ಬೆಂಗಳೂರಿನ ಕೆರೆಗಳ ಕಲ್ಮಶ ಸಂಖ್ಯೆ ಏರಿಕೆ: BWSSB ನಿರ್ಲಕ್ಷ್ಯವೇ ಕಾರಣ?

ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಬಿಡಿಎಯಿಂದ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಅಭಿವೃದ್ಧಿ ಮಾಡಿರುವ ಕೆರೆಗಳು ಬಿಡಬ್ಲ್ಯುಎಸ್‌ಎಸ್‌ಬಿಯ ನಿರ್ಲಕ್ಷ್ಯದಿಂದ ಮಾಲಿನ್ಯ ತಾಣಗಳಾಗಿವೆ.

ಬೆಂಗಳೂರಿನ ಕೆರೆಗಳ ಕಲ್ಮಶ ಸಂಖ್ಯೆ ಏರಿಕೆ: BWSSB ನಿರ್ಲಕ್ಷ್ಯವೇ ಕಾರಣ?
ಪ್ರಾತಿನಿಧಿಕ ಚಿತ್ರImage Credit source: vijaykarnataka.com
Follow us
ಗಂಗಾಧರ​ ಬ. ಸಾಬೋಜಿ
|

Updated on:Mar 10, 2023 | 8:12 PM

ಬೆಂಗಳೂರು: ಬೆಂಗಳೂರು ಕೇವಲ ಸಿಲಿಕಾನ್​ ಸಿಟಿ, ಸಿಲಿಕಾನ್​ ವ್ಯಾಲಿ, ಐಟಿ ಬಿಟಿ ಹಬ್​​, ನಿವೃತ್ತರ ಸ್ವರ್ಗ, ಉದ್ಯಾನ ನಗರಿ, ಗ್ರೀನ್​​ ಸಿಟಿ ಸೇರಿದಂತೆ ಹಲವು ಅಭಿದಾನಕ್ಕೆ ಪಾತ್ರವಾಗಿದೆ. ಈ ಎಲ್ಲಾ ಖ್ಯಾತಿಗಳೊಂದಿಗೆ ಈ ಹಿಂದೆ ಬೆಂಗಳೂರನ್ನು ಕೆರೆಗಳ (lakes) ನಗರಿ ಎಂದು ಸಹ ಕರೆಯುತ್ತಿದ್ದರು. ಸಾಕಷ್ಟು ಕೆರೆಗಳ ಪೈಕಿ ಸದ್ಯ ಕೆಲವೇ ಕೆಲವು ಕರೆಗಳು ಮಾತ್ರ ಉಳಿದುಕೊಂಡಿವೆ. ಆದರೆ ಉಳಿದುಕೊಂಡಿರುವ ಕೆರೆಗಳು ಸಹ ಮಾಲಿನ್ಯದಿಂದ ಕೂಡಿವೆ. ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಬಿಡಿಎಯಿಂದ ಕೋಟ್ಯಂತರ ರೂ. ವೆಚ್ಚ ಮಾಡಿ ಅಭಿವೃದ್ಧಿ ಮಾಡಿರುವ ಕೆರೆಗಳು ಸದ್ಯ ಮಾಲಿನ್ಯದಿಂದ ಕೂಡಿದ್ದು, ಬಿಡಬ್ಲ್ಯುಎಸ್‌ಎಸ್‌ಬಿಯ (BWSSB) ನಿರ್ಲಕ್ಷ್ಯವೇ ಇದಕ್ಕೆ ಕಾರಣವೆನ್ನಲಾಗುತ್ತಿದೆ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮೇಲ್ವಿಚಾರಣೆ ಕೊರತೆಯಿಂದ ಮಾಲಿನ್ಯ ತಾಣಗಳಾಗಿವೆ. ಜನವರಿಯಲ್ಲೇ 21 ಕೆರೆಗಳು ಅತ್ಯಂತ ಗರಿಷ್ಠ ಮಟ್ಟ ಮಾಲಿನ್ಯ ಹೊಂದಿವೆ ಎನ್ನಲಾಗುತ್ತಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಗರದಲ್ಲಿರುವ 106 ಕೆರೆಗಳಲ್ಲಿನ ನೀರಿನ ಗುಣಮಟ್ಟ ಅಳೆಯಲು ಸೆನ್ಸಾರ್‌ ಮಾಪನಗಳನ್ನು ಅಳವಡಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಕರ್ನಾಟಕದ ಅಭಿವೃದ್ಧಿಯ ಪಥಕ್ಕೆ ಕೊಡುಗೆ: ಪ್ರಧಾನಿ ಮೋದಿ

ಮೀನು ಸಾಕಲು ಯೋಗ್ಯವಲ್ಲ

ಒಟ್ಟಾರೆ 47 ಕೆರೆಗಳ ನೀರಿನ ಗುಣಮಟ್ಟ ಕಟ್ಟಕಡೆಯ ಇ-ಗ್ರೇಡ್‌ನಲ್ಲಿದೆ. ಅಂದರೆ, ಈ ಕೆರೆಗಳ ನೀರು ಲೋಹ, ಕಲ್ಮಶಯುಕ್ತ, ಕೈಗಾರಿಕೆ ಮಾಲಿನ್ಯಕಾರಕಗಳನ್ನು ಅತಿಹೆಚ್ಚಾಗಿ ಹೊಂದಿವೆ. ಮೀನುಗಳನ್ನು ಸಾಕಲು ಯೋಗ್ಯವಲ್ಲ. ಪ್ರತಿಯೊಂದು ಕೆರೆಗೆ ಕನಿಷ್ಠ 5 ಕೋಟಿಯನ್ನು ವೆಚ್ಚ ಮಾಡಲಾಗಿದೆ. ಆದರೂ ಅವು ಎಷ್ಟು ಹಾಳಾಗಿವೆ ಎನ್ನುವುದನ್ನು ಮಾಲಿನ್ಯ ನಿಯಂತ್ರಣ ಮಂಡಳಿಯ ದತ್ತಾಂಶವೇ ಸಾಬೀತು ಮಾಡುತ್ತದೆ.

ಕಾಯ್ದೆ ನಿರ್ವಹಣೆ ಇಲ್ಲ: ನಿಯಮಗಳನ್ನು ಗಾಳಿಗೆ ತೂರಿತಾ ಮಾಲಿನ್ಯ ನಿಯಂತ್ರಣ ಮಂಡಳಿ?

ನೀರು ಕಾಯ್ದೆ–1974 ಪ್ರಕಾರ ಎಲ್ಲ ರೀತಿಯ ಮಾಲಿನ್ಯವನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕಾದದ್ದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜವಾಬ್ದಾರಿ. ಆದರೆ, ಈ ಕಾರ್ಯವನ್ನು ಅದು ಮಾಡುತ್ತಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಯವರು ಜನರಿಗೆ ಮಾಹಿತಿಯನ್ನೂ ನೀಡುವುದಿಲ್ಲ ಅಂತ ಪರಿಸರ ವಾದಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: Kalghatgi Thottilu: ಪ್ರಧಾನಿ ಮೋದಿಗೆ ಉಡುಗೊರೆ ನೀಡಲು ಸಿದ್ಧವಾಯಿತು ಜಗತ್ಪ್ರಸಿದ್ಧ ಕಲಘಟಗಿ ತೊಟ್ಟಿಲು

ಕಲುಷಿತಗೊಂಡ ಕೆರಗಳ ವಿವಿರ ಹೀಗಿದೆ

ಅರಕೆರೆ, ಜಸವನಪುರ, ವೆಂಗಯ್ಯನಕೆರೆ, ದೊಡ್ಡನೆಕ್ಕುಂದಿ, ವರ್ತೂರು, ತುಬ್ರಹಳ್ಳಿ, ಗರುಡಾಚಾರ್ ಪಾಳ್ಯ, ಚಿನ್ನಪ್ಪನಹಳ್ಳಿ, ದ್ಯಾವಸಂದ್ರ, ವೈಟ್ ಫೀಲ್ಡ್ ಕೆರೆ, ಹೇರೋಹಳ್ಳಿ, ಚಿಕ್ಕಬಾಣಾವಾರ, ಕಮ್ಮಗೊಂಡನಹಳ್ಳಿ, ಬಂಡೆಮಠ ಕೆರೆ, ಹೆಬ್ಬಾಳ ಕೆರೆ, ಅಲ್ಲಾಳಸಂದ್ರ ಹಾಗೂ ಯಲಹಂಕ ಕೆರೆ.

ವರದಿ: ಅನಿಲ್ ಕಲ್ಕೆರೆ, ಟಿವಿ9, ಬೆಂಗಳೂರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:08 pm, Fri, 10 March 23

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ