ನಿಷೇಧಿತ ಜಿಲೆಟಿನ್ ಕಡ್ಡಿ ಬಳಸಿ ಬೆಂಗಳೂರಿನಲ್ಲಿ ಬಂಡೆ ಸ್ಫೋಟ, ಬಿರುಕು ಬಿಟ್ಟ ಮನೆಗಳು
ಜಿಲೆಟಿನ್ ಕಡ್ಡಿ ಬಳಸಿ ಬಂಡೆಯೊಂದನ್ನು ಸ್ಫೋಟಗೊಳಿಸಿದ ಪರಿಣಾಮ ಮನೆಗಳ ಗೋಡೆಗಳು ಬಿರುಕು ಬಿಟ್ಟಿರುವ ಘಟನೆ ನಗರದ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು: ಜಿಲೆಟಿನ್ ಕಡ್ಡಿ (Gelatin) ಬಳಸಿ ಬಂಡೆಯೊಂದನ್ನು ಸ್ಫೋಟಗೊಳಿಸಿದ ಪರಿಣಾಮ ಮನೆಗಳ ಗೋಡೆಗಳು ಬಿರುಕು ಬಿಟ್ಟಿರುವ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐಎಎಸ್ ಅಧಿಕಾರಿ ಒಬ್ಬರ ಪತ್ನಿಗೆ ಸೇರಿದ ಹೊಸ ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ಹಾಕಲು, ಮಣ್ಣು ತೆಗೆಯುವಾಗ ಬಂಡೆ ಪತ್ತೆಯಾಗಿದೆ. ಬಂಡೆಯನ್ನು ಸ್ಫೋಟಿಸಲು ಜಿಲೆಟಿನ್ ಕಡ್ಡಿ ಬಳಸಿದ್ದಾರೆ. ಇದರಿಂದ ಅಕ್ಕಪಕ್ಕದ ಮನೆಗಳ ಗೋಡೆಗಳಲ್ಲಿ ಬಿರುಕು ಬಿಟ್ಟಿದೆ. ನಗರದಲ್ಲಿ ಜಿಲೆಟಿನ್ ಕಡ್ಡಿ ನಿಷೇಧಿತ ವಸ್ತುವಾಗಿದ್ದರೂ ಕೂಡ ಬಳಸಲಾಗಿದೆ. ಈ ಹಿನ್ನೆಲೆ ಸೋಮಶೇಖರ್ ಎಂಬುವು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯಲ್ಲಿ ಡೈನಮೈಟ್ ಸ್ಪೋಟ
ಚಿಕ್ಕಮಗಳೂರು: ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ ಕಾಮಗಾರಿಯಲ್ಲಿ ಡೈನಮೈಟ್ ಬಳಕೆ ಮಾಡಿ ಕಲ್ಲು ಬಂಡೆ ಬ್ಲಾಸ್ಟ್ ಮಾಡಲಾಗುತ್ತಿದ್ದು, ಇದರಿಂದ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿವೆ. ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾತ್ಕೋಳಿ ಗ್ರಾಮದಲ್ಲಿ ಯೋಜನೆಯ ಕಾಮಗಾರಿ ನಡೆದಿದ್ದು, ಕಾಮಗಾರಿ ವೇಳೆ ಸಿಗುವ ಕಲ್ಲು ಬಂಡೆಗಳನ್ನು ಒಡೆಯಲು ವಿಶ್ವೇಶ್ವರಯ್ಯ ಜಲ ನಿಗಮ ಸಿಬ್ಬಂದಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಬ್ಲಾಸ್ಟ್ ತೀವ್ರತೆಗೆ ಮನೆಗಳ ಗೋಡೆಗಳು ಬಿರುಕು ಬೀಡುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:31 am, Sat, 11 March 23