AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kerala Crime: ತನ್ನ ನವಜಾತ ಶಿಶುವನ್ನು ಕೊಂದು ಮನೆಯ ಹಿಂದೆ ಹೂತಿಟ್ಟ ಮಹಿಳೆ, ಗುಂಡಿಯಿಂದ ಹೆಣವನ್ನು ಕಚ್ಚಿ ಮೇಲೆತ್ತಿದ ಬೀದಿ ನಾಯಿಗಳು

ನವಜಾತ ಶಿಶುವನ್ನು ಕೊಂದು ಹೂತಿಟ್ಟ 40 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದಲ್ಲಿ ನಡೆದಿದೆ. ಸ್ಥಳೀಯರು ಮೀನುಗಾರಿಕಾ ಕೇಂದ್ರದ ಬಳಿ ಬೀದಿ ನಾಯಿಗಳು ಹೊರತೆಗೆದ ಕೊಳೆದ ದೇಹವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.

Kerala Crime: ತನ್ನ ನವಜಾತ ಶಿಶುವನ್ನು ಕೊಂದು ಮನೆಯ ಹಿಂದೆ ಹೂತಿಟ್ಟ ಮಹಿಳೆ, ಗುಂಡಿಯಿಂದ ಹೆಣವನ್ನು ಕಚ್ಚಿ ಮೇಲೆತ್ತಿದ ಬೀದಿ ನಾಯಿಗಳು
ಪೊಲೀಸ್Image Credit source: India Today
ನಯನಾ ರಾಜೀವ್
|

Updated on: Jul 30, 2023 | 1:13 PM

Share

ನವಜಾತ ಶಿಶುವನ್ನು ಕೊಂದು ಹೂತಿಟ್ಟ 40 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದಲ್ಲಿ ನಡೆದಿದೆ. ಸ್ಥಳೀಯರು ಮೀನುಗಾರಿಕಾ ಕೇಂದ್ರದ ಬಳಿ ಬೀದಿ ನಾಯಿಗಳು ಹೊರತೆಗೆದ ಕೊಳೆದ ದೇಹವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳೀಯರು ಮಾಂಪಲ್ಲಿ ಫಿಶ್ ಲ್ಯಾಂಡಿಂಗ್ ಸೆಂಟರ್ ಬಳಿ ಮಗುವಿನ ಮೃತದೇಹವನ್ನು ಪತ್ತೆಹಚ್ಚಿದ ಬಳಿಕ ಜೂಲಿಯನ್ನು ಬಂಧಿಸಲಾಗಿದೆ ಎಂದು ಅಂಕುತೆಂಗು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಜೂಲಿ ಜುಲೈ 14 ರಂದು ತನ್ನ ಮನೆಯ ಸಮೀಪವಿರುವ ವಾಶ್ ರೂಂನಲ್ಲಿ ಮಗುವಿಗೆ ಜನ್ಮ ನೀಡಿದ್ದಳು ಮತ್ತು ಕತ್ತರಿಗಳಿಂದ ಹೊಕ್ಕುಳಬಳ್ಳಿಯನ್ನು ಕತ್ತರಿಸಿದ್ದಳು.

ಮಗು ಅಳಲು ಆರಂಭಿಸಿದಾಗ ಜೂಲಿ ಬಾಯಿ ಮತ್ತು ಮೂಗನ್ನು ಮುಚ್ಚಿಕೊಂಡಿದ್ದರಿಂದ ಉಸಿರುಗಟ್ಟಿ ಮಗು ಸಾವನ್ನಪ್ಪಿದೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಮತ್ತಷ್ಟು ಓದಿ: ಸರ್ಕಾರಿ ಆಸ್ಪತ್ರೆಯ ಬಚ್ಚಲಲ್ಲಿ ನವಜಾತ ಶಿಶು ಹತ್ಯೆ; ಆರೋಪಿ ತಾಯಿ ಅರೆಸ್ಟ್

ನಂತರ ಆಕೆಯ ಮನೆಯ ಸಮೀಪವೇ ಮಗುವಿನ ಶವವನ್ನು ಹೂತು ಹಾಕಿದ್ದಾಳೆ. ಜುಲೈ 18 ರಂದು ಅವರು ಸ್ಥಳಕ್ಕೆ ಭೇಟಿ ನೀಡಿದಾಗ ಮಗುವಿನ ದೇಹ ಕಾಣೆಯಾಗಿದೆ. ಬೀದಿ ನಾಯಿಗಳು ಅದನ್ನು ಹೊರ ತೆಗೆದಿತ್ತು. ಎಳೆದುಕೊಂಡು ಹೋಗಿ ಮೀನುಗಾರಿಕಾ ಕೇಂದ್ರದ ಬಳಿ ಹಾಕಿದ್ದವು, ಬಳಿಕ ಸ್ಥಳೀಯರು ಅದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಪೊಲೀಸರಿಗೆ ಸಿಕ್ಕ ಸುಳಿವಿನ ಮೇರೆಗೆ ಜೂಲಿಯನ್ನು ಬಂಧಿಸಲಾಯಿತು. ಆರಂಭದಲ್ಲಿ ಆಕೆ ಆರೋಪಗಳನ್ನು ನಿರಾಕರಿಸಿದರೂ, ಪೊಲೀಸರು ವೈಜ್ಞಾನಿಕ ಪುರಾವೆಗಳನ್ನು ಪ್ರಸ್ತುತಪಡಿಸಿದ ನಂತರ ಅಪರಾಧವನ್ನು ಒಪ್ಪಿಕೊಂಡಳು.

ವಿಧವೆಯಾಗಿದ್ದರೂ ಮಗುವಿನ ತಾಯಿಯಾಗಿದ್ದಾಳೆ ಎಂದು ಅವಮಾನ ಮಾಡುತ್ತಾರೆಂದು ಹೆದರಿ ಕೊಲೆ ಮಾಡಿರುವುದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾಳೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ