ಪಾರ್ಟಿಯಲ್ಲಿ ಎಣ್ಣೆ ಕುಡಿಯುತ್ತ ಕುಳಿತಿದ್ದ ಸುರೇಶ್ನಿಗೆ, ವೇಗವಾಗಿ ಫಲ್ಸರ್ ಬೈಕ್ನಲ್ಲಿ ಬಂದು ಡಿಕ್ಕಿ ಹೊಡೆದು ಎಸ್ಕೇಪ್ ಆಗಿದ್ದಾನೆ. ಈ ವೇಳೆ ಸುರೇಶ್ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗೆಂದು ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಸುರೇಶ್ ಮೃತಪಟ್ಟಿದ್ದಾನೆ. ಸುರೇಶ್ ಶಿವಮೊಗ್ಗದ ಶರಾವತಿ ನಗರದಲ್ಲಿ ತನ್ನ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದನು. ಈತನ ಪೋಷಕರು ಚಿಕ್ಕಮಗಳೂರಿನ ಕಡೂರಿನಲ್ಲಿ ವಾಸವಾಗಿದ್ದಾರೆ. ಇತನು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದನು. ಇದೀಗ ಸುರೇಶನ ಸಾವು ಕುಟುಂಬಸ್ಥರಿಗೆ ದೊಡ್ಡ ಆಘಾತ ತಂದಿದೆ. ಈ ಕುರಿತು ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:38 am, Sat, 11 March 23