ಕಲಬುರಗಿ: ಜಗಳ ಬಿಡಿಸಲು ಹೋದ ಪೊಲೀಸ್ ಪೇದೆ ಮೇಲೆ ಹಲ್ಲೆ

| Updated By: ವಿವೇಕ ಬಿರಾದಾರ

Updated on: Apr 07, 2024 | 9:11 PM

ಅಪಘಾತ ಪ್ರಕರಣವೊಂದನ್ನು ಬಗೆಹರಿ ವಾಪಸ್​ ಆಗುತ್ತಿದ್ದ ಕಲಬುರಗಿ ಜಿಲ್ಲೆಯ ಆಳಂದ ಠಾಣೆಯ ಪೊಲೀಸ್​ ಪೇದೆ ಮೇಲೆ ನಿಪ್ಪಾಣಿ ತಾಂಡಾ ಗ್ಯಾಂಗ್ ಹಲ್ಲೆ ಮಾಡಿದೆ. ಮತ್ತೊಂದು ಪ್ರಕರಣದಲ್ಲಿ ಕಲಬುರಗಿಯ ತಾವರಗೇರಾ ಕ್ರಾಸ್ ಬಳಿ ಹಾಡಹಗಲೆ ಇಬ್ಬರು ಮಹಿಳೆಯರ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿದೆ.

ಕಲಬುರಗಿ: ಜಗಳ ಬಿಡಿಸಲು ಹೋದ ಪೊಲೀಸ್ ಪೇದೆ ಮೇಲೆ ಹಲ್ಲೆ
ಸಾಂದರ್ಭಿಕ ಚಿತ್ರ
Follow us on

ಕಲಬುರಗಿ, ಏಪ್ರಿಲ್​ 07: ಜಗಳ ಬಿಡಿಸಲು ಹೋದ ಪೊಲೀಸ್​ ಪೇದೆ (Police Constable) ಮೇಲೆಯೇ ಹಲ್ಲೆ ಮಾಡಿರುವ ಘಟನೆ ಆಳಂದ (Aland) ಹೊರವಲಯದಲ್ಲಿ ನಡೆದಿದೆ. ಗಣಪತರಾವ್ ಘಂಟೆ ಹಲ್ಲೆಗೊಳಗಾದ ಆಳಂದ ಠಾಣೆ ಪೊಲೀಸ್​ ಪೇದೆ. ಆಳಂದ ಹೊರವಲಯದ ಚಿಲ್ಲಾಳ ಪೆಟ್ರೋಲ್ ಪಂಪ್ ಬಳಿ ಬೊಲೆರೊ ಹಾಗೂ ಆಟೋ ಮಧ್ಯೆ ಅಪಘಾತವಾಗಿತ್ತು. ಅಪಘಾತ ಸ್ಥಳಕ್ಕೆ ಪೊಲೀಸ್​ ಪೇದೆ ತೆರಳಿದ್ದರು. ಪ್ರಕರಣ ಬಗೆಹರಿಸಿ ಗಣಪತ್​ರಾವ್​ ಘಂಟೆ ಠಾಣೆಗೆ ತೆರಳುತ್ತಿರುವ ವೇಳೆ ಸ್ಥಳಕ್ಕೆ ನಿಪ್ಪಾಣಿ ತಾಂಡಾ ಗ್ಯಾಂಗ್ ಬಂದಿದ್ದು, ಟಂಟಂ ಆಟೋದವನ ಜೊತೆ ಗಲಾಟೆ ಆರಂಭಿಸಿದೆ. ಈ ಜಗಳ ಬಿಡಿಸಲು ಹೋದ ಪೊಲೀಸ್​ ಪೊಲೀಸ್​ ಪೇದೆ​ ಗಣಪತ್​ರಾವ್​ ಘಂಟೆ ಮೇಲೆ ನಿಪ್ಪಾಣಿ ತಾಂಡಾ ಗ್ಯಾಂಗ್​ನ ನಿಖಿಲ್, ಕರ್ಣ್ ಸೇರಿದಂತೆ ಎಂಟು ಜನರು ಹಲ್ಲೆ ಮಾಡಿದ್ದಾರೆ.

ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಹೆಚ್ಚುವರಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದು, ಆರು ಜನ ಯುವಕರು ಪರಾರಿಯಾಗಿದ್ದಾರೆ. ​ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹಜ್ ಯಾತ್ರೆಗೆ ತೆರಳಿದ್ದ ಮುಂಡಗೋಡದ ಒಂದೇ ಕುಟುಂಬದ ಮೂವರು ಸಾವು

ಕೂಲಿ ಕೆಲಸಕ್ಕೆಂದು ಹೋಗಿದ್ದ ಮಹಿಳೆಯರ ಹತ್ಯೆ

ಕಲಬುರಗಿಯ ತಾವರಗೇರಾ ಕ್ರಾಸ್ ಬಳಿ ಹಾಡಹಗಲೆ ಇಬ್ಬರು ಮಹಿಳೆಯರ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಶರಣಮ್ಮ(51), ಚಂದಮ್ಮ(53) ಕೊಲೆಯಾದವರು. ಕಲಬುರಗಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಕೂಲಿ ಕೆಲಸಕ್ಕೆಂದು ಹೋಗುತ್ತಿದ್ದ ವೇಳೆ ಕೋಲೆ ಮಾಡಲಾಗಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ.

ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ

ಕಲಬುರಗಿ ನಗರದ ಕೇಂದ್ರ ಕಾರಾಗೃಹದ ಮೇಲೆ ನಗರ ಪೊಲೀಸ್ ಆಯುಕ್ತ ಆರ್‌.ಚೇತನ್‌ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿದ್ದಾರೆ. ಚುನಾವಣೆ ಹೊತ್ತಲ್ಲಿ ಕೈದಿಗಳು ಜೈಲಿಂದಲೇ ಅಪರಾಧ ಚಟುವಟಿಕೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ. ದಾಳಿ ವೇಳೆ ಕೈದಿಗಳ ಬಳಿ ಗುಟ್ಕಾ, ನಗದು ಪತ್ತೆಯಾಗಿದೆ. ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.